For Quick Alerts
ALLOW NOTIFICATIONS  
For Daily Alerts
 

T20 World Cup Points Table : ದ.ಆಫ್ರಿಕಾ ವಿರುದ್ಧ ಪಾಕ್‌ ಗೆದ್ದ ಬಳಿಕ ಪಾಯಿಂಟ್ಸ್ ಟೇಬಲ್‌ ಅಪ್‌ಡೇಟ್

Pakistan vs South africa

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನವು ಡೆಕ್ವರ್ತ್‌ ಲೂಯಿಸ್ ನಿಯಮದಡಿಯಲ್ಲಿ 33ರನ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿದೆ. ಈ ಮೂಲಕ ಪಾಕಿಸ್ತಾನದ ಸೆಮಿಫೈನಲ್ ಆಸೆ ಇನ್ನೂ ಜೀವಂತವಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಉತ್ತಮ ಆರಂಭ ಪಡೆಯದಿದ್ದರೂ ಸಹ ಇಫ್ತಿಕರ್ ಅಹಮದ್ ಮತ್ತು ಶದಾಬ್ ಖಾನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 185ರನ್ ಕಲೆಹಾಕಿತು. 20 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಶದಾಬ್ ಖಾನ್ 22 ಎಸೆತಗಳಲ್ಲಿ 52ರನ್ ಚಚ್ಚಿದರು.

ಶದಾಬ್ ಖಾನ್ ಆಟದ ನೆರವಿನಿಂದ ಪಾಕಿಸ್ತಾನ ಬೃಹತ್ ಮೊತ್ತ ಕಲೆಹಾಕುವುದರ ಜೊತೆಗೆ, ದ.ಆಫ್ರಿಕಾ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.

ಆರಂಭಿಕ ಆಘಾತ ಅನುಭವಿಸಿದ ಹರಿಣಗಳು ಬಹುಬೇಗನೆ ಮೊದಲ ನಾಲ್ಕು ವಿಕೆಟ್ ಕಳೆದುಕೊಂಡಿತು. ನಾಯಕ ಟೆಂಬಾ ಬವುಮಾ 19 ಎಸೆತಗಳಲ್ಲಿ 36 ರನ್ ಗಳಿಸಿದ್ದೇ ತಂಡದ ಪರ ಗರಿಷ್ಠ ಸ್ಕೋರ್ ಆಗಿತ್ತು. ಮಳೆಯಿಂದಾಗಿ ಪಂದ್ಯ ನಿಲ್ಲುವ ಮುನ್ನ ದ.ಆಫ್ರಿಕಾ 9 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 69ರನ್ ಕಲೆಹಾಕಿತು.

ಮಳೆಯಿಂದಾಗಿ ಓವರ್‌ಗಳು ಕಡಿತಗೊಂಡ ಪರಿಣಾಮ 14 ಓವರ್‌ಗೆ 142ರನ್ ಟಾರ್ಗೆಟ್ ನೀಡಲಾಯಿತು. ಈ ಮೂಲಕ ಅದಾಗಲೇ 69ರನ್ ಕಲೆಹಾಕಿದ್ದ ದ.ಆಫ್ರಿಕಾ ಉಳಿದ 5 ಓವರ್‌ಗಳಲ್ಲಿ 73ರನ್‌ ಕಲೆಹಾಕುವ ಗುರಿ ಮುಂದಿತ್ತು. ತುಂಬಾ ಕಠಿಣವಾದ ಈ ಗುರಿ ತಲುಪಲು ಹರಿಣಗಳ ಪರ ಪ್ರಮುಖ ಬ್ಯಾಟರ್‌ಗಳೇ ಉಳಿದಿರಲಿಲ್ಲ. ಪ್ರೈಮ್ ಬ್ಯಾಟರ್ ಡೇವಿಡ್ ಮಿಲ್ಲರ್ ಕೂಡ ಈ ಪಂದ್ಯದಲ್ಲಿರಲಿಲ್ಲ. ಪರಿಣಾಮ ದ.ಆಫ್ರಿಕಾ 9 ವಿಕೆಟ್ ನಷ್ಟಕ್ಕೆ 108 ರನ್ ಕಲೆಹಾಕಿತು. ಜೊತೆಗೆ 33ರನ್‌ಗಳಿಂದ ಸೋಲನ್ನ ಅನುಭವಿಸಿದೆ.

ಪಾಕಿಸ್ತಾನ ಪರ ಬ್ಯಾಟ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ಶದಾಬ್ ಖಾನ್‌ಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಲಭಿಸಿದೆ.

ಈ ಪಂದ್ಯದಲ್ಲಿ ಗೆಲುವಿನ ಬಳಿಕ ಪಾಕಿಸ್ತಾನ ತಂಡವು ಪಾಯಿಂಟ್ಸ್ ಟೇಬಲ್‌ನಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. ಆಡಿರುವ 4 ಪಂದ್ಯಗಳಲ್ಲಿ ತಲಾ 2 ಗೆಲುವು ಮತ್ತು ಸೋಲಿನ ಮೂಲಕ 4 ಪಾಯಿಂಟ್ಸ್ ಕಲೆಹಾಕಿದ್ದು, + 1.085 ನೆಟ್ ರನ್‌ರೇಟ್ ಹೊಂದಿದೆ.

ಪಂದ್ಯ ಸೋತರು ಸಹ ದ.ಆಫ್ರಿಕಾ ತಂಡವು ಉತ್ತಮ ನೆಟ್‌ರನ್‌ರೇಟ್‌ ಹೊಂದಿದ್ದು, 4 ಪಂದ್ಯಗಳಲ್ಲಿ 2 ಗೆಲುವು, 1ಸೋಲು ಹಾಗೂ ಹಾಗೂ 1 ಫಲಿತಾಂಶವಿಲ್ಲದೆ 5 ಪಾಯಿಂಟ್ಸ್‌ ಕಲೆಹಾಕಿದೆ. ನೆಟ್‌ ರನ್‌ರೇಟ್ +1.402ರಷ್ಟಿದೆ.

ಟೀಂ ಇಂಡಿಯಾ 6 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದು, ಕೊನೆಯ ಮೂರು ಸ್ಥಾನದಲ್ಲಿ ಬಾಂಗ್ಲಾದೇಶ, ಜಿಂಬಾಬ್ವೆ ಮತ್ತು ನೆದರ್ಲ್ಯಾಂಡ್ಸ್‌ ಸ್ಥಾನ ಪಡೆದಿವೆ.

ಸಂಪೂರ್ಣ ಪಾಯಿಂಟ್ಸ್ ಟೇಬಲ್ ಅಪ್‌ಡೇಟ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

Story first published: Thursday, November 3, 2022, 18:45 [IST]
Other articles published on Nov 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+