IND vs NED: ಮೊಹಮ್ಮದ್ ರಿಜ್ವಾನ್ ಹಿಂದಿಕ್ಕಿ ಈ ಸಾಧನೆ ಮಾಡಿದ ಸೂರ್ಯಕುಮಾರ್ ಯಾದವ್

ಗುರುವಾರ (ಅಕ್ಟೋಬರ್ 27) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್ 2022ರ ತಮ್ಮ ಎರಡನೇ ಸೂಪರ್ 12 ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ 56 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಭಾರತ ನೀಡಿದ್ದ 180 ರನ್‌ಗಳ ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 123 ರನ್ ಗಳಿಸಿ ಮಂಡಿಯೂರಿತು. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಅಮೋಘ ಅರ್ಧಶತಕದ ಸಹಾಯದಿಂದ ಭಾರತ ತಂಡವು 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿ, ಎದುರಾಳಿ ತಂಡಕ್ಕೆ 180 ರನ್‌ಗಳ ಬೃಹತ್ ಗುರಿ ನೀಡಿತ್ತು.
ನಂತರ ಭಾರತದ ಬೌಲರ್‌ಗಳು ಪರಿಪೂರ್ಣ ಪ್ರದರ್ಶನವನ್ನು ನೀಡಿದ ಕಾರಣ ನೆದರ್ಲೆಂಡ್ಸ್ ತಂಡವನ್ನು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 123 ರನ್‌ಗಳಿಗೆ ನಿರ್ಬಂಧಗೊಂಡಿತು.

25 ಎಸೆತಗಳಲ್ಲಿ 51 ರನ್ ಸಿಡಿಸಿದ ಸೂರ್ಯಕುಮಾರ್
ಇದೇ ವೇಳೆ ಟೂರ್ನಿಯಲ್ಲಿ ಭಾರತ ತನ್ನ 2ನೇ ಟಿ20 ಪಂದ್ಯದಲ್ಲಿ 25 ಎಸೆತಗಳಲ್ಲಿ 51 ರನ್ ಸಿಡಿಸಿದಾಗ ಸ್ಟಾರ್ ಇಂಡಿಯಾ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಟಿ20 ಪಂದ್ಯಗಳಲ್ಲಿ ಏಕೆ ತಾವು ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು ಎಂಬುದನ್ನು ತೋರಿಸಿದರು.
12ನೇ ಓವರ್‌ನ ಕೊನೆಯಲ್ಲಿ ರೋಹಿತ್ ಶರ್ಮಾ ವಿಕೆಟ್ ಪತನದ ನಂತರ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ಗೆ ಬಂದರು. ಆ ಸಮಯದಲ್ಲಿ, ನೆದರ್ಲ್ಯಾಂಡ್ಸ್ ಬೌಲರ್‌ಗಳ ಉತ್ತಮ ಬೌಲಿಂಗ್‌ನಿಂದ ರನ್ ಹರಿವು ಕಡಿತಗೊಂಡಿತು. ಇದರಿಂದಾಗಿ ಭಾರತ ದೊಡ್ಡ ಮೊತ್ತ ಕಲೆಹಾಕಲು ಹೋರಾಡುತ್ತಿತ್ತು. ದೊಡ್ಡ ಬೌಂಡರಿಗಳಿಗೂ ವಿರಾಟ್ ಕೊಹ್ಲಿ ಪರದಾಡುತ್ತಿದ್ದರು. ಆದರೆ ಅಷ್ಟರಲ್ಲಾಗಲೇ ಸೂರ್ಯಕುಮಾರ್ ತನ್ನ ಶಾಟ್‌ಗಳನ್ನು ಆಡಲಾರಂಭಿಸಿದರು ಮತ್ತು ಈ ಟಿ20 ವಿಶ್ವಕಪ್‌ನ ಮೊದಲ ಅರ್ಧಶತಕವನ್ನು ಬಾರಿಸಿದರು.

2022ರಲ್ಲಿ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ
ಅರ್ಧಶತಕ ಗಳಿಸುತ್ತಿದ್ದಂತೆಯೇ ಸೂರ್ಯಕುಮಾರ್ ಯಾದವ್ ಅವರು ಪಾಕಿಸ್ತಾನದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರನ್ನು ಹಿಂದಿಕ್ಕಿ 2022ರಲ್ಲಿ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ವರ್ಷ ಇಬ್ಬರಿಗೂ ಸಾಕಷ್ಟು ಪಂದ್ಯಗಳು ಉಳಿದಿರುವುದರಿಂದ ಆ ಸ್ಪರ್ಧೆಯು ಮುಂದುವರಿಯುತ್ತದೆ. ಆದರೆ ಸದ್ಯಕ್ಕೆ, ಸೂರ್ಯಕುಮಾರ್ ಯಾದವ್ ಗುರುವಾರ ನೆದರ್ಲ್ಯಾಂಡ್ಸ್ ವಿರುದ್ಧ ಅಜೇಯ 51 ರನ್ ಗಳಿಸುವ ಮೂಲಕ ರೇಸ್‌ನಲ್ಲಿ ಮುಂದಿದ್ದಾರೆ.
ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 2022ರಲ್ಲಿ 800ಕ್ಕೂ ಹೆಚ್ಚು ರನ್ ಗಳಿಸಲು ಕೇವಲ 19 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಇದುವರೆಗಿನ 19 ಇನ್ನಿಂಗ್ಸ್‌ಗಳಲ್ಲಿ ರಿಜ್ವಾನ್ 662 ಎಸೆತಗಳನ್ನು ಎದುರಿಸಿ, 51.56 ಸರಾಸರಿ ಮತ್ತು 124.62 ಸ್ಟ್ರೈಕ್ ರೇಟ್‌ನಲ್ಲಿ 825 ರನ್ ಗಳಿಸಿದ್ದಾರೆ. ಅವರು ಕ್ರಮವಾಗಿ 64 ಬೌಂಡರಿ ಮತ್ತು 19 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಸೂರ್ಯಕುಮಾರ್ ಯಾದವ್ 2022ರಲ್ಲಿ 867 ರನ್ ಗಳಿಸಿದ್ದಾರೆ
ಮತ್ತೊಂದೆಡೆ, ಭಾರತದ ಸೂರ್ಯಕುಮಾರ್ ಯಾದವ್ 2022ರಲ್ಲಿ ಇದುವರೆಗೆ 25 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ, 41.28ರ ಸರಾಸರಿಯಲ್ಲಿ 867 ರನ್ ಮತ್ತು 184.86 ಸ್ಟ್ರೈಕ್ ರೇಟ್ ಆಡಿದ್ದಾರೆ.
ಸೂರ್ಯಕುಮಾರ್ 469 ಎಸೆತಗಳನ್ನು ಎದುರಿಸಿದ್ದು, ಅದರಲ್ಲಿ ಒಂದು ಶತಕ, 7 ಅರ್ಧಶತಕಗಳೂ ಸೇರಿವೆ. ಅವರ ಒಟ್ಟು ರನ್‌ಗಳಲ್ಲಿ ಕ್ರಮವಾಗಿ 77 ಬೌಂಡರಿ ಮತ್ತು 52 ಸಿಕ್ಸರ್‌ಗಳು ಸೇರಿವೆ. ಬೌಂಡರಿ, ಸಿಕ್ಸರ್‌ಗಳು ಮತ್ತು ಸ್ಟ್ರೈಕ್‌ರೇಟ್‌ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸೂರ್ಯಕುಮಾರ್ ಅವರು, ಮೊಹಮ್ಮದ್ ರಿಜ್ವಾನ್‌ಗಿಂತ ಉತ್ತಮವಾಗಿ ಟಿ20 ಕ್ರಿಕೆಟ್ ಆಡಿದ್ದಾರೆ ಎಂದು ಒಪ್ಪಿಕೊಳ್ಳಲೇಬೇಕು.
ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದ್ದು ಮರೆಯುವಂತಿಲ್ಲ. ಇದು ರೋಹಿತ್ ಶರ್ಮಾಗೆ ಮೊದಲ ಅರ್ಧಶತಕವಾಗಿದ್ದರೆ, ವಿರಾಟ್ ಕೊಹ್ಲಿ ಈ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಬ್ಯಾಕ್ ಟು ಬ್ಯಾಕ್ ಅರ್ಧಶತಕವನ್ನು ಬಾರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications