T20 ವಿಶ್ವಕಪ್: ಸತತ 8 ಪಂದದಲ್ಲಿ ಕಡಿಮೆ ರನ್‌ಗೆ ಔಟಾದ ಟೆಂಬಾ ಬವುಮಾ, ಗರಿಷ್ಠ 10 ರನ್!

ಟಿ20 ಫಾರ್ಮೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾ ಕಳಪೆ ಫಾರ್ಮ್ ಮುಂದುವರಿಸಿದ್ದು, ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 10ರನ್‌ಗೆ ಔಟಾಗುವ ಮೂಲಕ ತನ್ನ ರನ್ ಬರವನ್ನ ಮತ್ತಷ್ಟು ತಾರಕಕ್ಕೆ ಕೊಂಡೊಯ್ದಿದ್ದಾರೆ. ಈ ಮೂಲಕ ಟೆಂಬಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಒಳಗಾಗಿದ್ದಾರೆ.
ಟಿ20 ಫಾರ್ಮೆಟ್‌ನಲ್ಲಿ ಇದುವರೆಗೂ ಅತ್ಯಂತ ಆಕರ್ಷಕ ಎನ್ನುವ ಮಟ್ಟಿಗೆ ಯಾವುದೇ ಪ್ರದರ್ಶನ ನೀಡದ ಟೆಂಬಾ ಬವುಮಾ ಚುಟುಕು ಕ್ರಿಕೆಟ್‌ನಲ್ಲಿ ಕಳಪೆ ಬ್ಯಾಟಿಂಗ್ ಮುಂದುವರಿಸಿದ್ದಾರೆ. 15 ಎಸೆತಗಳನ್ನ ಎದುರಿಸಿದ ಬವುಮಾ ಗಳಿಸಿದ್ದು 10ರನ್. ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಬವುಮಾ ದಿನೇಶ್ ಕಾರ್ತಿಕ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

ಬಾಂಗ್ಲಾದೇಶ ವಿರುದ್ಧ ಸಿಂಗಲ್ ಡಿಜಿಟ್‌ಗೆ ಔಟಾಗಿದ್ದ ಬವುಮಾ!
ಇದಕ್ಕೂ ಮುನ್ನ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲೂ ಸಿಂಗಲ್ ಡಿಜಿಟ್‌ಗೆ ಬವುಮಾ ಔಟಾಗಿದ್ದು, ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಾರೆ.
ಸಿಡ್ನಿಯಲ್ಲಿ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬವುಮಾ 6 ಎಸೆತಗಳಲ್ಲಿ 2ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಟಸ್ಕಿನ್ ಅಹ್ಮದ್ ಬೌಲಿಂಗ್‌ನಲ್ಲಿ ನುರುಲ್ ಹಸನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಸಿಡಿಸಿರೋದು ಏಕೈಕ ಅರ್ಧಶತಕ!
ಟೆಂಬಾ ಮತ್ತೊಮ್ಮೆ ಕೆಟ್ಟದಾಗಿ ಔಟಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗೆ ಒಳಗಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಏಕೈಕ ಅರ್ಧಶತಕ ದಾಖಲಿಸಿರುವ ಈತ ದಕ್ಷಿಣ ಆಫ್ರಿಕಾ ತಂಡದ ನಾಯಕ ಹೇಗೆ ಆದ್ರೂ ಎಂದೆಲ್ಲಾ ನೆಟ್ಟಿಗರು ಕಿಡಿಕಾರಿದ್ದಾರೆ.
ದಕ್ಷಿಣ ಆಫ್ರಿಕಾದ ಪರ ಖೋಟಾದ ನಾಯಕ ಈತ ಎಂದೆಲ್ಲಾ ಟೀಕೆ ಮಾಡಿರುವ ನೆಟ್ಟಿಗರು, ಚುಟುಕು ಫಾರ್ಮೆಟ್‌ನಲ್ಲಿ ಟೆಂಬಾ ಇನ್ನಿಂಗ್ಸ್ ಕುರಿತು ಕಿಡಿಕಾರಿದ್ರು.
ಟೆಂಬಾ ಬವುಮಾ ಟಿ20 ಕ್ರಿಕೆಟ್‌ನಲ್ಲಿ ಮಿಂಚಿನ ಆಟವಾಡುವ ಆಟಗಾರನಲ್ಲದಿದ್ರೂ, ದ.ಆಫ್ರಿಕಾ ತಂಡದ ಪರ ಓಪನರ್ ಆಗಿ ಕಣಕ್ಕಿಳಿಯುವುದು ಆಶ್ಚರ್ಯಕ್ಕೆ ಕಾರಣವಾಗಿದೆ. 115.42 ರ ಸ್ಟ್ರೈಕ್‌ರೇಟ್ ಹೊಂದಿರುವ ಬವುಮಾ ಇದುವರೆಗೂ 31 ಪಂದ್ಯಗಳಲ್ಲಿ 579ರನ್ ಕಲೆಹಾಕಿದ್ದು, ಕೇವಲ 1 ಅರ್ಧಶತಕ ದಾಖಲಿಸಿದ್ದಾರೆ.
ಟಿ20 ವಿಶ್ವಕಪ್‌ನ ಅತಿ ಹೆಚ್ಚು ಮೌಲ್ಯಯುತ ಆಟಗಾರ ಈತನೇ ಎಂದ ಮಾಜಿ ಕ್ರಿಕೆಟಿಗ

ಕಳೆದ 8 ಇನ್ನಿಂಗ್ಸ್‌ನಲ್ಲಿ ಟೆಂಬಾ ಗರಿಷ್ಠ ಸ್ಕೋರ್ 10 ರನ್
ಟೆಂಬಾ ಬವುಮಾ ಎಷ್ಟರ ಮಟ್ಟಿಗೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿ ಅವರ ಕಳೆದ ಎಂಟು ಇನ್ನಿಂಗ್ಸ್ ನೋಡಬಹುದಾಗಿದೆ. ಟೆಂಬಾ ಕಳೆದ ಎಂಟು ಇನ್ನಿಂಗ್ಸ್‌ನಲ್ಲಿ 8(10), 8(11), 0(4), 0(7), 3(8), 2(2), 2(6), 10(15)ರನ್ ಗಳಿಸಿದ್ದು ಅವರ ಕಳಪೆ ಬ್ಯಾಟಿಂಗ್‌ಗೆ ಸಾಕ್ಷಿಯಾಗಿದೆ.
ಟೆಂಬಾ ಬವುಮಾ 51 ಟೆಸ್ಟ್ ಪಂದ್ಯಗಳಲ್ಲಿ 1 ಶತಕ ದಾಖಲಿಸಿದ್ರೆ, 30 ಟಿ20 ಪಂದ್ಯಗಳಲ್ಲಿ ಕೇವಲ 1 ಅರ್ಧಶತಕ ಗಳಿಸಿದ್ರು ಸಹ ಈತ ಟಿ20 ಕ್ಯಾಪ್ಟನ್ ಆಗಿ ಹೇಗೆ ಉಳಿದಿದ್ದಾನೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications