ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಮಾಡಿದ 3 ವಿಶೇಷ ದಾಖಲೆಗಳು

ಐಸಿಸಿ ಟಿ20 ವಿಶ್ವಕಪ್ 2022ರಲ್ಲಿ ಟೀಂ ಇಂಡಿಯಾ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಭಾರತದ ಬ್ಯಾಟಿಂಗ್ ಪಿಲ್ಲರ್ ಆಗಿದ್ದರೆ ಅಂದರೆ ತಪ್ಪಾಗಲಾರದು. ಭಾರತದ ಪರ ಮರೆಯಲಾಗದ ಇನ್ನಿಂಗ್ಸ್ ಆಡಿರುವ ವಿರಾಟ್ ಪ್ರಸ್ತುತ ಲೀಡಿಂಗ್ ರನ್ ಸ್ಕೋರರ್ ಕೂಡ ಆಗಿದ್ದಾರೆ.
ಪ್ರಸ್ತುತ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋತ ಬಳಿಕ ಪ್ರಶಸ್ತಿಯ ಕನಸನ್ನು ಕೈ ಬಿಟ್ಟಿತು. ಆದ್ರೂ ವಿರಾಟ್ ಫಾರ್ಮ್‌ಗೆ ಮರಳಿರುವುದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಖುಷಿ ತರಿಸಿದೆ. 6 ಪಂದ್ಯಗಳಲ್ಲಿ 98.67ರ ಸರಾಸರಿಯಲ್ಲಿ 136.41ರ ಸ್ಟ್ರೈಕ್‌ರೇಟ್‌ನಲ್ಲಿ ವಿರಾಟ್ ಕೊಹ್ಲಿ 296 ರನ್ ಕಲೆಹಾಕಿದ್ದಾರೆ. ಕೊಹ್ಲಿ ಈ ಟೂರ್ನಮೆಂಟ್‌ನಲ್ಲಿ ಒಟ್ಟು 4 ಅರ್ಧಶತಕ ದಾಖಲಿಸಿದ್ದು ಇದರಲ್ಲಿ ಎರಡು ಅಜೇಯ ಅರ್ಧಶತಕ ಒಳಗೊಂಡಿವೆ.
ಈಗಾಗಲೇ 2014 ಮತ್ತು 2016ರ ಟಿ20 ವಿಶ್ವಕಪ್‌ನಲ್ಲಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿರುವ ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್‌ನಲ್ಲೂ ರೇಸ್‌ನಲ್ಲಿ ಮುಂದಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅರ್ಧಶತಕ ದಾಖಲಿಸಿದ ಬಳಿಕ ವಿರಾಟ್ ಅನೇಕ ದಾಖಲೆಗಳನ್ನ ತನ್ನ ಹೆಸರಿಗೆ ದಾಖಲಿಸಿದ್ದಾರೆ. ಹೆಚ್ಚು ಸುದ್ದಿಯಾಗದ ವಿರಾಟ್‌ನ ಮೂರು ವಿಶೇಷ ದಾಖಲೆಗಳು ಈ ಕೆಳಗಿವೆ.

200ನೇ ಬಾರಿ 50ಕ್ಕೂ ಹೆಚ್ಚು ರನ್ ಕಲೆಹಾಕಿದ ವಿರಾಟ್ ಕೊಹ್ಲಿ
ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 40 ಎಸೆತಗಳಲ್ಲಿ 50 ರನ್ ಕಲೆಹಾಕಿದ ವಿರಾಟ್, ನಾಲ್ಕನೇ ಬಾರಿಗೆ ಪ್ರಸ್ತುತ ವಿಶ್ವಕಪ್‌ನಲ್ಲಿ ಅರ್ಧಶತಕ ದಾಖಲಿಸಿದರು. ಇದರ ಜೊತೆಗೆ ವಿರಾಟ್ ಮೂರು ಫಾರ್ಮೆಟ್‌ನಲ್ಲಿ 200ನೇ ಬಾರಿ 50ಕ್ಕೂ ಹೆಚ್ಚು ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ.
ಪ್ರಸ್ತುತ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಅಜೇಯ 82, ನೆದರ್ಲ್ಯಾಂಡ್ಸ್ ಹಾಗೂ ಬಾಂಗ್ಲಾದೇಶ ವಿರುದ್ಧ ಅರ್ಧಶತಕದ ಆಟವನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಜಿಂಬಾಬ್ವೆ ವಿರುದ್ಧ ಮಾತ್ರ 26 ರನ್ ಕಲೆಹಾಕಿದ್ದಾರೆ.
ಈ ವಿಶ್ವಕಪ್‌ನಲ್ಲಿ ನಾಲ್ಕು ಅರ್ಧಶತಕದ ಮೂಲಕ ಕಿಂಗ್ ಕೊಹ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಮೂರು ಫಾರ್ಮೆಟ್‌ನಿಂದ 200 ಬಾರಿ ಅರ್ಧಶತಕಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ ಎಂಬ ಸಾಧನೆ ಈತನ ಮುಡಿಗೇರಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ಗಿಂತ 64, 50+ ಸ್ಕೋರ್ ಹಿಂದಿದ್ದಾರೆ.
ವಿರಾಟ್ ಫಾರ್ಮ್ ಹೀಗೆಯೇ ಮುಂದುವರೆದ್ರೆ ಸಚಿನ್‌ರ ಆ ದಾಖಲೆಯು ನೆಲಸಮವಾಗುವುದರಲ್ಲಿ ಅನುಮಾನವಿಲ್ಲ. ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 55, ಏಕದಿನ ಕ್ರಿಕೆಟ್‌ನಲ್ಲಿ 107, ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 38 ಬಾರಿ 50ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇದರಲ್ಲಿ 71 ಶತಕಗಳನ್ನಾಗಿ ಪರಿವರ್ತಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 119 ಬಾರಿ 50ಕ್ಕೂ ಹೆಚ್ಚು ರನ್ ಕಲೆಹಾಕಿದ್ದು, ಏಕದಿನ ಕ್ರಿಕೆಟ್ ಫಾರ್ಮೆಟ್‌ನಲ್ಲಿ ದಾಖಲೆಯ ಮಟ್ಟಿಗೆ 145 ಬಾರಿ 50 ಪ್ಲಸ್ ಸ್ಕೋರ್ ಕಲೆಹಾಕಿದ್ದಾರೆ.
ಮುಂದಿನ T20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಈ ಮುಖಗಳನ್ನ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್

ICC ಟೂರ್ನಿಯಲ್ಲಿ ಅತಿ ಹೆಚ್ಚು 50+ ಸ್ಕೋರ್ ಮಾಡಿದ ಕೊಹ್ಲಿ
ICC ಟೂರ್ನಮೆಂಟ್‌ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು 50+ ಸ್ಕೋರ್ ಮಾಡಿದ ದಾಖಲೆಯನ್ನ ತಮ್ಮ ಹೆಸರಿಗೆ ಈಗಾಗಲೇ ದಾಖಲಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಕೊಹ್ಲಿ ಸಿಡಿಸಿದ ಅರ್ಧಶತಕ ಐಸಿಸಿ ಟೂರ್ನಮೆಂಟ್‌ನಲ್ಲಿ 27ನೇ 50+ ಸ್ಕೋರ್ ಆಗಿದೆ. (ಏಕದಿನ ಮತ್ತು ಟಿ20)
ಸಚಿನ್ ತೆಂಡೂಲ್ಕರ್ ಐಸಿಸಿ ಟೂರ್ನಿಗಳಲ್ಲಿ 61 ಪಂದ್ಯಗಳನ್ನ ಆಡಿದ್ದು 49.43ರ ಸರಾಸರಿಯಲ್ಲಿ 2719 ರನ್ ಕಲೆಹಾಕಿದ್ದಾರೆ. ಇದರಲ್ಲಿ 7 ಶತಕ ಹಾಗೂ 16 ಅರ್ಧಶತಕ ಒಳಗೊಂಡಿದ್ದು, ವೈಯಕ್ತಿಕ ಗರಿಷ್ಠ 152ರನ್ ಕಲೆಹಾಕಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 1996ರ ಏಕದಿನ ವಿಶ್ವಕಪ್ ಮತ್ತು 2003ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದರು. 2003ರ ವಿಶ್ವಕಪ್‌ನಲ್ಲಿ 673ರನ್ ಕಲೆಹಾಕಿದ ಸಚಿನ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಆಗಿ ಮಿಂಚಿದ್ದರು. ಆದ್ರೆ ಗಮನಿಸಬೇಕಾದ ವಿಷಯ ಏನಂದ್ರೆ ತೆಂಡೂಲ್ಕರ್ ಯಾವುದೇ ಟಿ20 ವಿಶ್ವಕಪ್ ಆಡಿಲ್ಲ.
ಟೀಂ ಇಂಡಿಯಾ ಕಾಲೆಳೆದು ಪಾಕ್ ಪ್ರಧಾನಿ ಟ್ವೀಟ್: ನನಗೇನು ಗೊತ್ತಿಲ್ಲ ಎಂದ ಬಾಬರ್ ಅಜಂ

ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು 50+ ಸ್ಕೋರ್ ಮಾಡಿರುವ ವಿರಾಟ್
ಇನ್ನು ವಿಶೇಷ ದಾಖಲೆ ಏನೆಂದ್ರೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು 50+ ದಾಖಲೆ ಮಾಡಿದ್ದಾರೆ. ಈ ಮೂಲಕ ಆಸಿಸ್ ತಂಡದ ಆ್ಯರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ದಾಖಲೆಯನ್ನೇ ನೆಲಸಮ ಮಾಡಿದ್ದಾರೆ.
ವಿದೇಶಿ ನೆಲದಲ್ಲಿ ಆ ದೇಶದ ಆಟಗಾರರಿಗಿಂತ ಹೆಚ್ಚು 50+ ಸ್ಕೋರ್ ಮಾಡಿರುವುದು ವಿರಾಟ್ ಕೊಹ್ಲಿ ಬ್ಯಾಟಿಂಗ್ ಶ್ರೇಷ್ಟತೆಗೆ ಕನ್ನಡಿಯಾಗಿದೆ. ವೇಗಿಗಳಿಗೆ ಸ್ವರ್ಗವಾದ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ರನ್‌ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗಿರುವಾಗ ಕಿಂಗ್ ಕ್ಲೊಹ್ಲಿ ಆಸ್ಟ್ರೇಲಿಯಾದಲ್ಲಿ ಮಾಸ್ಟರ್ ಆಗಿ ಮೆರೆದಿದ್ದಾರೆ.
ವಿರಾಟ್ ಕೊಹ್ಲಿ 5 ಬಾರಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟೂರ್ನಮೆಂಟ್‌ನಲ್ಲಿ 50ಕ್ಕೂ ಹೆಚ್ಚು ರನ್ ಕಲೆಹಾಕಿದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಪಿಚ್‌ನಲ್ಲಿ ವಿರಾಟ್ 17 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 74.70 ಸರಾಸರಿಯಲ್ಲಿ 747 ರನ್ ಕಲೆಹಾಕಿದ್ದಾರೆ. ಇವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್ 141.20ರಷ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications