ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಕಾಲೆಳೆದು ಪಾಕ್ ಪ್ರಧಾನಿ ಟ್ವೀಟ್: ನನಗೇನು ಗೊತ್ತಿಲ್ಲ ಎಂದ ಬಾಬರ್ ಅಜಂ

Pakistan pm tweet

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲಿನ ಕುರಿತಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಟ್ವೀಟ್ ಮಾಡಿರುವುದರ ಕುರಿತಾಗಿ ನನಗೇನು ತಿಳಿದಿಲ್ಲ ಎಂದು ಪಾಕ್ ತಂಡದ ನಾಯಕ ಬಾಬರ್ ಅಜಮ್ ಹೇಳಿದ್ದಾರೆ.

ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಭಾರತವು, ಇಂಗ್ಲೆಂಡ್ ತಂಡದ ವಿರುದ್ಧ 10 ವಿಕೆಟ್‌ಗಳ ಸೋಲಿನ ಬಳಿಕ ಪಾಕ್ ಪ್ರಧಾನಿ '' ಈ ಭಾನುವಾರ 152/0 vs 170/0 '' ಎಂದು ಟ್ವೀಟ್ ಮಾಡಿದ್ದರು. ಇದರರ್ಥ ಟೀಂ ಇಂಡಿಯಾ 2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳ ಸೋಲನ್ನ ಅನುಭವಿಸಿತ್ತು. ಅಂದೂ ಕೂಡ ಭಾರತದ ಬೌಲರ್‌ಗಳು ಒಂದು ವಿಕೆಟ್ ಪಡೆಯಲು ಸಾಧ್ಯವಾಗದ ಹಿನ್ನಲೆಯಲ್ಲಿ ಹೀನಾಯ ಸೋಲು ಕಂಡಿತು. ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಪಾಕ್ ತಂಡವನ್ನ ಗೆಲುವಿನ ದಡ ತಲುಪಿಸಿದ್ರು.

ಮುಂದಿನ T20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಈ ಮುಖಗಳನ್ನ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್ಮುಂದಿನ T20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಈ ಮುಖಗಳನ್ನ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್

ಇದಾದ ಬಳಿಕ ಇತ್ತೀಚೆಗೆ ಟೀಂ ಇಂಡಿಯಾ ನೀಡಿದ್ದ 169ರನ್‌ಗಳ ಗುರಿಯನ್ನು ಇಂಗ್ಲೆಂಡ್ ಒಂದು ವಿಕೆಟ್ ಕಳೆದುಕೊಳ್ಳದೆ ಗುರಿ ತಲುಪಿ 170/0 ಗಳಿಸಿತು. ಈ ಹಿನ್ನಲೆಯಲ್ಲಿ ಪಾಕ್ ಪ್ರಧಾನಿ ಈ ಭಾನುವಾರ 152/0 vs 170/0 ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದ್ದಲ್ಲದೆ, ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ಹಿನ್ನಲೆಯಲ್ಲಿ ಫೈನಲ್‌ಗೂ ಮುನ್ನ ಪೂರ್ವ ಪತ್ರಿಕಾಗೋಷ್ಟಿಯಲ್ಲಿ ಪಾಕ್ ತಂಡದ ನಾಯಕ ಬಾಬರ್ ಅಜಮ್‌ಗೆ ಈ ಕುರಿತಾಗಿ ಪ್ರಶ್ನಿಸಲಾಗಿದೆ. ಆದ್ರೆ ಬಾಬರ್ ಅಜಮ್‌ಗೆ ಈ ವಿಚಾರವೇ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

'' ನಮಗೆ ಆ ರೀತಿಯಾದ ಒತ್ತಡವೇನು ಇಲ್ಲ. ಆದ್ರೆ, ಕ್ಷಮಿಸಿ ನಾನು ಆ ಟ್ವೀಟ್ ಅನ್ನು ನೋಡಿಲ್ಲ ಹಾಗೂ ಆ ಕುರಿತಾಗಿ ಯಾವುದೇ ಜ್ಞಾನ ಇಲ್ಲ. ಆದ್ರೆ ನಾವು ಎದುರಾಳಿ ವಿರುದ್ಧ ನಮ್ಮ ಬೆಸ್ಟ್ ಪ್ರದರ್ಶನ ತೋರಿಸಲಿದ್ದೇವೆ'' ಎಂದು ಬಾಬರ್ ಅಜಮ್ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

1992ರ ಏಕದಿನ ವಿಶ್ವಕಪ್ ಬಳಿಕ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮೊದಲ ಬಾರಿಗೆ ವಿಶ್ವಕಪ್‌ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಕೆಳಮಟ್ಟದಲ್ಲಿದ್ದ ಪಾಕಿಸ್ತಾನ ಪ್ರಸ್ತುತ ಹೇಗೆ ಫೈನಲ್ ಪ್ರವೇಶಿಸಿದೆಯೋ ಹಾಗೆಯೇ, 1992ರಲ್ಲೂ ಫೈನಲ್‌ ಪ್ರವೇಶಿಸಿ, ಇಂಗ್ಲೆಂಡ್ ವಿರುದ್ಧ ಗೆದ್ದು ಚೊಚ್ಚಲ ಐಸಿಸಿ ಟ್ರೋಫಿ ಗೆದ್ದಿತು. ಇದೀಗ ಇತಿಹಾಸ ಮರುಕಳುಸಿತ್ತಾ ಎಂಬುದು ಭಾನುವಾರರ ತಿಳಿದುಬರಲಿದೆ.

Story first published: Saturday, November 12, 2022, 17:28 [IST]
Other articles published on Nov 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X