ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ T20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಈ ಮುಖಗಳನ್ನ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್

Team india

ಐಸಿಸಿ ಟಿ20 ವಿಶ್ವಕಪ್ 2022ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಸೆಮಿಫೈನಲ್‌ ಹಂತಕ್ಕೆ ತನ್ನ ಅಭಿಯಾನ ಕೊನೆಗೊಳಿಸಿತು. ಆಟ ಎಂದ ಮೇಲೆ ಗೆಲುವು-ಸೋಲು ಸಹಜವಾಗಿದ್ದು, 10 ವಿಕೆಟ್‌ಗಳ ಹೀನಾಯ ಸೋಲನ್ನು ಅಭಿಮಾನಿಗಳು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇಂಗ್ಲೆಂಡ್‌ ತಂಡದ ಒಂದು ವಿಕೆಟ್ ಪಡೆಯಲಾರದೆ ಮುಗ್ಗರಿಸಿದ ಟೀಂ ಇಂಡಿಯಾ ಕುರಿತಾಗಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಭಾರತದ ಸೋಲಿಗೆ ಕಾರಣ ಏನು ಎಂದು ವಿಮರ್ಷೆ ಶುರುವಾಗಿದೆ. ಅನೇಕ ಮಾಜಿ ಕ್ರಿಕೆಟಿಗರು ತಮ್ಮದೇ ಆದ ರೀತಿಯಲ್ಲಿ ತಂಡದ ಪ್ರದರ್ಶನದ ಕುರಿತಾಗಿ ಕಾಮೆಂಟ್‌ಗಳನ್ನ ಮಾಡುತ್ತಿದ್ದು, ಬಹುತೇಕರು ತಂಡದಲ್ಲಿ ಭಾರೀ ಬದಲಾವಣೆಯನ್ನೇ ಬಯಸಿದ್ದಾರೆ. ಇದ್ರಿಂದ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಹೊರತಾಗಿಲ್ಲ.

ಕೆಲವರನ್ನ ಮತ್ತೆ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್

ಕೆಲವರನ್ನ ಮತ್ತೆ ನೋಡಲು ಬಯಸುವುದಿಲ್ಲ: ವೀರೇಂದ್ರ ಸೆಹ್ವಾಗ್

ಐಸಿಸಿ T20 ವಿಶ್ವಕಪ್‌ 2024ರ ವೇಳೆಯಲ್ಲಿ ಪ್ರಸ್ತುತ ಟೀಂ ಇಂಡಿಯಾದಲ್ಲಿರುವ ಕೆಲವು ಹಿರಿಯ ಆಟಗಾರರನ್ನ ಮತ್ತೆ ನೋಡಲು ಬಯಸುವುದಿಲ್ಲ ಎಂದು ವೀರೇಂದ್ರ ಸೆಹ್ವಾಗ್ ಟೀಕಿಸಿದ್ದಾರೆ. ಟೀಂ ಇಂಡಿಯಾದಲ್ಲಿ ಅನುಭವಿ ಎಂದು ಕರೆಸಿಕೊಂಡಿರುವ ಹಿರಿಯ ಆಟಗಾರರು ಯಾವುದೇ ಕಾರಣಕ್ಕೂ ಮುಂದಿನ ವಿಶ್ವಕಪ್‌ನಲ್ಲಿ ಮುಂದುವರೆಯಬಾರದು ಎಂದಿದ್ದಾರೆ.

T20 World Cup 2022 Final : ಮಳೆಯಿಂದಾಗಿ ನ.13ರಂದು ಫೈನಲ್ ನಡೆಯಲಿದ್ರೆ, ಸೋಮವಾರ ಎಷ್ಟು ಓವರ್ ಪಂದ್ಯ? ಏನು ಸಮಯ?

2007ರ ಟಿ20 ವಿಶ್ವಕಪ್ ರೀತಿಯಲ್ಲಿ ಯುವ ತಂಡ ಕಟ್ಟಬೇಕು!

2007ರ ಟಿ20 ವಿಶ್ವಕಪ್ ರೀತಿಯಲ್ಲಿ ಯುವ ತಂಡ ಕಟ್ಟಬೇಕು!

2007ರ ಟಿ20 ವಿಶ್ವಕಪ್‌ ರೀತಿಯಲ್ಲಿ ಹೊಚ್ಚ ಹೊಸ ತಂಡವನ್ನು ಯುವ ಪಡೆಯನ್ನು ಮುಂದಿನ ವಿಶ್ವಕಪ್‌ನಲ್ಲಿ ಕಾಣಬಯಸುತ್ತೇನೆ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. 2007ರಂತೆ ಯುವ ಆಟಗಾರರನ್ನ ಒಂದುಗೂಡಿಸಿ ವಿಶ್ವಕಪ್‌ಗೆ ಕಳುಹಿಸಿದ್ರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

'' ನಾನು ಮೈಂಡ್‌ಸೆಟ್‌ ಕುರಿತಾಗಿ ಮಾತನಾಡುವುದಿಲ್ಲ, ಆದ್ರೆ ವೈಯಕ್ತಿಕವಾಗಿ ನಾನು ಬದಲಾವಣೆಯನ್ನ ಬಯಸುತ್ತೇನೆ. ಮುಂದಿನ ವಿಶ್ವಕಪ್‌ ವೇಳೆಗೆ ಕೆಲವು ಮುಖಗಳನ್ನು ನೋಡಲು ಬಯಸುವುದಿಲ್ಲ. 2007ರ ಟಿ20 ವಿಶ್ವಕಪ್‌ನಲ್ಲಿ ಇದು ಸಾಧ್ಯವಾಗಿದೆ. ಸ್ಟಾರ್ ಆಟಗಾರರು ಅಷ್ಟೆಲ್ಲಾ ಅನುಭವಹೊಂದಿದ್ದರೂ ಟಿ20 ವಿಶ್ವಕಪ್ ಆಡಲು ಹೋಗಲಿಲ್ಲ. ಯುವಕರನ್ನು ಹೊಂದಿದ್ದ ತಂಡವು ವಿಶ್ವಕಪ್‌ಗೆ ತೆರಳಿದ್ದಲ್ಲದೆ ಯಾವುದೇ ನಿರೀಕ್ಷೆಗಳನ್ನು ಹೊಂದಿರಲಿಲ್ಲ. ನಾನು ಅದೇ ರೀತಿಯ ತಂಡವನ್ನು ಮುಂದಿನ ಟಿ20 ವಿಶ್ವಕಪ್‌ನಲ್ಲಿ ನೋಡಲು ಬಯಸುತ್ತೇನೆ. ಏಕೆಂದರೆ ಯಾರೂ ಕೂಡ ಅವರು ಗೆಲ್ಲುತ್ತಾರೆ ಎಂದು ನಿರೀಕ್ಷಿಸುವುದಿಲ್ಲ, ಆದ್ರೆ ಆ ತಂಡವೇ ನಮ್ಮ ಭವಿಷ್ಯ'' ಎಂದು ಸೆಹ್ವಾಗ್ ಕ್ರಿಕ್‌ಬಝ್‌ಗೆ ತಿಳಿಸಿದ್ದಾರೆ.

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಹೊರಬಿದ್ದ ಭಾರತಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು?

ಟೀಂ ಮ್ಯಾನೇಜ್‌ಮೆಂಟ್ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿದೆ: ಸೆಹ್ವಾಗ್

ಟೀಂ ಮ್ಯಾನೇಜ್‌ಮೆಂಟ್ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿದೆ: ಸೆಹ್ವಾಗ್

ತನ್ನ ಮಾತನ್ನು ಮುಂದುವರಿಸಿರುವ ವೀರೇಂದ್ರ ಸೆಹ್ವಾಗ್ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್, ಆಯ್ಕೆಗಾರರು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ. ಪ್ರಸ್ತುತ ವಿಶ್ವಕಪ್‌ನಲ್ಲಿ ಆಡಿದ ಕೆಲವು ಆಟಗಾರರನ್ನು ತಂಡದಿಂದ ಹೊರಹಾಕಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆದ್ರೆ ವೀರೇಂದ್ರ ಸೆಹ್ವಾಗ್ ಯಾವ ಆಟಗಾರರನ್ನು ತಂಡದಿಂದ ಕೈ ಬಿಡಬೇಕು ಎಂದು ಹೆಸರಿಸಿಲ್ಲ. ಆದ್ರೆ ಕಳಪೆ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಮುಂದಿನ ವಿಶ್ವಕಪ್‌ ರೇಸ್‌ನಿಂದ ಹೊರಗುಳಿಯಬಹುದು. ಒಂದು ವೇಳೆ ತಂಡವು ಅದೇ ಆಟಗಾರರನ್ನ ಆಡಿಸಿದ್ರೆ, ಅದೇ ಪ್ರಯತ್ನ ಮಾಡಿದ್ದಲ್ಲಿ, ಫಲಿತಾಂಶವು ಈಗಿನಂತೆ ಸೋಲಾಗಿರುತ್ತದೆ ಎಂದಿದ್ದಾರೆ.

Story first published: Saturday, November 12, 2022, 12:58 [IST]
Other articles published on Nov 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X