For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ವಿರುದ್ಧ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಟಿ20 ರ್ಯಾಂಕಿಂಗ್ ಏರಿಕೆ: ಇನ್ನೇನಿದ್ರೂ ನಂಬರ್ 1 ಟಾರ್ಗೆಟ್‌

Virat kohli

ಐಸಿಸಿ ಟಿ20 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ತನ್ನ ವೃತ್ತಿ ಜೀವನದ ಬೆಸ್ಟ್ ಇನ್ನಿಂಗ್ಸ್‌ ಆಡುವ ಮೂಲಕ ಭಾರತಕ್ಕೆ ಗೆಲುವು ತಂದಿಟ್ಟರು. 53 ಎಸೆತಗಳಲ್ಲಿ ಅಜೇಯ 82 ರನ್ ಕಲೆಹಾಕಿದ ವಿರಾಟ್ ಅಮೋಘ ಆಟವಾಡುವ ಮೂಲಕ ರಣರೋಚಕ ಗೆಲುವು ತಂದುಕೊಟ್ಟರು. ವಿರಾಟ್ ಕೊಹ್ಲಿ ಅಬ್ಬರಕ್ಕೆ ಐಸಿಸಿ ಟಿ20 ರ್ಯಾಂಕಿಂಗ್ ಕೂಡ ಏರಿಕೆಯಾಗಿದೆ.

ಕಳೆದ ಎರಡು ವರ್ಷಗಳ ಕಾಲ ಮಂಕಾಗಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಚೊಚ್ಚಲ ಟಿ20 ಶತಕ ದಾಖಲಿಸಿದ ಬಳಿಕ ಫಾರ್ಮ್‌ಗೆ ಮರಳಿದ್ದಾರೆ. ಇದಕ್ಕೆ ಉದಾಹರಣೆಯೇ ಪಾಕ್‌ ವಿರುದ್ಧ ಅತ್ಯಮೋಘ ಪ್ರದರ್ಶನವಾಗಿದೆ. ವಿರಾಟ್ ಕೊಹ್ಲಿ ಪ್ರದರ್ಶನಕ್ಕೆ ಗಿಫ್ಟ್ ಆಗಿ ಈಗ ರ್ಯಾಂಕಿಂಗ್ ಕೂಡ ಏರಿಕೆಗೊಂಡಿದೆ.

ಮೆಲ್ಬರ್ನ್‌ನ ಎಂಸಿಜಿಯಲ್ಲಿ ಅದ್ಭುತ ಆಟವಾಡಿದ ವಿರಾಟ್ ಕೊಹ್ಲಿ

ಮೆಲ್ಬರ್ನ್‌ನ ಎಂಸಿಜಿಯಲ್ಲಿ ಅದ್ಭುತ ಆಟವಾಡಿದ ವಿರಾಟ್ ಕೊಹ್ಲಿ

53 ಎಸೆತಗಳಲ್ಲಿ ಅಜೇಯ 82 ರನ್ ಕಲೆಹಾಕಿದ ವಿರಾಟ್ ಅಮೋಘ ಆಟವಾಡುವ ಮೂಲಕ ಎಂಸಿಜಿಯಲ್ಲಿ ಅಬ್ಬರದ ಆಟವಾಡಿದ್ರು. ವಿರಾಟ್ ಕೊಹ್ಲಿಯ ಈ ಬೆಸ್ಟ ಇನ್ನಿಂಗ್ಸ್ ನೋಡಿದ ಮೇಲೆ ಅನೇಕ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಕೊಹ್ಲಿಯ ಪ್ರದರ್ಶನವನ್ನ ಹಾಡಿ ಹೊಗಳಿದ್ದಾರೆ. ಇಂತಹ ಒತ್ತಡದ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿಗಲ್ಲದೆ ಮತ್ಯಾರಿಗೂ ಈ ರೀತಿಯ ಆಟವಾಡಲು ಸಾಧ್ಯವಿಲ್ಲ ಎಂದೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದು ಕೇವಲ ಕೊಹ್ಲಿ ಬೆಸ್ಟ್‌ ಇನ್ನಿಂಗ್ಸ್‌ ಅಷ್ಟೇ ಅಲ್ಲ, ಭಾರತದ ಬೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ ಎಂದು ಪ್ರಶಂಸಿದ್ದರು. ಇದೀಗ ಕೊಹ್ಲಿ ರ್ಯಾಂಕಿಂಗ್‌ ಬಡ್ತಿ ಪಡೆದಿದ್ದಾರೆ.

ಕೊಹ್ಲಿ ನಿವೃತ್ತಿ ಆಗೋವರೆಗೂ ಪಾಕಿಸ್ತಾನ ಗೆಲ್ಲಲ್ಲ ಎಂಬುದು ಆತನಿಗೆ ಗೊತ್ತಿದೆ: ಅಖ್ತರ್ ವಿರುದ್ಧ ನೆಟ್ಟಿಗರು ಟ್ರೋಲ್

ಐದು ಸ್ಥಾನ ಏರಿಕೆ ಕಂಡ ವಿರಾಟ್ ಕೊಹ್ಲಿ

ಐದು ಸ್ಥಾನ ಏರಿಕೆ ಕಂಡ ವಿರಾಟ್ ಕೊಹ್ಲಿ

ಎಂಸಿಜಿಯಲ್ಲಿ ಪಾಕ್‌ ತಂಡದಿಂದ ಗೆಲುವು ಕಸಿದುಕೊಂಡ 33 ವರ್ಷದ ವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಐದು ಸ್ಥಾನ ಬಡ್ತಿ ಪಡೆಯುವ ಮೂಲಕ 9ನೇ ಸ್ಥಾನ ತಲುಪಿದ್ದು, ಟಾಪ್ 10 ಸ್ಥಾನಕ್ಕೆ ಮರಳಿದಿದ್ದಾರೆ. ಇದಕ್ಕೂ ಮುನ್ನ ಟಾಪ್ 10 ಒಳಗೆ ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮಾತ್ರ ಇದ್ದರು.

ಐಸಿಸಿ ಬಿಡುಗಡೆಗೊಂಡ ಹೊಸ ರ್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಟಾಪ್ 10 ಒಳಗೆ ಕಾಣಿಸಿಕೊಂಡಿದ್ದು, ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ನಂಬರ್ 1 ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತನ್ನ ಯಶಸ್ಸಿಗೆ ಕಾರಣ ಯಾರು ಎನ್ನುವುದನ್ನು ಬಹಿರಂಗಪಡಿಸಿದ ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್ 3ನೇ ಸ್ಥಾನಕ್ಕೆ ಕುಸಿತ

ಸೂರ್ಯಕುಮಾರ್ ಯಾದವ್ 3ನೇ ಸ್ಥಾನಕ್ಕೆ ಕುಸಿತ

ಟೀಂ ಇಂಡಿಯಾ 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್ 3ನೇ ಸ್ಥಾನಕ್ಕೆ ಕುಸಿತಗೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧ ಸೂಪರ್ 12 ಪಂದ್ಯದಲ್ಲಿ ಅಜೇಯ 92ರನ್ ಸಿಡಿಸಿ ಅಬ್ಬರಿಸಿದ ನ್ಯೂಜಿಲೆಂಡ್‌ನ ಡೆವೊನ್ ಕಾನ್ವೆ 2ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಸೂರ್ಯ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಕಡಿಮೆ ಮೊತ್ತಕ್ಕೆ ಔಟಾಗಿದ್ದಾರೆ.

ಡೆವೊನ್ ಕಾನ್ವೆ 58 ಎಸೆತಗಳಲ್ಲಿ ಅಜೇಯ 92 ರನ್ ಕಲೆಹಾಕಿದ್ದು, ಫಿನ್ ಅಲೆನ್ (42) ಜೊತೆಗೂಡಿ ಅಮೋಘ ಜೊತೆಯಾಟವಾಡುವ ಮೂಲಕ ನ್ಯೂಜಿಲೆಂಡ್ 200ರನ್ ಕಲೆಹಾಕುವಲ್ಲಿ ಯಶಸ್ವಿಯಾದ್ರು. ಇವರಿಬ್ಬರ ಇನ್ನಿಂಗ್ಸ್‌ ಜೊತೆಗೆ ಬೊಂಬಾಟ್ ಬೌಲಿಂಗ್ ಮಾಡಿದ ನ್ಯೂಜಿಲೆಂಡ್ ಆಸಿಸ್ ವಿರುದ್ಧ 89ರನ್‌ಗಳ ಭರ್ಜರಿ ಜಯ ಸಾಧಿಸಿತು.

ಕಾನ್ವೆ ಈ ಇನ್ನಿಂಗ್ಸ್‌ ಸೂರ್ಯಕುಮಾರ್‌ನನ್ನು ಹಿಂದಿಕ್ಕಿ ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೇರಲು ಸಹಾಯವಾಗಿದೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಹಾಗೂ ದಕ್ಷಿಣ ಆಫ್ರಿಕಾದ ಏಡೆನ್ ಮಕ್ರಾಮ್ ತಮ್ಮ ವೃತ್ತಿ ಜೀವನದ ಬೆಸ್ಟ್ 831 ಅಂಕ ಸಂಪಾದಿಸಿದ್ದು, ನಂಬರ್ ಒನ್ ಸ್ಥಾನಕ್ಕೆ ಸ್ಪರ್ಧೆ ನೀಡುತ್ತಿದ್ದಾರೆ.

ಇನ್ನು ಆಸ್ಟ್ರೇಲಿಯಾ ವಿರುದ್ಧ 16 ಎಸೆತಗಳಲ್ಲಿ 42 ರನ್ ಸಿಡಿಸಿದ ಕಿವೀಸ್‌ನ ಫಿನ್ ಅಲೆನ್ 17 ಸ್ಥಾನ ಏರಿಕೆಗೊಂಡು ಒಟ್ಟಾರೆ ರ್ಯಾಂಕಿಂಗ್‌ನಲ್ಲಿ 13ನೇ ಸ್ಥಾನ ಪಡೆದಿದ್ದಾರೆ.

ನಂಬರ್ 1 ಸ್ಥಾನದ ಮೇಲೆ ವಿರಾಟ್ ಕೊಹ್ಲಿ ಕಣ್ಣು

ನಂಬರ್ 1 ಸ್ಥಾನದ ಮೇಲೆ ವಿರಾಟ್ ಕೊಹ್ಲಿ ಕಣ್ಣು

ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೀರ್ಘ ಕಾಲ ನಂಬರ್ 1 ಬ್ಯಾಟ್ಸ್‌ಮನ್ ಆಗಿದ್ದ ವಿರಾಟ್ ಕೊಹ್ಲಿ ಮತ್ತೆ ಪಟ್ಟಕ್ಕೇರಲು ಸಿದ್ಧಗೊಂಡಿದ್ದಾರೆ. ಐಸಿಸಿ ಟಿ20 ರ್ಯಾಂಕಿಂಗ್‌ನಲ್ಲಿ ಮುಂದಿನ ದಿನಗಳಲ್ಲಿ ಸ್ಪರ್ಧೆಯೊಡ್ಡಲಿರುವ ವಿರಾಟ್, ಬಾಬರ್ ಅಜಮ್, ರಿಜ್ವಾನ್, ಏಡೆನ್ ಮಕ್ರಾಮ್ ಮತ್ತು ಡೆವೊನ್ ಕಾನ್ವೆಗೆ ಸವಾಲೆಸೆಯಲಿದ್ದಾರೆ.

Story first published: Wednesday, October 26, 2022, 16:15 [IST]
Other articles published on Oct 26, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+