Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಂಬಿದ್ರೆ ನಂಬಿ, ಬಿಟ್ರೆ ಬಿಡಿ:T20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತದ ಪರ ಕೊನೆಯ ಬಾರಿಗೆ ವಿಕೆಟ್ ಪಡೆದಿದ್ದು ವಿರಾಟ್ ಕೊಹ್ಲಿ!

Virat kohli

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಂಬಲಾಗದ ಪ್ರದರ್ಶನ ನೀಡುವ ಮೂಲಕ ಕೋಟ್ಯಾಂತರ ಅಭಿಮಾನಿಗಳಿಗೆ ಶಾಕ್ ನೀಡಿದೆ. ಸೆಮಿಫೈನಲ್‌ನಲ್ಲಿ ಯಾರೂ ಊಹಿಸದ ರೀತಿಯಲ್ಲಿ 10 ವಿಕೆಟ್‌ಗಳಿಂದ ಸೋತು ಭಾರೀ ಮುಖಭಂಗ ಎದುರಿಸಿತು.

ಅಡಿಲೇಡ್ ಓವಲ್ ಮೈದಾನದಲ್ಲಿ ಕಂಡಂತಹ ಸೋಲನ್ನ ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಭಾರತದ ವಿರುದ್ಧ ಇಂಗ್ಲೆಂಡ್ ಸಂಪೂರ್ಣ ಮೇಲುಗೈ ಸಾಧಿಸುವ ಮೂಲಕ ಭಾರತಕ್ಕೆ ಹೀನಾಯ ಸೋಲಿನ ರುಚಿ ತೋರಿಸಿದೆ.

ಭಾರತದ ಬೌಲರ್‌ಗಳನ್ನ ಚಿಂದಿ ಉಡಾಯಿಸಿದ ಬಟ್ಲರ್, ಅಲೆಕ್ಸ್‌

ಭಾರತದ ಬೌಲರ್‌ಗಳನ್ನ ಚಿಂದಿ ಉಡಾಯಿಸಿದ ಬಟ್ಲರ್, ಅಲೆಕ್ಸ್‌

ಟೀಂ ಇಂಡಿಯಾ ನೀಡಿದ್ದ 169 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಪರ ಓಪನರ್‌ಗಳಾದ ಅಲೆಕ್ಸ್ ಹೇಲ್ಸ್‌ ಮತ್ತು ನಾಯಕ ಜಾಸ್ ಬಟ್ಲರ್ ಟೀಂ ಇಂಡಿಯಾ ಬೌಲಿಂಗ್ ದಾಳಿಯನ್ನ ಧೂಳೀಪಟ ಮಾಡಿದರು. ಯಾವುದೇ ಹಂತದಲ್ಲೂ ಸವಾಲೆನಿಸದ ಭಾರತದ ಬೌಲಿಂಗ್‌ ಅನ್ನು ನೆಲಸಮಗೊಳಿಸಿದ ಈ ಜೋಡಿ ಕೇವಲ 16 ಓವರ್‌ಗಳಲ್ಲಿ ಗೆಲುವಿನ ಗೆರೆ ದಾಟಿತು.

ಇದಕ್ಕೂ ಮುನ್ನ ಟೀಂ ಇಂಡಿಯಾ ಆರಂಭಿಕರು ವೈಫಲ್ಯ ಅನುಭವಿಸಿದ ಪರಿಣಾಮ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಮೇಲೆ ಸಂಪೂರ್ಣ ಅವಲಂಬಿತಗೊಂಡಿತು. ಇಬ್ಬರು ಬ್ಯಾಟರ್‌ಗಳು ಅರ್ಧಶತಕ ದಾಖಲಿಸಿ ಟೀಂ ಇಂಡಿಯಾ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಆದ್ರೆ ಟೀಂ ಇಂಡಿಯಾ ಬೌಲರ್‌ಗಳು ಒಂದು ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು.

T20 ವಿಶ್ವಕಪ್‌ ಗೆಲ್ಲಲು ಸಾಧ್ಯವಾಗದಿದ್ರೆ, ಐಪಿಎಲ್ ಏಕೆ ಬೇಕು?: ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಕಿಡಿ

ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಕೊನೆಯ ಬಾರಿಗೆ ವಿಕೆಟ್ ಪಡೆದಿದ್ದು ವಿರಾಟ್ ಕೊಹ್ಲಿ!

ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಕೊನೆಯ ಬಾರಿಗೆ ವಿಕೆಟ್ ಪಡೆದಿದ್ದು ವಿರಾಟ್ ಕೊಹ್ಲಿ!

ಈ ಸೋಲಿನ ಬಳಿಕ ಒಂದು ಅಚ್ಚರಿಯ ಅಂಕಿ-ಅಂಶ ಎಲ್ಲರ ಆಶ್ಚರ್ಯಕ್ಕೆ ಕಾರಣವಾಯಿತು. ಐಸಿಸಿ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತದ ಪರ ಕೊನೆಯ ಬಾರಿಗೆ ವಿಕೆಟ್ ಪಡೆದಿರುವುದು ಯಾವುದೇ ಬೌಲರ್ ಅಲ್ಲ. ಬದಲಾಗಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂದ್ರೆ ನೀವು ಆಶ್ಚರ್ಯ ಪಡಲೇಬೇಕಿದೆ.

2016ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ತಂಡದ ಜಾನ್ಸನ್ ಚಾರ್ಲ್ಸ್ ವಿಕೆಟ್ ಪಡೆದು ಮಿಂಚಿದ್ದಾರೆ. ಸೆಮಿಫೈನಲ್‌ನಲ್ಲಿ ಅದೇ ಕೊನೆಯ ಬಾರಿಗೆ ಕಾಣಿಸಿಕೊಂಡ ಟೀಂ ಇಂಡಿಯಾ, 2021ರಲ್ಲಿ ಸೆಮಿಫೈನಲ್ ತಲುಪಲು ವಿಫಲಗೊಂಡಿತು. ಈ ಬಾರಿಯ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಒಂದೇ ಒಂದು ವಿಕೆಟ್ ಸಹ ಪಡೆಯಲಿಲ್ಲ. ಹೀಗಾಗಿ ಭಾರತದ ಪರ ಸೆಮಿಫೈನಲ್‌ನಲ್ಲಿ ಕೊನೆಯ ವಿಕೆಟ್ ಪಡೆದಿದ್ದು ಕೊಹ್ಲಿ.

ಚಹಾಲ್, ರವಿ ಬಿಷ್ಣೋಯಿ ಬಿಟ್ಟು ಅಶ್ವಿನ್‌ರನ್ನು ನಾನು ಆಯ್ಕೆ ಮಾಡುತ್ತಿರಲಿಲ್ಲ: ಫಾರೂಕ್ ಎಂಜಿನಿಯರ್

ಟಿ20 ವಿಶ್ವಕಪ್‌ ಸರಣಿ ಶ್ರೇಷ್ಟ ಪ್ರಶಸ್ತಿ ರೇಸ್‌ನಲ್ಲಿರುವ ವಿರಾಟ್ ಕೊಹ್ಲಿ

ಟಿ20 ವಿಶ್ವಕಪ್‌ ಸರಣಿ ಶ್ರೇಷ್ಟ ಪ್ರಶಸ್ತಿ ರೇಸ್‌ನಲ್ಲಿರುವ ವಿರಾಟ್ ಕೊಹ್ಲಿ

ಹೌದು ಈಗಾಗಲೇ 2014 ಮತ್ತು 2016ರ ಟಿ20 ವಿಶ್ವಕಪ್‌ನಲ್ಲಿ ಮ್ಯಾನ್ ಆಫ್‌ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದಿರುವ ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್‌ನಲ್ಲೂ ರೇಸ್‌ನಲ್ಲಿ ಮುಂದಿದ್ದಾರೆ.

6 ಪಂದ್ಯಗಳಲ್ಲಿ 98.67ರ ಸರಾಸರಿಯಲ್ಲಿ 136.41ರ ಸ್ಟ್ರೈಕ್‌ರೇಟ್‌ನಲ್ಲಿ ವಿರಾಟ್ ಕೊಹ್ಲಿ 296 ರನ್ ಕಲೆಹಾಕಿದ್ದಾರೆ. ಕೊಹ್ಲಿ ಈ ಟೂರ್ನಮೆಂಟ್‌ನಲ್ಲಿ ಒಟ್ಟು 4 ಅರ್ಧಶತಕ ದಾಖಲಿಸಿದ್ದು ಇದರಲ್ಲಿ ಎರಡು ಅಜೇಯ ಅರ್ಧಶತಕ ಒಳಗೊಂಡಿವೆ.

ಕೊಹ್ಲಿ ನಂತರದ ಸ್ಥಾನದಲ್ಲಿ ನೆದರ್ಲ್ಯಾಂಡ್ಸ್‌ನ ಮ್ಯಾಕ್ಸ್‌ ಡ್ವಾಡ್ (242), ಸೂರ್ಯಕುಮಾರ್ ಯಾದವ್ (239), ಕುಸಾಲ್ ಮೆಂಡೀಸ್(223 ) ರನ್ ಕಲೆಹಾಕಿದ್ದಾರೆ. ಆದ್ರೆ ಸದ್ಯ ಕೊಹ್ಲಿ ಜೊತೆಗೆ ಸೂರ್ಯಕುಮಾರ್ ಯಾದವ್, ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್, ಜಾಸ್ ಬಟ್ಲರ್, ಪಾಕಿಸ್ತಾನದ ಶಾಹಿನ್ ಅಫ್ರಿದಿ ಪ್ರಶಸ್ತಿ ಗೆಲುವಿನ ಫೇವರಿಟ್‌ಗಳಾಗಿದ್ದಾರೆ.

Story first published: Friday, November 11, 2022, 16:39 [IST]
Other articles published on Nov 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+