Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌: ಕೊಹ್ಲಿ, ಸೂರ್ಯನನ್ನು RRR ಹೀರೋಗಳಿಗೆ ಹೋಲಿಸಿದ ವೀರೇಂದ್ರ ಸೆಹ್ವಾಗ್

Virender sehwag

ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ 23ನೇ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ಟೀಂ ಇಂಡಿಯಾ 56ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ತ್ರಿವಳಿ ಸ್ಟಾರ್‌ಗಳ ಸೂಪರ್ ಅರ್ಧಶತಕದ ನೆರವಿನಿಂದ 179ರನ್‌ ಕಲೆಹಾಕಿ ನೆದರ್ಲ್ಯಾಂಡ್ಸ್‌ಗೆ 180ರನ್ ಟಾರ್ಗೆಟ್ ನೀಡಿತು.

ಭಾರತ ನೀಡಿದ ಗುರಿಯನ್ನ ಬೆನ್ನತ್ತಿದ ನೆದರ್ಲ್ಯಾಂಡ್ಸ್‌ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 123ರನ್ ಕಲೆಹಾಕುವಷ್ಟೇ ಶಕ್ತಗೊಂಡಿದೆ. ಇದ್ರಿಂದಾಗಿ ಭಾರತ ಪಂದ್ಯ ಗೆದ್ದು ಗ್ರೂಪ್ 2 ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.

ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಮಿಂಚಿದ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧಶತಕ ಸಿಡಿಸಿ ಮಿಂಚುವ ಮೂಲಕ ತಂಡದ ಸ್ಕೋರನ್ನು 180ರ ಗಡಿ ಸಮೀಪಿಸಲು ನೆರವಾದ್ರು. ರೋಹಿತ್ ಶರ್ಮಾ 39 ಎಸೆತಗಳಲ್ಲಿ 53ರನ್ ಕಲೆಹಾಕಿ ಟಿ20 ಕ್ರಿಕೆಟ್‌ನಲ್ಲಿ 29 ಅರ್ಧಶತಕ ದಾಖಲಿಸಿದ್ರೆ, ವಿರಾಟ್ ಕೊಹ್ಲಿ ಅಜೇಯ 62 ರನ್ ಕಲೆಹಾಕಿ ಟಿ20 ಕ್ರಿಕೆಟ್‌ನಲ್ಲಿ ದಾಖಲೆಯ 35ನೇ ಅರ್ಧಶತಕದ ದಾಖಲೆ ಬರೆದಿದ್ದಾರೆ. ಜೊತೆಗೆ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ ಅರ್ಧಶತಕದ ಗಡಿದಾಟಿದ್ರು.

ಅದ್ರಲ್ಲೂ ರೋಹಿತ್ ಔಟಾದ ಬಳಿಕ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟ ಬೊಂಬಾಟ್ ಆಗಿತ್ತು. ಮೂರನೇ ವಿಕೆಟ್‌ಗೆ ಮುರಿಯದ ಜೊತೆಯಾಟವಾಡಿದ ಕೊಹ್ಲಿ ಹಾಗೂ 94 ರನ್‌ಗಳ ಜೊತೆಯಾಟದ ಮೂಲಕ ಮಿಂಚಿದರು. ಇವರಿಬ್ಬರದ ಅಬ್ಬರದ ಬ್ಯಾಟಿಂಗ್ ನೆರವಿನಿಂದಲೇ ಭಾರತ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು.

ಟಿ20 ಫಾರ್ಮೆಟ್‌ನಲ್ಲಿ ಈ ಜೋಡಿ ಈಗಾಗಲೇ ಹಲವು ಪಂದ್ಯಗಳಲ್ಲಿ ಉತ್ತಮ ಜೊತೆಯಾಟವಾಡಿದ್ದು, ಈ ಪಂದ್ಯದಲ್ಲೂ ಮಿಂಚಿದ್ದರ ಪರಿಣಾಮ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತನ್ನದೇ ಸ್ಟ್ರೈಲ್‌ನಲ್ಲಿ ಕೊಹ್ಲಿ ಮತ್ತು ಸೂರ್ಯನನ್ನು ಪ್ರಶಂಸಿಸಿದ್ದಾರೆ.

ವೀರೂ ತನ್ನ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಿಂದ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಯನ್ನು ತೆಲುಗು ಸಿನಿಮಾ RRR ಹೀರೋಗಳಿಗೆ ಹೋಲಿಸಿದ್ದಾರೆ. ರಾಮ ಚರಣ್ ತೇಜಾ ಹಾಗೂ ಜ್ಯೂನಿಯರ್ ಎನ್‌ಟಿಆರ್‌ ಅಭಿನಯದ ಸೂಪರ್ ಹಿಟ್ ಚಿತ್ರದಲ್ಲಿ ಜ್ಯೂ. ಎನ್‌ಟಿಆರ್‌ ರಾಮ್‌ಚರಣ್ ತೇಜಾರನ್ನು ಹೆಗಲ ಮೇಲೆ ಹೊತ್ತು ಬರುವ ಕ್ಲೈಮ್ಯಾಕ್ಸ್ ದೃಶ್ಯಗಳಿದ್ದು, ಅದೇ ಪೋಸ್ಟರ್‌ನಲ್ಲಿ ಎಡಿಟ್ ಮಾಡಿ ಸೂರ್ಯಕುಮಾರ್ ಅನ್ನು ಕೊಹ್ಲಿ ಹೊತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.

ಈ ಮೂಲಕ ಈ ಇಬ್ಬರು ಆಟಗಾರರು ಒಟ್ಟಾಗಿ ನಿಂತ್ರೆ, ಎದುರಾಳಿ ಧ್ವಂಸವಾಗುವುದು ಗ್ಯಾರೆಂಟಿ ಎಂಬುದು ಇದರರ್ಥವಾಗಿದೆ. ತನ್ನ ವಿಶಿಷ್ಟ ಸ್ಟೈಲ್‌ನಲ್ಲಿ ಟ್ವೀಟ್ ಮತ್ತು ಪೋಸ್ಟ್‌ ಮೂಲಕ ಅಭಿಮಾನಿಗಳನ್ನ ಮನರಂಜಿಸುವ ವೀರೂ ಈ ಹೊಸ ಪೋಸ್ಟ್ರ್‌ಗೆ ಅಭಿಮಾನಿಗಳು ಫಿದಾ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವೈರಲ್ ಆಗಿದೆ.

Story first published: Thursday, October 27, 2022, 18:45 [IST]
Other articles published on Oct 27, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+