For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಫೇಕ್ ಫೀಲ್ಡಿಂಗ್: ಏನಿದು ವಿವಾದ, ಸಾಭೀತಾದ್ರೆ ಏನು ಶಿಕ್ಷೆ?

Virat kohli

ಅಡಿಲೇಡ್ ಓವಲ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲ್ಲುವ ಮೂಲಕ ಟೀಂ ಇಂಡಿಯಾ ಸೆಮಿಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಭಾನುವಾರ (ನ. 06) ನಡೆಯಲಿರುವ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಜಯಿಸಿದ್ರೆ ಸುಲಭವಾಗಿ ಸೆಮಿಫೈನಲ್‌ ಪ್ರವೇಶಿಸಲಿದೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಡೆಕ್ವರ್ತ್‌ ಲೂಯಿಸ್ ನಿಯಮದಡಿಯಲ್ಲಿ 5ರನ್‌ಗಳ ರೋಚಕ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಬಾಂಗ್ಲಾದೇಶ ಮಳೆಯ ಬಳಿಕ ನೀಡಿದ್ದ ಟಾರ್ಗೆಟ್‌ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿತ್ತು. 7 ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 66ರನ್ ಕಲೆಹಾಕಿದ್ದ ಬಾಂಗ್ಲಾಗೆ ಮಳೆಯಿಂದಾಗಿ ಓವರ್ ಕಡಿತಗೊಂಡು 16 ಓವರ್‌ಗೆ 151 ರನ್ ಗುರಿ ನೀಡಲಾಯಿತು. ಪರಿಣಾಮ ಉಳಿದಿದ್ದ 9 ಓವರ್‌ಗಳಲ್ಲಿ ಬಾಂಗ್ಲಾಕ್ಕೆ 84ರನ್ ಬೇಕಿತ್ತು. 10 ವಿಕೆಟ್‌ಗಳು ತಂಡದ ಕೈನಲ್ಲಿತ್ತು.

ಗುರಿ ಮುಟ್ಟಲು ಎಡವಿದ ಬಾಂಗ್ಲಾದೇಶ, ಭಾರತ ವಿರುದ್ಧ ಇಲ್ಲದ ಆರೋಪ!

ಗುರಿ ಮುಟ್ಟಲು ಎಡವಿದ ಬಾಂಗ್ಲಾದೇಶ, ಭಾರತ ವಿರುದ್ಧ ಇಲ್ಲದ ಆರೋಪ!

27 ಎಸೆತಗಳಲ್ಲಿ 60ರನ್ ಸಿಡಿಸಿದ್ದ ಲಿಟ್ಟನ್ ದಾಸ್, ಕೆ.ಎಲ್ ರಾಹುಲ್ ಚುರುಕು ಫೀಲ್ಡಿಂಗ್‌ಗೆ ರನೌಟ್ ಆಗುತ್ತಿದ್ದಂತೆ, ಭಾರತಕ್ಕೆ ಗೆಲುವಿನ ಭರವಸೆ ಸಿಕ್ಕಿತು. ನಂತರ ಸತತ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ ತಂಡಕ್ಕೆ ನುರುಲ್ ಹಸನ್ 25, ಟಸ್ಕಿನ್ ಅಹಮದ್ 12 ರನ್‌ಗಳಿ ಆಧಾರವಾದ್ರೆ ಹೊರತು ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ವಿಫಲಗೊಂಡರು.

ಅಂತಿಮ ಓವರ್‌ನಲ್ಲಿ 20 ರನ್‌ಗಳಿಸಲಾಗದೆ ಬಾಂಗ್ಲಾದೇಶ ತಂಡವು 6 ವಿಕೆಟ್ ನಷ್ಟಕ್ಕೆ 145ರನ್ ಕಲೆಹಾಕಿತು. ಭಾರತ 5ರನ್‌ಗಳ ಗೆಲುವು ಸಾಧಿಸುವ ಮೂಲಕ 2 ಅಮೂಲ್ಯ ಪಾಯಿಂಟ್ಸ್ ಪಡೆದು ಸೆಮಿಫೈನಲ್ ಜೀವಂತವಾಗಿರಿಸಿದೆ. ಆದ್ರೆ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಕುರಿತು ಆರೋಪ ಎದುರಾಗಿದೆ.

ವಿರಾಟ್ ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ

ವಿರಾಟ್ ಕೊಹ್ಲಿ ವಿರುದ್ಧ ಫೇಕ್ ಫೀಲ್ಡಿಂಗ್ ಆರೋಪ

ಟೀಂ ಇಂಡಿಯಾ ಫೀಲ್ಡಿಂಗ್ ವೇಳೆಯಲ್ಲಿ, ಅದ್ರಲ್ಲೂ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮೇಲೆ ಫೇಕ್ ಪೀಲ್ಡಿಂಗ್ ಆರೋಪ ಕೇಳಿಬಂದಿದೆ. ಕೊಹ್ಲಿ ಫೇಕ್ ಫೀಲ್ಡಿಂಗ್ ಸಾಭೀತಾಗಿದ್ರೆ ಬಾಂಗ್ಲಾದೇಶಕ್ಕೆ 5ರನ್ ನೀಡಬೇಕಿತ್ತು. ಇದ್ರಿಂದಾಗಿ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು ಎಂದು ಆರೋಪ ಕೇಳಿಬಂದಿದೆ.

ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟರ್ ನುರುಲ್ ಹಸನ್ ಈ ವಿವಾದವನ್ನು ಹೊರಹಾಕಿದ್ದಾರೆ. ವಿರಾಟ್ ಕೊಹ್ಲಿ ಫೇಕ್ ಫೀಲ್ಡಿಂಗ್ ಮಾಡಿದ್ದರೂ, ಅಂಪೈರ್ಸ್‌ ಗಮನವಹಿಸದ ಕಾರಣ ಬಾಂಗ್ಲಾದೇಶಕ್ಕೆ 5 ರನ್‌ ಬರಬೇಕಾಗಿದ್ದು ತಪ್ಪಿದೆ. ಆ ರನ್‌ಗಳು ಬಾಂಗ್ಲಾ ಪರ ಸೇರಿದ್ದರೆ ನಾವೇ ಗೆದ್ದು ಬೀಗುತ್ತಿದ್ದೇವು ಎಂದು ಹೇಳಿದ್ದಾರೆ.

ಕೊಹ್ಲಿ, ಸೂರ್ಯಕುಮಾರ್ ಅಲ್ಲ: ಟಿ20 ವಿಶ್ವಕಪ್‌ನಲ್ಲಿ ಇನ್ನು ಈ ಭಾರತೀಯನದ್ದೇ ಆಟ ಎಂದ ಗಂಭೀರ್!

ಬಾಂಗ್ಲಾದೇಶ ಬ್ಯಾಟಿಂಗ್‌ನ 7ನೇ ಓವರ್‌ನಲ್ಲಿ ನಡೆದ ಘಟನೆ

ಬಾಂಗ್ಲಾದೇಶ ಬ್ಯಾಟಿಂಗ್‌ನ 7ನೇ ಓವರ್‌ನಲ್ಲಿ ನಡೆದ ಘಟನೆ

ಬಾಂಗ್ಲಾದೇಶ ನುರುಲ್ ಹಸನ್ ಆರೋಪಿಸಿರುವ ಘಟನೆ ನಡೆಸಿದ್ದು ಬಾಂಗ್ಲಾದೇಶ ಬ್ಯಾಟಿಂಗ್‌ನ 7ನೇ ಓವರ್‌ನಲ್ಲಾಗಿದೆ. ಬಾಂಗ್ಲಾದೇಶ 185 ರನ್ ಬೆನ್ನತ್ತುವ ವೇಳೆಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ಪವರ್‌ ಪ್ಲೇ ಓವರ್‌ಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ ಅಬ್ಬರಿಸಿದ ಬಾಂಗ್ಲಾದೇ ತಂಡುವ 6 ಓವರ್‌ಗಳ ಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೆ 60ರನ್ ಕಲೆಹಾಕಿತು.

ಏಳನೇ ಓವರ್‌ನಲ್ಲಿ ಅರ್ಷ್‌ದೀಪ್ ಬೌಲಿಂಗ್‌ನಲ್ಲಿ ಫೀಲ್ಡಿಂಗ್‌ ಮಾಡುವಾಗ ಕೊಹ್ಲಿ ಫೇಕ್‌ ಥ್ರೋ ಮಾಡುವ ಮೂಲಕ ಬಾಂಗ್ಲಾ ಕೆಂಗಣ್ಣಿಗೆ ಗುರಿಯಾದ್ರು. ಚೆಂಡನ್ನು ಅಕ್ಷರ್‌ ಪಟೇಲ್‌ ಕಡೆಗೆ ಕೊಹ್ಲಿ ಎಸೆಯುವಂತೆ ಆ್ಯಕ್ಷನ್ ಮಾಡಿದ್ದಾರೆ. ಸದ್ಯ ಇದು ವಿವಾದಕ್ಕೆ ಕಾರಣವಾಗಿದೆ.

''ನಾವೆಲ್ಲಾ ನೋಡಿದ್ದೇವೆ ಮೈದಾನವಷ್ಟು ಎಷ್ಟು ತೇವಾಂಶದಿಂದ ಕೂಡಿತ್ತು ಎಂದು. ಈ ಕುರಿತು ಮಾತನಾಡುವುದೇ ಆದ್ರೆ, ಅಂತಹ ಪಿಚ್‌ನಲ್ಲಿ ಆಡುವುದರ ಜೊತೆಗೆ ಫೇಕ್ ಫೀಲ್ಡಿಂಗ್ ಕೂಡ ಸೇರಿತ್ತು. ಅದ್ರಿಂದ ಟೀಂ ಇಂಡಿಯಾಗೆ ದಂಡವಾಗಿ ನಮಗೆ 5ರನ್‌ ಸಿಗಬೇಕಿತ್ತು. ಅದೂ ಕೂಡ ನಮಗೆ ಸಿಗಲಿಲ್ಲ, ದುರಾದೃಷ್ಟವಶಾತ್ ಅದನ್ನು ಗಮನಿಸಲು ಇಲ್ಲ'' ಎಂದು ಹಸನ್ ಪಂದ್ಯದ ಬಳಿಕ ತಿಳಿಸಿದ್ದಾರೆ.

T20 ವಿಶ್ವಕಪ್‌: ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಿದ ಡಾರ್ಕ್ ಹಾರ್ಸ್ ನ್ಯೂಜಿಲೆಂಡ್

ಏನಿದು ಫೇಕ್ ಫೀಲ್ಡಿಂಗ್‌? ಐಸಿಸಿ ನಿಯಮವೇನು?

ಏನಿದು ಫೇಕ್ ಫೀಲ್ಡಿಂಗ್‌? ಐಸಿಸಿ ನಿಯಮವೇನು?

ಐಸಿಸಿ ನಿಯಮದ ಪ್ರಕಾರ ಅನ್ಯಾಯದ ಆಟಕ್ಕೆ ಸಂಬಂಧಿಸಿದಂತೆ ಕಾನೂನು 41.5 ''ಉದ್ದೇಶ ಪೂರ್ವಕವಾಗಿ ಗಮನ ಬೇರೆಡೆಗೆ ಹರಿಸುವುದು, ಫೀಲ್ಡಿಂಗ್‌ಗೆ ಅಡ್ಡಿಪಡಿಸುವುದು ಅಥವಾ ನಕಲಿ ಫೀಲ್ಡಿಂಗ್‌'' ಇಂತಹ ಘಟನೆಗಳನ್ನೆಲ್ಲಾ ಕಾನೂನು ವಿರುದ್ಧವಾಗಿ ಎಂದು ಪರಿಗಣಿಸಿದ್ರೆ, ಅಂಪೈರ್ ನಿರ್ದಿಷ್ಟ ಎಸೆತಕ್ಕೆ ಡೆಡ್‌ ಬಾಲ್ ಎಂದು ಕರೆಯಬಹುದು. ಇದ್ರಿಂದ ಅನ್ಯಾಯಕ್ಕೊಳಗಾದ ತಂಡಕ್ಕೆ 5 ರನ್ ನೀಡಬಹುದು.

ಆದ್ರೆ ಬಾಂಗ್ಲಾ -ಭಾರತ ಪಂದ್ಯದಲ್ಲಿ ಈ ಕುರಿತಾಗಿ ಆನ್‌ಫೀಲ್ಡ್ ಅಂಪೈರ್ಸ್‌ಗಳಾದ ಮರೈಸ್ ಎರಾಮಸ್ ಮತ್ತು ಕ್ರಿಸ್ ಬ್ರೌನ್‌ ಸರಿಯಾಗಿ ಗಮನಿಸದೇ ಯಾವುದೇ ತೀರ್ಪು ನೀಡಲಿಲ್ಲ. ಕ್ರೀಸ್‌ನಲ್ಲಿದ್ದ ಲಿಟ್ಟನ್ ದಾಸ್ ಮತ್ತು ನಜ್ಮುಲ್ ಹಸನ್ ಯಾವುದೇ ರೀತಿಯ ದೂರು ಸಹ ನೀಡಲಿಲ್ಲ. ಹೀಗಾಗಿ ಆ ಸಮಯದಲ್ಲಿ ಯಾರೂ ಪ್ರಶ್ನೆಯನ್ನು ಎತ್ತದ ಕಾರಣ ಅಲ್ಲಿಗೆ ಮುಚ್ಚಿ ಹೋಯಿತು.

ಮಳೆಯಿಂದಾಗಿ ಪಂದ್ಯ ನಿಂತಾಗ ಬಾಂಗ್ಲಾದೇಶ ತಂಡದ ನಾಯಕ ಶಾಕೀಬ್ ಅಲ್ ಹಸನ್‌ ಅಂಪೈರ್ಸ್ ಜೊತೆಯಲ್ಲಿ ಫೇಕ್‌ ಫೀಲ್ಡಿಂಗ್ ಕುರಿತು ಜೋರಾಗಿ ಚರ್ಚೆ ಮಾಡುತ್ತಿರುವುದು ಕಂಡುಬಂದಿತು. ಆದ್ರೆ ಅದಾಗಲೇ ಸಮಯ ಮೀರಿ ಹೋಗಿತ್ತು. ಆದ್ರೆ ಈ ವಿಷಯವನ್ನು ನಾವು ಅಂತರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಗಮನಕ್ಕೆ ತರಲಿದ್ದೇವೆ ಎಂದು ಬಾಂಗ್ಲಾ ಕ್ರಿಕೆಟ್ ಬೋರ್ಡ್‌ ಹೇಳಿದೆ.

ಈ ಫೇಕ್‌ ಫೀಲ್ಡಿಂಗ್ ಕುರಿತಾಗಿ ಭಾರತ- ಬಾಂಗ್ಲಾದೇಶ ತಂಡಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕೆಸರೆರಚಾಟ ಮಾಡಿದ್ದಾರೆ. ಸೋಲನ್ನು ತಡೆಯಲಾಗದೆ ಬಾಂಗ್ಲಾದೇಶ ಇಂತಹ ಆರೋಪ ಮಾಡುತ್ತಿದೆ ಎಂದು ದೂರಲಾಗಿದೆ.

Story first published: Friday, November 4, 2022, 20:02 [IST]
Other articles published on Nov 4, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+