T20 ವಿಶ್ವಕಪ್: ಐರ್ಲೆಂಡ್ vs ವೆಸ್ಟ್ ಇಂಡೀಸ್ ಪಂದ್ಯದ ಟಾಸ್ ವರದಿ, ಪ್ಲೇಯಿಂಗ್ 11

ಆಸ್ಟ್ರೇಲಿಯಾದ ಹೋಬಾರ್ಟ್‌ನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವಿನ ಅತ್ಯಂತ ಪ್ರಮುಖ ಅರ್ಹತಾ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳಿಗೂ ಮುಂದಿನ ಹಂತಕ್ಕೆ ತಲುಪಲು ಈ ಪಂದ್ಯವನ್ನು ಗೆಲ್ಲಲೇಬೇಕಿದೆ.
ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಗ್ರೂಪ್ Bನಲ್ಲಿ ಆಡಿದ 2 ಪಂದ್ಯಗಳಲ್ಲಿ 2 ಪಂದ್ಯ ಜಯಿಸಿದ ಪರಿಣಾಮ ಪಾಯಿಂಟ್ಸ್ ಟೇಬಲ್‌ನಲ್ಲಿ ಉಭಯ ತಂಡಗಳ ಸ್ಕೋರ್ ಸಮಗೊಂಡಿದೆ(2) ಕೇವಲ ಈ ಎರಡು ತಂಡಗಳು ಅಷ್ಟೇ ಅಲ್ಲದೆ ಗ್ರೂಪ್‌ನಲ್ಲಿರುವ ಸ್ಕಾಟ್ಲೆಂಡ್ ಮತ್ತು ಜಿಂಬಾಬ್ವೆ ತಂಡಗಳ ಪಾಯಿಂಟ್ಸ್ ಕೂಡ ಸಮಗೊಂಡಿದ್ದು, ಫಲಿತಾಂಶವು ಪ್ರಮುಖ ಪಾತ್ರವಹಿಸಲಿದೆ.
ವೆಸ್ಟ್ ಇಂಡೀಸ್ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೇವಲ ಒಂದು ಬದಲಾವಣೆ ಆಗಿದ್ದು, ಇಂಜ್ಯುರಿಯಾಗಿದ್ದ ಬ್ರಾಂಡನ್ ಕಿಂಗ್ ಪ್ಲೇಯಿಂಗ್ ಇಲೆವೆನ್‌ಗೆ ಮರಳಿದ್ದು ಬ್ರೂಕ್ಸ್ ತಂಡದಿಂದ ಹೊರಬಿದ್ದಿದ್ದಾರೆ. ಆದ್ರೆ ಐರ್ಲೆಂಡ್ ತಂಡದಲ್ಲಿ ಕಳೆದ ಪಂದ್ಯದಲ್ಲಿ ಆಡಿದ್ದ ಹನ್ನೊಂದು ಆಟಗಾರರನ್ನ ಮುಂದುವರಿಸಲಾಗಿದೆ.
ಇಲ್ಲಿಯ ಪಿಚ್ ವರದಿಯನ್ನು ನೋಡುವುದಾದ್ರೆ, 82 ಮೀಟರ್ ಉದ್ದದ ಬೌಂಡರಿ ಹೊಂದಿರುವ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ಬ್ಯಾಟಿಂಗ್ ಕೂಡ ನೆರವಾಗಲಿದೆ. ಸ್ಪಿನ್ನರ್‌ಗಳಿಗೂ ಕೂಡ ಪಿಚ್ ಹೆಚ್ಚು ಪರಿಣಾಮಕಾರಿಯಾಗಿದೆ. ಉಭಯ ತಂಡಗಳ ಪ್ಲೇಯಿಂಗ್ 11 ಈ ಕೆಳಗೆ ಕಾಣಬಹುದಾಗಿದೆ.
ಉಭಯ ತಂಡಗಳ ಪ್ಲೇಯಿಂಗ್ 11
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ಎವಿನ್ ಲೆವಿಸ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ನಾಯಕ ಮತ್ತು ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಬೆಂಚ್: ಶಮರ್ ಬ್ರೂಕ್ಸ್, ರೇಮನ್ ರೀಫರ್, ಶೆಲ್ಡನ್ ಕಾಟ್ರೆಲ್, ಯಾನಿಕ್ ಕ್ಯಾರಿಯಾ
ಐರ್ಲೆಂಡ್ ಪ್ಲೇಯಿಂಗ್ 11
ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಸಿಮಿ ಸಿಂಗ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್
ಬೆಂಚ್: ಸ್ಟೀಫನ್ ಡೊಹೆನಿ, ಕಾನರ್ ಓಲ್ಫರ್ಟ್, ಗ್ರಹಾಂ ಹ್ಯೂಮ್, ಫಿಯಾನ್ ಹ್ಯಾಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications