Ind Vs Pak: ಪಾಕ್ ವಿರುದ್ಧ ಈ ಬೌಲರ್ ಆಡುವುದು ಪಕ್ಕಾ, ಈ ಆಲ್‌ರೌಂಡರ್ ಸ್ಥಾನಕ್ಕೆ ಕಂಟಕ

ಟೀಂ ಇಂಡಿಯಾ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಇನ್ನು ಒಂದೇ ದಿನ ಬಾಕಿ ಉಳಿದಿದೆ. ಉಭಯ ತಂಡಗಳು ಈ ಪಂದ್ಯಕ್ಕಾಗಿ ಭರ್ಜರಿಯಾಗಿ ಅಭ್ಯಾಸ ಮಾಡುತ್ತಿವೆ. ಉಭಯ ತಂಡಗಳಿಗೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಮುಖ್ಯವಾಗಿದೆ. ಮೆಲ್ಬೋರ್ನ್ ಅಂಗಳದಲ್ಲಿ ನಡೆಯುವ ಈ ರೋಚಕ ಕದನವನ್ನು ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಕೋಟ್ಯಂತರ ಮಂದಿ ಕಾಯುತ್ತಿದ್ದಾರೆ.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಆಡುವ ಬಳಗದಲ್ಲಿ ಯಾರು ಅವಕಾಶ ಪಡೆಯುತ್ತಾರೆ ಎನ್ನುವ ಕುತೂಹಲವಂತೂ ಇದ್ದೇ ಇದೆ. ಟೀಂ ಇಂಡಿಯಾದಲ್ಲಿ ಆಲ್ ರೌಂಡರ್ ಅಕ್ಷರ್ ಪಟೇಲ್ ಸ್ಥಾನ ಖಚಿತವಾಗಿದ್ದು, ಇನ್ನೊಬ್ಬರು ಸ್ಪಿನ್ನರ್ ಸ್ಥಾನಕ್ಕೆ ಆರ್ ಅಶ್ವಿನ್ ಮತ್ತು ಯುಜುವೇಂದ್ರ ಚಹಾಲ್ ನಡುವೆ ಪೈಪೋಟಿ ಇದೆ ಎನ್ನಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿದೆ.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಯುಜುವೇಂದ್ರ ಚಹಾಲ್ ಆಡುವುದು ಖಚಿತ ಎನ್ನಲಾಗಿದೆ. ಉಳಿದ ಒಂದು ಸ್ಥಾನಕ್ಕಾಗಿ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಸೆಣಸಲಿದ್ದಾರೆ ಎನ್ನಲಾಗಿದೆ. ಶುಕ್ರವಾರ ನಡೆದ ಟೀಂ ಇಂಡಿಯಾದ ಅಭ್ಯಾಸದಲ್ಲಿ ಈ ವಿಚಾರ ಸ್ಪಷ್ಟವಾಗಿದೆ.

ಸತತ ಅಭ್ಯಾಸ ನಡೆಸಿದ ಅಕ್ಷರ್ ಪಟೇಲ್
ಕೋಚ್ ರಾಹುಲ್ ದ್ರಾವಿಡ್ ಕಣ್ಗಾವಲಿನ ಅಡಿಯಲ್ಲಿ ಅಕ್ಷರ್ ಪಟೇಲ್ ತೀವ್ರವಾದ ನೆಟ್ ಸೆಷನ್‌ನಲ್ಲಿ ಪಾಲ್ಗೊಂಡರು, ಆದರೆ ಅವರ ಸ್ಥಾನ ಇನ್ನೂ ಖಚಿತವಾಗಿಲ್ಲ. ಪಾಕಿಸ್ತಾನ ತಂಡದಲ್ಲಿ ಮೂವರು ಎಡಗೈ ಬ್ಯಾಟರ್ ಆಡುವ ನಿರೀಕ್ಷೆ ಇದ್ದು, ಅವರ ವಿರುದ್ಧ ರಣತಂತ್ರ ರೂಪಿಸಲು ಆರ್ ಅಶ್ವಿನ್‌ರನ್ನು ಆಡಿಸುವ ಸಾಧ್ಯತೆ ಇದೆ.
ಕೆಲಸದ ಹೊರೆ ನಿರ್ವಹಣೆಯ ಕಾರಣದಿಂದಾಗಿ ಅಥವಾ ತಂಡದ ಸಮತೋಲನದ ಮೇಲೆ ಪರಿಣಾಮ ಬೀರುವ ಆಟಗಾರರ ಗಾಯಗಳಿಂದಾಗಿ, ಭಾರತೀಯ ತಂಡವು ಕಳೆದ ಒಂದು ವರ್ಷದಲ್ಲಿ ಸ್ಥಿರ ಪ್ಲೇಯಿಂಗ್ ಇಲೆವೆನ್ ಅನ್ನು ಹೊಂದಿಲ್ಲ.
T20 World Cup 2022: ಅರ್ಹತಾ ಸುತ್ತು ಮುಕ್ತಾಯದ ನಂತರ ಸೂಪರ್ 12ರ ಪೂರ್ಣ ವೇಳಾಪಟ್ಟಿ

ಕೀಪಿಂಗ್ ಅಭ್ಯಾಸ ಮಾಡಿದ ದಿನೇಶ್ ಕಾರ್ತಿಕ್
ಹೆಚ್ಚಿನ ಹಿರಿಯ ಆಟಗಾರರು ವಿಶ್ರಾಂತಿ ಪಡೆದರು. ಆದ್ದರಿಂದ, ಶುಕ್ರವಾರದ ಅಭ್ಯಾಸದ ಅವಧಿಯು ಅಂತಿಮ ಆಡುವ ಹನ್ನೊಂದರ ಬಗ್ಗೆ ನಿರ್ಣಾಯಕ ಸೂಚಕವಾಗಲಿಲ್ಲ.
ಆದರೆ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಖಚಿತವಾಗಿದ್ದು, ಪ್ರಸ್ತುತ ಫಾರ್ಮ್‌ನಲ್ಲಿರುವ ದಿನೇಶ್ ಕಾರ್ತಿಕ್ ರಿಷಬ್ ಪಂತ್‌ಗಿಂತ ಮುಂದಿದ್ದಾರೆ. ಕಾರ್ತಿಕ್, ಅವರ ಬ್ಯಾಟಿಂಗ್ ಅವಧಿಯ ನಂತರ, ಗಣನೀಯ ಸಮಯದವರೆಗೆ ಕೀಪಿಂಗ್ ಅಭ್ಯಾಸ ಮಾಡಿದ್ದಾರೆ.

ರಿಷಬ್ ಪಂತ್ ಆಡುವುದು ಅನುಮಾನ
ಆದರೆ, ರಿಷಬ್ ಪಂತ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಪ್ರಮುಖ ಎಡಗೈ ಬ್ಯಾಟರ್ ಆಗಿದ್ದಾರೆ. ಪಂತ್ ಏನಾದರೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದರೆ, ಪಾಂಡ್ಯ ಅವರು 5ನೇ ಪ್ರಮುಖ ಬೌಲರ್ ಆಗಬೇಕಾಗುತ್ತದೆ. ಇದು ಭಾರತದ ಬೌಲಿಂಗ್ ಅವಕಾಶಗಳನ್ನು ಕಡಿಮೆ ಮಾಡಲಿದೆ.
ಅಕ್ಷರ್ ಪಟೇಲ್ ಭಾರತದ ಪರವಾಗಿ ಅತ್ಯುತ್ತಮ ಸ್ಪಿನ್ನರ್ ಆಯ್ಕೆಯಾಗಿದ್ದಾರೆ. ಆದರೆ, ಪಾಕಿಸ್ತಾನದ ಅಗ್ರ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಗಳಾದ ಖರ್ ಜಮಾನ್, ಮೊಹಮ್ಮದ್ ನವಾಜ್ ಮತ್ತು ಖುಶ್ದಿಲ್ ಶಾ ಇದ್ದಾರೆ ಮತ್ತು ಅವರ ವಿರುದ್ಧ ಎಡಗೈ ಸ್ಪಿನ್ನರ್ ಆಡುವುದು ಉತ್ತಮ ಆಯ್ಕೆಯಾಗಿರುವುದಿಲ್ಲ.

ಬೌಲಿಂಗ್ ವಿಭಾಗದಲ್ಲಿ ಭಾರಿ ಪೈಪೋಟಿ
ರವಿಚಂದ್ರನ್ ಅಶ್ವಿನ್ ಅಪಾರ ಅನುಭವ ಹೊಂದಿರುವುದರಿಂದ, ಅವರನ್ನು ನಿರ್ಲಕ್ಷಿಸಲಾಗುವುದಿಲ್ಲ. ಯುಜುವೇಂದ್ರ ಚಹಾಲ್ ಸದ್ಯದ ಮಟ್ಟಿಗೆ ಮೊದಲ ಆಯ್ಕೆಯ ಸ್ಪಿನ್ನರ್ ಆಗಿರುವುದರಿಂದ, ಆಸ್ಟ್ರೇಲಿಯಾದ ಬೃಹತ್ ಮೈದಾನದಲ್ಲಿ ರಿಸ್ಟ್ ಸ್ಪಿನ್ನರ್ ಆಡುವುದು ಅಗತ್ಯವಾಗಿರುತ್ತದೆ.
ವೇಗದ ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್, ಭುವನೇಶ್ವರ್ ಕುಮಾರ್ ನಡುವೆ ಮೂವರು ಮಾತ್ರ ಕಣಕ್ಕಿಳಿಯಲಿದ್ದಾರೆ. ಹರ್ಷಲ್ ಪಟೇಲ್ ಅಥವಾ ಭುವನೇಶ್ವರ್ ಕುಮಾರ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications