Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20 ವಿಶ್ವಕಪ್‌: ಪಾಕ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿ ಕಣ್ಣೀರಿಟ್ಟ ಕಿಂಗ್ ಕೊಹ್ಲಿ

Virat kohli

ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಅಬ್ಬರಕ್ಕೆ ಎದುರಾಳಿ ಪಾಕಿಸ್ತಾನ ಥಂಡಾ ಹೊಡೆದಿದೆ. 160ರನ್ ಟಾರ್ಗೆಟ್‌ ಬೆನ್ನತ್ತಿದ ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಶತಕದ ಜೊತೆಯಾಟದ ಮೂಲಕ ಭಾರತಕ್ಕೆ ಅವಿಸ್ಮರಣೀಯ ಗೆಲುವನ್ನು ತಂದುಕೊಟ್ಟರು.

ಅದ್ರಲ್ಲೂ ಕಿಂಗ್ ಕೊಹ್ಲಿ ಆಟಕ್ಕೆ ಇಡೀ ಕ್ರಿಕೆಟ್ ಲೋಕವೇ ಬೇಷ್‌ ಎಂದಿದೆ. ಕಿಂಗ್ ಕೊಹ್ಲಿ ಈಸ್ ಬ್ಯಾಕ್ ಎಂಬ ಹ್ಯಾಷ್‌ಟ್ಯಾಗ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪಾಕ್ ಬೌಲರ್‌ಗಳನ್ನ ದಂಡಿಸಿದ ವಿರಾಟ್ ಯಾರೂ ಊಹಿಸದ ಇನ್ನಿಂಗ್ಸ್‌ ಆಡುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ.

ಕೊನೆಯ ಎಸೆತದಲ್ಲಿ ಭಾರತಕ್ಕೆ ರೋಚಕ ಗೆಲುವು

ಟೀಂ ಇಂಡಿಯಾ 160ರನ್‌ ಬೆನ್ನತ್ತುವ ವೇಳೆಯಲ್ಲಿ ಟಾಪ್‌ ಆರ್ಡರ್ ವೈಫಲ್ಯವು ತಂಡವನ್ನ ಸಂಕಷ್ಟಕ್ಕೆ ಸಿಲುಕಿಸಿತು. ರೋಹಿತ್ ಶರ್ಮಾ 7 ಎಸೆತಗಳಲ್ಲಿ 4 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಕೆ.ಎಲ್ ರಾಹುಲ್ ಕೂಡ 4ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ರು. ಪವರ್‌ ಪ್ಲೇ ಒವರ್‌ಗಳಲ್ಲಿಯೇ ಭಾರತದ ಮೂರನೇ ವಿಕೆಟ್ ಪತನ, 15 ರನ್‌ಗಳಿಸಿದ ಸೂರ್ಯಕುಮಾರ್ ಯಾದವ್ ಔಟಾದರು. ಇದ್ರ ಬೆನ್ನಲ್ಲೇ ಕೇವಲ 2 ರನ್‌ಗೆ ಅಕ್ಷರ್ ಪಟೇಲ್ ರನೌಟ್‌ಗೆ ಬಲಿಯಾದ್ರು.

ಆದ್ರೆ ಈ ವೇಳೆಯಲ್ಲಿ ಐದನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಭಾರತದ ಗೆಲುವಿಗೆ ನೆರವಾದ್ರು. ಪಾಂಡ್ಯ 40ರನ್‌ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಸಂಪೂರ್ಣ ಜವಾಬ್ದಾರಿ ಹೊತ್ತ ವಿರಾಟ್ ಕೊಹ್ಲಿ ತಂಡವನ್ನ ಗೆಲುವಿನ ದಡ ತಲುಪಿಸಿದ್ರು. 53 ಎಸೆತಗಳಲ್ಲಿ 82 ರನ್ ಕಲೆಹಾಕಿದ ಕೊಹ್ಲಿ ಭಾರತದ ಚೇಸಿಂಗ್ ಮಾಸ್ಟರ್ ಎಂಬುದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.

ವಿರಾಟ್ ಕೊಹ್ಲಿಯ ಬೆಸ್ಟ್ ಇನ್ನಿಂಗ್ಸ್‌

ವಿರಾಟ್ ಕೊಹ್ಲಿಯ ಬೆಸ್ಟ್ ಇನ್ನಿಂಗ್ಸ್‌

ಸ್ವತಃ ವಿರಾಟ್ ಕೊಹ್ಲಿಯೇ ಹೇಳಿರುವಂತೆ ಟಿ20 ಫಾರ್ಮೆಟ್‌ನಲ್ಲಿ ಕೊಹ್ಲಿ ಬೆಸ್ಟ್ ಇನ್ನಿಂಗ್ಸ್ ಇದಾಗಿದೆ. 2016ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 52 ಎಸೆತಗಳಲ್ಲಿ 82ರನ್ ಕಲೆಹಾಕಿದ್ದ ಕೊಹ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು. ಆದ್ರೆ ವಿರಾಟ್‌ ಪಾಕಿಸ್ತಾನ ವಿರುದ್ಧ ಅತ್ಯಂತ ಒತ್ತಡದ ಸನ್ನಿವೇಶದಲ್ಲಿ ಮತ್ತು ಗೆಲುವು ಅಸಾಧ್ಯ ಎನ್ನುವಂತಹ ಸನ್ನಿವೇಶದಲ್ಲಿ ಆಡಿರುವ ಈ ಇನ್ನಿಂಗ್ಸ್‌ ಬೆಸ್ಟ್ ಎಂದು ಕೊಹ್ಲಿ ಹೇಳಿದ್ದಾರೆ.

ಇದಕ್ಕೆ ತಲೆದೂಗಿಸಿರುವ ನಾಯಕ ರೋಹಿತ್ ಶರ್ಮಾ ಕೂಡ ಭಾರತದ ಪರ ವಿರಾಟ್ ಕೊಹ್ಲಿ ಆಡಿದ ಬೆಸ್ಟ್ ಇನ್ನಿಂಗ್ಸ್‌ ಇದಾಗಿದೆ ಎಂದಿದ್ದಾರೆ.

Ind vs Pak: ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಕಿಂಗ್ ಕೊಹ್ಲಿ ಅಬ್ಬರ

ಗೆಲುವಿನ ಬಳಿಕ ಕೊಹ್ಲಿ ಕಣ್ಣಂಚಿನಲ್ಲಿ ಜಾರಿತು ಕಣ್ಣೀರು

ವಿರಾಟ್ ಕೊಹ್ಲಿ ಗೆಲುವಿನ ಬಳಿಕ ಸಾಕಷ್ಟು ಭಾವನಾತ್ಮಕವಾಗಿ ಗೆಲುವನ್ನ ಸಂಭ್ರಮಿಸಿದ್ದನ್ನ ಕ್ರಿಕೆಟ್ ಜಗತ್ತು ಕಣ್ತುಂಬಿಕೊಂಡಿತ್ತು. ಈ ಹಿಂದೆ ಹಲವು ಬಾರಿ ಅನೇಕ ಅವಿಸ್ಮರಣೀಯ ಗೆಲುವನ್ನು ಕೊಹ್ಲಿ ಭಾರತಕ್ಕೆ ತಂದುಕೊಟ್ಟಿದ್ದಾರೆ. ಆದ್ರೆ ವಿರಾಟ್ ಅಗ್ರೆಸ್ಸಿವ್ ಆಗಿ ಗೆಲುವನ್ನ ಆಚರಿಸಿದ್ದರು. ಆದ್ರೆ ಇದೇ ಮೊದಲ ಬಾರಿಗೆ ಗೆಲುವಿನ ಬಳಿಕ ಸಾಕಷ್ಟು ಭಾವುಕರಾಗಿದ್ದ ಕಿಂಗ್ ಕೊಹ್ಲಿ ಕಣ್ಣಂಚಿನಲ್ಲಿ ಕಣ್ಣೀರು ಜಾರಿತು.

ನಾನೆಂದು ವಿರಾಟ್ ಕೊಹ್ಲಿ ಕಣ್ಣಲ್ಲಿ ಕಣ್ಣೀರು ಕಂಡವನಲ್ಲ: ಹರ್ಷ ಬೋಗ್ಲೆ

ವಿರಾಟ್ ಕೊಹ್ಲಿ ಫೇಸ್ ಎಕ್ಸ್‌ಪ್ರೆಶನ್ ಕುರಿತಾಗಿ ಮೊದಲು ಟ್ವೀಟ್ ಮಾಡಿದ್ದು ಖ್ಯಾತ ಕ್ರಿಕೆಟ್ ವಿಶ್ಲೇಷಕರಾದ ಹರ್ಷ ಬೋಗ್ಲೆ. '' ನಾನು ವಿರಾಟ್ ಕೊಹ್ಲಿಯನ್ನು ಸಾಕಷ್ಟು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಆದ್ರೆ ಎಂದೂ ವಿರಾಟ್ ಕೊಹ್ಲಿ ಕಣ್ಣಲ್ಲಿ ಕಣ್ಣಿರನ್ನು ಕಂಡಿರಲಿಲ್ಲ. ನಾನು ಇಂದು ನೋಡಿದೆ. ಅದನ್ನು ಎಂದೂ ಮರೆಯಲು ಸಾಧ್ಯವಿಲ್ಲ'' ಎಂದು ಹರ್ಷ ಬೋಗ್ಲೆ ಟ್ವೀಟ್ ಮಾಡಿದ್ದಾರೆ.

ಇನ್ನು ಕ್ರಿಕೆಟ್‌ ಲೋಕದ ಅನೇಕ ದಿಗ್ಗಜರು ಸಹ ವಿರಾಟ್ ಕೊಹ್ಲಿ ಇನ್ನಿಂಗ್ಸ್‌ ಕುರಿತು ಮೆಚ್ಚಿ ಟ್ವೀಟ್ ಮಾಡಿದ್ದು, ''ನಾನು ಕಂಡಂತಹ ಅದ್ಭುತ ಟಿ20 ಇನ್ನಿಂಗ್ಸ್‌ ಇದಾಗಿದೆ. ಟೇಕ್ ಎ ಬೊ ವಿರಾಟ್ ಕೊಹ್ಲಿ. ಚಕ್ ದೇ ಇಂಡಿಯಾ'' ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

Story first published: Sunday, October 23, 2022, 19:44 [IST]
Other articles published on Oct 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+