ವಿಶ್ವಕಪ್ ಮುಖಭಂಗದ ಬಳಿಕ ಗಟ್ಟಿ ನಿರ್ಧಾರ ತೆಗೆದುಕೊಂಡ ವಿಂಡೀಸ್ ನಾಯಕ ಪೂರನ್

ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಈ ಬಾರಿಯ ಚುಟುಕು ವಿಶ್ವಕಪ್‌ನಲ್ಲಿ ಸೂಪರ್ 12 ಹಂತಕ್ಕೆ ತಲುಪುವ ಮುನ್ನವೇ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ತಂಡ ನೀಡಿದ ಕಳಪೆ ಪ್ರದರ್ಶನಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ತಂಡದ ನಾಯಕ ನಿಕೋಲಸ್ ಪೂರನ್ ವೆಸ್ಟ್ ಇಂಡೀಸ್ ತಂಡದಲ್ಲಿ ತಮ್ಮ ನಾಯಕತ್ವದ ವಿಚಾರವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ವಿಶ್ವಕಪ್‌ನಲ್ಲಿ ಮುಖಭಂಗ ಅನುಭವಿಸಿದರ ಹೊರತಾಗಿಯೂ ತಾನು ತಂಡದ ನಾಯಕತ್ವದಲ್ಲಿ ಮುಂದುವರಿಯುವುದಾಗಿ ಪೂರನ್ ಹೇಳಿಕೊಂಡಿದ್ದಾರೆ. "ಭವಿಷ್ಯದಲ್ಲಿ ಏನಾಗಲಿದೆಯೋ ತಿಳೀದಿಲ್ಲ. ಆದರೆ ಇದು ನಮಗೊಂದು ಪಾಠವಾಗಿದೆ. ಇದು ನಮ್ಮ ಪ್ರಯಾಣ, ಇದು ನಮ್ಮ ಕತೆ. ಮುಂದೇನಾಗಲಿದೆ ಎಂಬುದನ್ನು ಸಮಯ ನಿರ್ಧರಿಸುತ್ತದೆ. ಈಗ ನಾವು ವೈಯಕ್ತಿಕವಾಗಿ ಗುರಿ ಕಂಡುಕೊಳ್ಳಬೇಕಾದ ಸಮಯ. ವೈಯಕ್ತಿಕವಾಗಿ ನಾವು ಎಷ್ಟು ಉತ್ತಮವಾಗುತ್ತೇವೆ ಎಂಬುದು ಮುಖ್ಯವಾಗುತ್ತದೆ" ಎಂದಿದ್ದಾರೆ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್.

ಇದು ನನಗೆ ಮತ್ತೊಂದು ಸವಾಲು
"ಕಳೆದ ಒಂದೆರಡು ತಿಂಗಳಿನಿಂದ ನಾನು ಯೋಚಿಸುತ್ತಿದ್ದೇನೆ, ಕ್ರಿಕೆಟ್ ಆಡುವುದು ನಿಸ್ಸಂಶಯವಾಗಿಯೂ ನನ್ನ ಕನಸು. ನಾನು ಜೀವನದಲ್ಲಿ ಪರೀಕ್ಷೆಗಳನ್ನು ಎದುರಿಸುತ್ತಿದ್ದೇನೆ, ಮತ್ತು ಇದು ನನಗೆ ಮತ್ತೊಂದು ಪರೀಕ್ಷೆಯಾಗಿದೆ. ನಾನು ಸವಾಲುಗಳನ್ನು ಸ್ವೀಕರಿಸುವ ವ್ಯಕ್ತಿ ಇದು ನನಗೆ ಮತ್ತೊಂದು ಸವಾಲು" ಎಂದಿದ್ದಾರೆ ವಿಂಡೀಸ್ ನಾಯಕ ನಿಕೋಲಸ್ ಪೂರನ್.
ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಸೋಲು ಅನುಭವಿಸಿದ ಬಳಿಕ ವೆಸ್ಟ್ ಇಂಡೀಸ್ ತಂಡದ ಕೋಚ್ ಫಿಲ್ ಸೈಮನ್ ಕೋಚ್ ಹುದ್ದೆಯನ್ನು ತೊರೆಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಕೂಡ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಫಿಲ್ ಸೈಮನ್ಸ್ ಅವರ ಕೋಚ್ ಹುದ್ದೆಯ ಅಂತಿಮ ಜವಾಬ್ಧಾರಿಯಾಗಿರಲಿದೆ ಎಂದು ತಿಳಿಸಿದೆ.
PAK vs ZIM: ಪಾಕಿಸ್ತಾನ ಆಟಗಾರರ ಮುಂದೆ ಜಿಂಬಾಬ್ವೆ ತಂಡದ ವಿಜಯೋತ್ಸವ ಹೇಗಿತ್ತು ನೋಡಿ; ವಿಡಿಯೋ

ವಿಂಡೀಸ್‌ಗೆ ದೊಡ್ಡ ಆಘಾತ
ಸೂಪರ್ 12 ಹಂತಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ವೆಸ್ಟ್ ಇಂಡೀಸ್ ಈ ಬಾರಿ ಆಡುವ ಅನಿವಾರ್ಯತೆಗೆ ಸಿಲುಕಿತ್ತು. ಆಸ್ಟ್ರೇಲಿಯಾದ ಹೋಬಾರ್ಟ್‌ನ ಬೆಲ್ಲೆರಿವ್ ಓವಲ್ ಮೈದಾನದಲ್ಲಿ ನಡೆದ ಐರ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಐರ್ಲೆಂಡ್ ತಂಡ ವಿಂಡೀಸ್ ಪಡೆಗೆ 9 ವಿಕೆಟ್‌ಗಳ ಸೋಲುಣಿಸಲು ಯಶಸ್ವಿಯಾಗಿತ್ತು. ಈ ಮೂಲಕ ಐರ್ಲೆಂಡ್ ಸೂಪರ್ 12 ಹಂತವನ್ನು ತಲುಪಿದರೆ ಎರಡು ಬಾರಿಯ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ವಿಶ್ವಕಪ್‌ನಿಂದ ಹೊರಬೀಳುವ ಮೂಲಕ ಆಘಾತಕ್ಕೆ ಒಳಗಾಯಿತು.
ಗೆಲುವು ಸಾಧಿಸಿದರೂ ಭಾರತಕ್ಕೆ ಅದೊಂದೇ ತಲೆನೋವು: ಕಳೆದ ವರ್ಷ ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದೆಯಾ ಭಾರತ?

ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್
ಈ ಪಂದ್ಯದಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿದ್ದಲ್ಲದೆ ಆಮೆಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದು ತಂಡದ ಸೋಲಿಗೆ ಕಾರಣವಾಗಿತ್ತು. ವೆಸ್ಟ್ ಇಂಡೀಸ್ ನೀಡಿದ್ದ 147 ರನ್‌ಗಳ ಗುರಿಯನ್ನ ಐರ್ಲೆಂಡ್ ಬೆನ್ನತ್ತುವಲ್ಲಿ ಯಶಸ್ವಿಯಾಗಿದ್ದಲ್ಲದೆ, ಪಾಲ್ ಸ್ಟಿರ್ಲಿಂಗ್ ಅಜೇಯ ಆಟಕ್ಕೆ ವೀಂಡೀಸ್ ಕನಸು ಛಿದ್ರವಾಯಿತು.
ವೆಸ್ಟ್ ಇಂಡೀಸ್ 2014 ಮತ್ತು 2016ರಲ್ಲಿ ಎರಡು ಬಾರಿ ಟಿ20 ವಿಶ್ವಕಪ್ ಗೆದ್ದಿದ್ದು ಈ ಸಾಧನೆ ಮಾಡಿರುವ ಏಕೈಕ ತಂಡ ಎನಿಸಿಕೊಂಡಿದೆ ಆದರೆ ಈ ಬಾರಿ ಅರ್ಹತಾ ಸುತ್ತಿನಿಮದಲೆ ಹೊರಬಿದ್ದಿರುವುದು ತಂಡಕ್ಕೆ ಮಾತ್ರವಲ್ಲದೆ ಅಭಿಮಾನಿಗಳಿಗೂ ದೊಡ್ಡ ಆಘಾತವನ್ನುಂಟು ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications