ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

PAK vs ZIM: ಪಾಕಿಸ್ತಾನ ಆಟಗಾರರ ಮುಂದೆ ಜಿಂಬಾಬ್ವೆ ತಂಡದ ವಿಜಯೋತ್ಸವ ಹೇಗಿತ್ತು ನೋಡಿ; ವಿಡಿಯೋ

T20 World Cup 2022: Zimbabwe Team Victory Celebration in Front of Pakistan Players

ಗುರುವಾರ (ಅಕ್ಟೋಬರ್ 27) ಪರ್ತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ಸೂಪರ್ 12ರ ರೋಮಾಂಚಕ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಒಂದು ರನ್‌ನಿಂದ ಸೋಲಿಸಿದ ಜಿಂಬಾಬ್ವೆ ತಂಡ ಅದ್ಧೂರಿಯಾಗಿ ವಿಜಯೋತ್ಸವ ಆಚರಿಸಿತು.

ಸತತ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಸೋತಿದೆ ಮತ್ತು ಸೆಮಿಫೈನಲ್‌ಗೆ ಅವರ ಹಾದಿಯು ಈಗ ಕಠಿಣವಾಗಿದೆ. ಭಾನುವಾರ ನಡೆದ ಕಳೆದ ಪಂದ್ಯವನ್ನು ಕೂಡಾ ತಮ್ಮ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಸೋತಿದ್ದರು. ಜಿಂಬಾಬ್ವೆ ತಂಡವು ಪಂದ್ಯ ಗೆದ್ದ ನಂತರ ಪಾಕಿಸ್ತಾನದ ವಿರುದ್ಧ ತಮ್ಮ ಐತಿಹಾಸಿಕ ವಿಜಯವನ್ನು ಆಚರಿಸುತ್ತಿರುವುದು ಕಂಡುಬಂದಿತು.

PAK vs ZIM: ಜಿಂಬಾಬ್ವೆ ವಿರುದ್ಧ ಆಘಾತಕಾರಿ ಸೋಲು; ತಂಡದ ಬ್ಯಾಟಿಂಗ್ ವಿರುದ್ಧ ಸಿಟ್ಟಿಗೆದ್ದ ಪಾಕ್ ನಾಯಕPAK vs ZIM: ಜಿಂಬಾಬ್ವೆ ವಿರುದ್ಧ ಆಘಾತಕಾರಿ ಸೋಲು; ತಂಡದ ಬ್ಯಾಟಿಂಗ್ ವಿರುದ್ಧ ಸಿಟ್ಟಿಗೆದ್ದ ಪಾಕ್ ನಾಯಕ

ಪಾಕಿಸ್ತಾನ ಪರ ಮೊಹಮ್ಮದ್ ವಾಸಿಂ ಜೂನಿಯರ್ 24 ರನ್‌ಗೆ 4 ವಿಕೆಟ್ ಮತ್ತು ಶಾದಾಬ್ ಖಾನ್ 23 ರನ್‌ಗೆ 3 ವಿಕೆಟ್, ಅವರ ಕ್ಲಿನಿಕಲ್ ಬೌಲಿಂಗ್ ಪ್ರದರ್ಶನದಿಂದ ಜಿಂಬಾಬ್ವೆಯನ್ನು 20 ಓವರ್‌ಗಳಲ್ಲಿ 130/8 ಕ್ಕೆ ಸೀಮಿತಗೊಳಿಸಿತು. ವಾಸಿಂ ಮತ್ತು ಶಾದಾಬ್ ಸೇರಿ ಏಳು ವಿಕೆಟ್‌ಗಳನ್ನು ಕಬಳಿಸಿ ತೀವ್ರ ಕುಸಿತಕ್ಕೆ ಕಾರಣರಾದರು ಮತ್ತು ಹ್ಯಾರಿಸ್ ರೌಫ್ (1/12) ಉತ್ತಮ ಬೌಲಿಂಗ್ ಪ್ರದರ್ಶನದ ಮುಂದೆ ದೊಡ್ಡ ಸ್ಕೋರ್ ಮಾಡಲು ಜಿಂಬಾಬ್ವೆ ತಂಡ ಕಷ್ಟಪಟ್ಟಿತು.

ಕಡಿಮೆ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು ಮೊಹಮ್ಮದ್ ರಿಜ್ವಾನ್ (14) ಮತ್ತು ನಾಯಕ ಬಾಬರ್ ಅಜಂ (4) ಅವರ ವಿಕೆಟ್‌ಗಳನ್ನು ಪವರ್‌ಪ್ಲೇನಲ್ಲಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬ್ರಾಡ್ ಇವಾನ್ಸ್ ಅವರ ಮಾರಕ ಬೌಲಿಂಗ್‌ನಿಂದ ಬಾಬರ್ ಅಜಂ ಒಂಬತ್ತು ಎಸೆತಗಳಲ್ಲಿ ಕೇವಲ ನಾಲ್ಕು ರನ್‌ಗಳಿಗೆ ಪಡವಿಲಿಯನ್‌ಗೆ ಕಳುಹಿಸಿದರು ಮತ್ತು ಬ್ಲೆಸಿಂಗ್ ಮುಜರಬಾನಿ ಅವರು ಮೊಹಮ್ಮದ್ ರಿಜ್ವಾನ್ ಅವರನ್ನು 14 ರನ್ ಗಳಿಸಿದ್ದಾಗ ವಿಕೆಟ್ ತೆಗೆದು ಪಾಕ್ ತಂಡವನ್ನು ಸಂಕಷ್ಟಕ್ಕೆ ತಳ್ಳಿದರು.

ಅಮೋಘ ಗೆಲುವಿನ ನಂತರ ಜಿಂಬಾಬ್ವೆ ಆಟಗಾರರು ಸೋಲಿನ ನೋವಿನಲ್ಲಿದ್ದ ಪಾಕಿಸ್ತಾನ ಆಟಗಾರರ ಎದುರು ಸಂಭ್ರಮಿಸಿದ ವೀಡಿಯೊವನ್ನು ಇಲ್ಲಿದೆ.

T20 World Cup 2022: Zimbabwe Team Victory Celebration in Front of Pakistan Players

ಇಫ್ತಿಕರ್ ಅಹ್ಮದ್ (5) ಅವರನ್ನು ಸಹ ಕಡಿಮೆ ರನ್‌ಗೆ ಕಟ್ಟಿಹಾಕಲಾಯಿತು. ಆದರೆ ಪಾಕಿಸ್ತಾನ ಶಾನ್ ಮಸೂದ್ ಮತ್ತು ಶಾದಾಬ್ ಖಾನ್ ನಡುವಿನ ಅತ್ಯುತ್ತಮ ಜೊತೆಯಾಟವು ಪಂದ್ಯವನ್ನು ಪಾಕಿಸ್ತಾನ ನಿಯಂತ್ರಣಕ್ಕೆ ತಂದರು. ಆಗ ತಂಡದ ಮೊತ್ತ 88/3 ಆಗಿತ್ತು ಮತ್ತು ಗುರಿ ತಲುಪಲು ಇನ್ನೂ ಆರೂವರೆ ಓವರ್‌ಗಳು ಬಾಕಿ ಉಳಿದಿದ್ದವು.

ಆದರೆ, ತಿರುಗಿಬಿದ್ದ ಜಿಂಬಾಬ್ವೆ ತಂಡ ತಮ್ಮ ಆಲ್‌ರೌಂಡರ್ ಸಿಕಂದರ್ ರಝಾ ಎರಡು ಎಸೆತಗಳಲ್ಲಿ ಶಾದಾಬ್ (17) ಮತ್ತು ಹೈದರ್ ಅಲಿ (0) ಎರಡು ವಿಕೆಟ್‌ಗಳನ್ನು ಕಬಳಿಸಿದರು. ನಂತರ ತಮ್ಮ ಮುಂದಿನ ಓವರ್‌ನಲ್ಲಿ ಶಾನ್ ಮಸೂದ್ (44) ಅವರನ್ನು ಸ್ಟಂಪ್ ಔಟ್ ಮಾಡಿದರು.

ಆದಾಗ್ಯೂ, ಮೊಹಮ್ಮದ್ ನವಾಜ್ (22) ಮತ್ತು ಮೊಹಮ್ಮದ್ ವಾಸಿಮ್ ಜೂನಿಯರ್ (ಔಟಾಗದೆ 12) ತಂಡವನ್ನು ಗೆಲ್ಲಿಸಲು ಪ್ರಯತ್ನಪಟ್ಟರು. ಅಂತಿಮ ಓವರ್‌ನಲ್ಲಿ ಪಾಕಿಸ್ತಾನ ಗೆಲ್ಲಲು 11 ರನ್ ಅಗತ್ಯವಿತ್ತು.

ಮೊಹಮ್ಮದ್ ವಾಸಿಮ್ ಅವರ ನಿರ್ಣಾಯಕ ಬೌಂಡರಿಯು ಸಮೀಕರಣವನ್ನು ಮೂರು ಬಾಲ್‌ಗೆ ಮೂರು ರನ್‌ಗೆ ತಂದು ನಿಲ್ಲಿಸಿತ್ತು ಮತ್ತು ಕ್ರೀಸ್‌ನಲ್ಲಿ ಉತ್ತಮವಾಗಿ ಸೆಟ್ ಮಾಡಿದ ಮೊಹಮ್ಮದ್ ನವಾಜ್ ಇದ್ದರು. ಈ ವೇಳೆ 25 ವರ್ಷದ ಬ್ರಾಡ್ ಇವಾನ್ಸ್ ಮೂರು ಅದ್ಭುತ ಎಸೆತಗಳನ್ನು ಎಸೆದು ಪಾಕಿಸ್ತಾನ ತಂಡದಿಂದ ಗೆಲುವು ಕಸಿದುಕೊಂಡರು.

ಅಂತಿಮವಾಗಿ, ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿ, 1 ರನ್‌ನಿಂದ ರೋಚಕ ಸೋಲು ಕಂಡಿತು.

Story first published: Friday, October 28, 2022, 2:36 [IST]
Other articles published on Oct 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X