ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ZIM: ಭಾರತಕ್ಕೆ ಅದೃಷ್ಟದ ಆಟಗಾರನಾದ ದೀಪಕ್ ಹೂಡಾ; ವಿಶ್ವದಾಖಲೆ ನಿರ್ಮಿಸಿದ ಆಲ್‌ರೌಂಡರ್

IND vs ZIM: Deepak Hooda Is Now Lucky Player For Team India, He Is Part of 16 Successive Wins

ಶನಿವಾರ ಹರಾರೆಯಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಜಿಂಬಾಬ್ವೆಯನ್ನು ಸೋಲಿಸಿದಾಗ, ಬ್ಯಾಟಿಂಗ್ ಆಲ್‌ರೌಂಡರ್ ದೀಪಕ್ ಹೂಡಾ ಅನನ್ಯ ಮತ್ತು ವಿಶಿಷ್ಟವಾದ ವಿಶ್ವ ದಾಖಲೆಯನ್ನು ಬರೆದರು.

ಏಷ್ಯಾ ಕಪ್ 2022 ಅರ್ಹತಾ ಪಂದ್ಯಗಳು: ತಂಡಗಳು, ವೇಳಾಪಟ್ಟಿ, ಸ್ಥಳ, ಲೈವ್‌ಸ್ಟ್ರೀಮ್ ತಿಳಿಯಿರಿಏಷ್ಯಾ ಕಪ್ 2022 ಅರ್ಹತಾ ಪಂದ್ಯಗಳು: ತಂಡಗಳು, ವೇಳಾಪಟ್ಟಿ, ಸ್ಥಳ, ಲೈವ್‌ಸ್ಟ್ರೀಮ್ ತಿಳಿಯಿರಿ

ದೀಪಕ್ ಹೂಡಾ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯದ ನಂತರ, ಅವರು ಆಡಿದ ಪ್ರತಿಯೊಂದು ಪಂದ್ಯವನ್ನು ಭಾರತವು ಎಲ್ಲಾ ಸ್ವರೂಪಗಳಲ್ಲಿ ಗೆದ್ದಿದೆ. ದೀಪಕ್ ಹೂಡಾ ಈಗ ಭಾರತಕ್ಕಾಗಿ ಸತತ 16 ಗೆಲುವಿನ ಭಾಗವಾಗಿದ್ದಾರೆ. ಇದು ಚೊಚ್ಚಲ ನಂತರ ಯಾವುದೇ ಆಟಗಾರನ ಸುದೀರ್ಘ 'ಅಜೇಯ' ಸರಣಿಯಾಗಿದೆ.

ಏಳು ಏಕದಿನ ಮತ್ತು ಒಂಬತ್ತು ಟಿ20 ಪಂದ್ಯ ಆಡಿರುವ ಹೂಡಾ

ಏಳು ಏಕದಿನ ಮತ್ತು ಒಂಬತ್ತು ಟಿ20 ಪಂದ್ಯ ಆಡಿರುವ ಹೂಡಾ

ಈ ವರ್ಷದ ಫೆಬ್ರವರಿಯಲ್ಲಿ ದೀಪಕ್ ಹೂಡಾ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ನಂತರ ಭಾರತ ತಂಡದಲ್ಲಿ ಏಳು ಏಕದಿನ ಮತ್ತು ಒಂಬತ್ತು ಟಿ20 ಪಂದ್ಯಗಳನ್ನು ಗೆದ್ದಿದೆ.

ರೊಮೇನಿಯಾದ ಸಾತ್ವಿಕ್ ನಾಡಿಗೊಟ್ಲಾ ಅವರು ತಾವು ಆಡಿದ ಚೊಚ್ಚಲ ಪಂದ್ಯದಿಂದ 15 ಪಂದ್ಯಗಳನ್ನು ಗೆದ್ದ ದಾಖಲೆಯನ್ನು ಹೊಂದಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಸ್ಟಾರ್ ಡೇವಿಡ್ ಮಿಲ್ಲರ್ ಮತ್ತು ರೊಮೇನಿಯಾದ ಶಾಂತನು ವಶಿಷ್ಟ್ ಅವರು ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ ನಂತರ 13 ಪಂದ್ಯಗಳಲ್ಲಿ ನಿರಂತರ ಗೆಲುವಿನ ಆನಂದವನ್ನು ಅನುಭವಿಸಿದರು.

ಎರಡನೇ ಪಂದ್ಯದಲ್ಲಿ ಒಂದು ವಿಕೆಟ್ ಮತ್ತು 25 ರನ್

ಎರಡನೇ ಪಂದ್ಯದಲ್ಲಿ ಒಂದು ವಿಕೆಟ್ ಮತ್ತು 25 ರನ್

ದೀಪಕ್ ಹೂಡಾ ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ಪಡೆದರು ಮತ್ತು ಬ್ಯಾಟ್‌ನೊಂದಿಗೆ 25 ರನ್ ಗಳಿಸಿದರು. ಆತಿಥೇಯ ಜಿಂಬಾಬ್ವೆ ನೀಡಿದ 162 ರನ್‌ಗಳ ಗುರಿಯನ್ನು ಭಾರತ ತಂಡವು ಅರ್ಧಕ್ಕಿಂತ ಸ್ವಲ್ಪ ಕಡಿಮೆ ಓವರ್‌ಗಳು ಬಾಕಿ ಇರುವಂತೆಯೇ ಗುರಿ ಬೆನ್ನಟ್ಟಿತು.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. 38.1 ಓವರ್‌ಗಳಲ್ಲಿ 161 ರನ್‌ಗಳಿಗೆ ಆಲೌಟ್ ಆಗುವಷ್ಟರಲ್ಲಿ ಜಿಂಬಾಬ್ವೆಯ ಬ್ಯಾಟಿಂಗ್‌ ವೈಫಲ್ಯ ಮುಂದುವರಿಯಿತು.

1 ರನ್ ಗಳಿಸಿ ನಿರಾಸೆ ಮೂಡಿಸಿದ ಕೆಎಲ್ ರಾಹುಲ್

1 ರನ್ ಗಳಿಸಿ ನಿರಾಸೆ ಮೂಡಿಸಿದ ಕೆಎಲ್ ರಾಹುಲ್

ಎರಡನೇ ಏಕದಿನ ಪಂದ್ಯದ ಗೆಲುವಿನ ಮೂಲಕ ಸತತ ಏಳನೇ ಬಾರಿ ಭಾರತ ಬೌಲಿಂಗ್‌ನಲ್ಲಿ ಜಿಂಬಾಬ್ವೆಯನ್ನು ಆಲೌಟ್ ಮಾಡಿತು. ದೀಪಕ್ ಚಹಾರ್ ಬದಲಿಗೆ ಚಾನ್ಸ್ ಪಡೆದ ಶಾರ್ದೂಲ್ ಠಾಕೂರ್ ಮೂರು ವಿಕೆಟ್‌ಗಳನ್ನು ಉರುಳಿಸಿ ಅತ್ಯುತ್ತಮವಾಗಿ ಕಂಬ್ಯಾಕ್ ಮಾಡಿದ ಬೌಲರ್‌ಗಳ ಪಟ್ಟಿಗೆ ಸೇರ್ಪಡೆಯಾದರು.

ದೀಪಕ್ ಹೂಡಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗದ ನಾಯಕ ಕೆಎಲ್ ರಾಹುಲ್ ಅವರು ಓಪನಿಂಗ್ ಆಗಿ ಬಡ್ತಿ ಪಡೆದರು. ಆದರೆ ಅವರು 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಿ ಔಟಾಗಿ ಬೇಸರ ಮೂಡಿಸಿದರು.

ಸಂಜು ಸ್ಯಾಮ್ಸನ್ ಅಜೇಯ 43 ರನ್

ಸಂಜು ಸ್ಯಾಮ್ಸನ್ ಅಜೇಯ 43 ರನ್

ಆದಾಗ್ಯೂ, ಜಿಂಬಾಬ್ವೆ ಕಡಿಮೆ ಮೊತ್ತದ ಟಾರ್ಗೆಟ್ ನೀಡಿದ್ದರಿಂದ, ಭಾರತ ಐದು ವಿಕೆಟ್‌ಗಳನ್ನು ಕಳೆದುಕೊಂಡಿದ್ದರೂ ಸಹ ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದರು ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಸಂಜು ಸ್ಯಾಮ್ಸನ್ ಅಜೇಯ 43 ರನ್ ಗಳಿಸಿದರೆ, ಶಿಖರ್ ಧವನ್ ಮತ್ತು ಶುಭಮನ್ ಗಿಲ್ ತಲಾ 33 ರನ್ ಗಳಿಸಿದರು.

ಈ ಗೆಲುವಿನೊಂದಿಗೆ ಭಾರತ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವು ಸೋಮವಾರ (ಆಗಸ್ಟ್ 22)ದಂದು ಹರಾರೆಯಲ್ಲಿ ನಡೆಯಲಿದೆ.

Story first published: Sunday, August 21, 2022, 8:41 [IST]
Other articles published on Aug 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X