For Quick Alerts
ALLOW NOTIFICATIONS  
For Daily Alerts
 

ಜೂ.6ರಂದು ಟೀಂ ಇಂಡಿಯಾ ಹೊಸ ಕೋಚ್ ಘೋಷಣೆ

By Mahesh

ಮುಂಬೈ, ಮೇ.26: ಭಾರಿ ಕುತೂಹಲ ಕೆರಳಿಸಿರುವ ಟೀಂ ಇಂಡಿಯಾ ಕೋಚ್ ಹುದ್ದೆಗೆ ಯಾರನ್ನು ನೇಮಿಸಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಜೂ.6ರಂದು ಸಿಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.

ಜೂ.10ರಿಂದ ಆರಂಭಗೊಳ್ಳಲಿರುವ ಬಾಂಗ್ಲಾ ಪ್ರವಾಸಕ್ಕೆ ಟೀಂ ಇಂಡಿಯಾ ತೆರಳುವ ಮುನ್ನ ಹೊಸ ಕೋಚ್, ಹೊಸ ನಿರ್ದೇಶಕ, ಹೊಸ ಮುಖ್ಯ ಫಿಜಿಯೋಥೆರಪಿಸ್ಟ್ ನೇಮಕವಾಗಲಿದೆ. [ಬಾಂಗ್ಲಾ ಟೂರ್ ನಂತರ ಭಾರತಕ್ಕೆ ಬಿಗಿ ವೇಳಾಪಟ್ಟಿ]

ಟೀಂ ಇಂಡಿಯಾದ ಕೋಚ್ ಆಗಿರುವ ಡಂಕನ್ ಫ್ಲೆಚರ್ ಅಧಿಕಾರ ಅವಧಿ ವಿಶ್ವಕಪ್ 2015 ಟೂರ್ನಿ ಜೊತೆಗೆ ಅಂತ್ಯವಾಗಿದೆ. ತಂಡದ ಮುಖ್ಯ ಫಿಜಿಯೋಥೆರಪಿಸ್ಟ್ ಆಗಿದ್ದ ನಿತಿನ್ ಪಟೇಲ್ ಅವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೂ ನಿತಿನ್ ಸಹಾಯಕ ಸಿಬ್ಬಂದಿಯಾಗಿದ್ದರು. [ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ]

Team India Coach to be Announced by June 6: BCCI Secretary Anurag Thakur

ಸದ್ಯಕ್ಕೆ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ನಿವಾಸದಲ್ಲಿ ಬಿರುಸಿನ ಚರ್ಚೆ ನಡೆಯುತ್ತಿದೆ. ಅನುರಾಗ್ ಠಾಕೂರ್ ಹಾಗೂ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಇಬ್ಬರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. [ಕೋಚ್ ಸ್ಥಾನಕ್ಕೆ ಲ್ಯಾಂಗರ್ ಆಯ್ಕೆ ಕಷ್ಟ!]

ಬಾಂಗ್ಲಾದೇಶಕ್ಕೆ ಆಯ್ಕೆಯಾಗಿರುವ ಇಡೀ ತಂಡ ಜೂ.5ರಂದು ಕೋಲ್ಕತ್ತಾದಲ್ಲಿ ಸೇರಲಿದೆ. ಜೂ.6ರಂದು ತಂಡದ ಪ್ರತಿ ಆಟಗಾರರ ದೈಹಿಕ ಪರೀಕ್ಷೆ ಕೈಗೊಂಡು ಫಲಿತಾಂಶ ಪರೀಕ್ಷಿಸಲಾಗುತ್ತದೆ. ಜೂ.6ರಂದು ತಂಡದ ಕೋಚ್ ಇನ್ನಿತರ ಸಿಬ್ಬಂದಿ ನೇಮಕಾತಿ ಬಗ್ಗೆ ಪ್ರಕಟಿಸಲಾಗುತ್ತದೆ. ಜೂ.7ರಂದು ತಂಡ ಬಾಂಗ್ಲಾದೇಶಕ್ಕೆ ತೆರಳಲಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. [ಬಾಂಗ್ಲಾ ಪ್ರವಾಸ ವೇಳಾಪಟ್ಟಿ]

ಯಾರಾಗಲಿದ್ದಾರೆ ಕೋಚ್: ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಶೀಘ್ರದಲ್ಲೇ ಬಿಸಿಸಿಐ ಸಲಹೆಗಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

ಹೊಸ ಕೋಚ್ ಆಯ್ಕೆ ಮಾಡುವ ಜವಾಬ್ದಾರಿ ಸೌರವ್ ಗಂಗೂಲಿ ಜೊತೆಗೆ ರವಿ ಶಾಸ್ತ್ರಿ ಹಾಗೂ ಸಚಿನ್ ತೆಂಡೂಲ್ಕರ್ ಅವರ ಮೇಲೆ ವಹಿಸಲಾಗಿದೆ ಎಂಬ ಸುದ್ದಿ ಬಂದಿತ್ತು.

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+