
ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋತಿದ್ದ ಭಾರತ
2022ರ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಕೈಗೊಂಡಿದ್ದ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡುವ ಗುರಿ ನೆಟ್ಟಿತ್ತು. ಆಸ್ಟ್ರೇಲಿಯಾದಲ್ಲಿ ಎರಡು ಬಾರಿ ಟೆಸ್ಟ್ ಸರಣಿ ಗೆದ್ದಿರುವ ಭಾರತಕ್ಕೆ ಹರಿಣಗಳ ನಾಡಲ್ಲಿ ಈವರೆಗೆ ಒಂದು ಬಾರಿಯೂ ಗೆಲ್ಲಲು ಸಾಧ್ಯವಾಗಿಲ್ಲ.
ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಟೆಸ್ಟ್ ಸೆಂಚುರಿಯನ್‌ನಲ್ಲಿ ನಡೆಯಿತು. ಇಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದರ ಜೊತೆಗೆ, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಭಾರತ ನೀಡಿದ 305ರನ್‌ಗಳ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ 191ರನ್‌ಗಳಿಗೆ ಆಲೌಟ್ ಆಗುವ ಮೂಲಕ 113ರನ್‌ಗಳ ಹೀನಾಯ ಸೋಲು ಕಂಡಿತು. ಅಂತಿಮ ದಿನದಾಟದಲ್ಲಿ ಭಾರತದ ಗೆಲುವಿಗೆ 6 ವಿಕೆಟ್‌ಗಳ ಅವಶ್ಯಕತೆಯಿತ್ತು. ಆದ್ರೆ ಹರಿಣಗಳಿಗೆ ಗುರಿ ಮುಟ್ಟಲು ಸಾಧ್ಯವಾಗ್ಲಿಲ್ಲ.

ಸತತ ಎರಡು ಪಂದ್ಯ ಗೆದ್ದ ಟೆಸ್ಟ್ ಸರಣಿ ಗೆದ್ದುಕೊಂಡಿದ್ದ ಹರಿಣಗಳು
ಮೊದಲ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಸತತ ಎರಡು ಪಂದ್ಯಗಳನ್ನ ಗೆದ್ದುಕೊಳ್ಳುವ ಮೂಲಕ ಹರಿಣಗಳು ಸರಣಿ ಕೈವಶ ಮಾಡಿಕೊಂಡರು. ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತವು ಎರಡನೇ ಇನ್ನಿಂಗ್ಸ್ 266 ರನ್‌ಗಳಿಗೆ ಆಲೌಟ್ ಆಗುವ ಮೂಲಕ ದಕ್ಷಿಣ ಆಫ್ರಿಕಾಗೆ 240 ರನ್‌ಗಳ ಗುರಿ ನೀಡಿತು. ಈ ಗುರಿಯನ್ನ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಪಂದ್ಯ ಜಯಿಸಿ 1-1ರಿಂದ ಸಮಬಲ ಸಾಧಿಸಿತು.
ಇದಾದ ಬಳಿಕ ಕೇಪ್‌ಟೌನ್‌ನಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ 198 ರನ್‌ಗಳಿಗೆ ಆಲೌಟ್ ಆಗಿದ್ದು, 211 ರನ್‌ಗಳ ಲೀಡ್ ಪಡೆದುಕೊಂಡಿತು. ರಿಷಭ್ ಪಂತ್ ಭರ್ಜರಿ ಅಜೇಯ ಶತಕದ ನೆರವಿನಿಂದ ಭಾರತದ ಲೀಡ್ 200 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಆದ್ರೆ ಸುಲಭ ಗುರಿಯನ್ನ ಬೆನ್ನತ್ತಿದ ಹರಿಣಗಳು ಪಂದ್ಯ ಜಯಿಸಿ 2-1ರ ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು.
ಟಿ20 ಕ್ರಿಕೆಟ್‌ನಲ್ಲಿ 10 ವರ್ಷಗಳ ಬಳಿಕ ಈ ವಿಶೇಷ ದಾಖಲೆ ಮಾಡಿದ ಭುವನೇಶ್ವರ್ ಕುಮಾರ್

ಏಕದಿನ ಸರಣಿಯಲ್ಲೂ ಭಾರತಕ್ಕೆ ದಕ್ಕದ ಜಯ, ವೈಟ್‌ವಾಶ್
ಟೆಸ್ಟ್ ಸರಣಿ ಬಳಿಕ ನಡೆದ ಏಕದಿನ ಸರಣಿಯಲ್ಲೂ ಭಾರತಕ್ಕೆ ಜಯ ಸಿಗಲಿಲ್ಲ. ಆಡಿದ ಮೂರು ಏಕದಿನ ಪಂದ್ಯಗಳಲ್ಲೂ ಹರಿಣಗಳನ ವಿರುದ್ಧ ಮುಗ್ಗರಿಸಿತು. ಪಾರ್ಲ್‌ನ ಬೊಲ್ಯಾಂಡ್ ಪಾರ್ಕ್‌ನಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ , ಟೀಂ ಇಂಡಿಯಾ ವಿರುದ್ಧ 31 ರನ್‌ಗಳ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ಏಕದಿನ ಸರಣಿಯಲ್ಲಿ ತಂಡವನ್ನ ಮುನ್ನಡೆಸಿದ್ರು.
ಇನ್ನು ಪಾರ್ಲ್‌ನ ಬೊಲ್ಯಾಂಡ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಟೀಂ ಇಂಡಿಯಾ ನೀಡಿದ 288 ರನ್‌ಗಳ ಗುರಿಯನ್ನ ಸುಲಭವಾಗಿ ಬೆನ್ನತ್ತಿ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳ ಜಯ ಸಾಧಿಸಿತು. ಇದಲ್ಲದೆ ಇದೇ ಸ್ಟೇಡಿಯಂನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲೂ ಭಾರತ ಮುಗ್ಗರಿಸಿ ವೈಟ್‌ವಾಶ್ ಮುಖಭಂಗ ಅನುಭವಿಸಿತು.
ಋತುರಾಜ್‌ಗೆ ಮತ್ತೊಂದು ಅವಕಾಶ ನೀಡಿ: 3ನೇ ಪಂದ್ಯಕ್ಕೆ 2 ಬದಲಾವಣೆ ಸೂಚಿಸಿದ ಆರ್‌ಸಿಬಿ ಕೋಚ್

ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದಿರುವ ದಕ್ಷಿಣ ಆಫ್ರಿಕಾ
ಈಗಾಗಲೇ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಭರ್ಜರಿ ಗೆಲುವು ದಾಖಲಿಸಿರುವ ಹರಿಣಗಳು ಭಾರತದ ಮೇಲೆ ಚುಟುಕು ಫಾರ್ಮೆಟ್‌ನಲ್ಲೂ ಸಹ ಪ್ರಾಬಲ್ಯ ಸಾಧಿಸಿದೆ. ಟೆಸ್ಟ್, ಏಕದಿನ ಸರಣಿ ಬಳಿಕ ಟಿ20 ಸರಣಿಯಲ್ಲೂ ಮೇಲುಗೈ ಸಾಧಿಸುವತ್ತ ಹೆಜ್ಜೆ ಇಟ್ಟಿದೆ.
ಮೊದಲ ಟಿ20 ಪಂದ್ಯದಲ್ಲಿ 212ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಬಳಿಕ ಎರಡನೇ ಟಿ20 ಪಂದ್ಯದಲ್ಲಿ 10 ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್‌ಗಳ ಜಯ ದಾಖಲಿಸಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದು ಗೆದ್ದರೂ ಸಹ ಸರಣಿ ಹರಿಣಗಳ ಕೈವಶವಾಗಲಿದೆ. ಈ ಮೂಲಕ ಒಂದೇ ವರ್ಷದಲ್ಲಿ ಮೂರು ಫಾರ್ಮೆಟ್‌ನಲ್ಲೂ ಸೋಲುವ ಕೆಟ್ಟ ದಾಖಲೆಯ ಹಣೆಪಟ್ಟಿಗೆ ಟೀಂ ಇಂಡಿಯಾ ಸೇರಬಹುದು. ಆದ್ರೆ ಉಳಿದು ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆದ್ದು ಕಂಬ್ಯಾಕ್ ಮಾಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.


Click it and Unblock the Notifications
