ಟಿ20 ಕ್ರಿಕೆಟ್‌ನಲ್ಲಿ 10 ವರ್ಷಗಳ ಬಳಿಕ ಈ ವಿಶೇಷ ದಾಖಲೆ ಮಾಡಿದ ಭುವನೇಶ್ವರ್ ಕುಮಾರ್

ಕಟಕ್‌ನ ಬಾರಬತಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋಲನ್ನ ಕಾಣುವ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 0-2ರ ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಿದ್ರೂ ಸೋತ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಕೇವಲ 148ರನ್ ಕಲೆಹಾಕಿ ಡಿಫೆಂಡ್ ಮಾಡಿಕೊಳ್ಳಲಾಗದೆ ಸೋಲನ್ನ ಅನುಭವಿಸಿತು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರಾಜಯಗೊಂಡಿದ್ದರೂ ಸಹ ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಪ್ರದರ್ಶನ ಉಭಯ ತಂಡಗಳ ಬೌಲರ್‌ಗಳಲ್ಲಿ ನಂಬರ್ 1 ಆಗಿ ಗುರುತಿಸಿಕೊಂಡಿದೆ. ಅದ್ರಲ್ಲೂ ಪವರ್ ಪ್ಲೇ ಓವರ್‌ಗಳಲ್ಲಿ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಭುವಿ 10 ವರ್ಷದ ಬಳಿಕ ಪದಾರ್ಪಣೆ ಪಂದ್ಯದಲ್ಲಿ ಮಾಡಿದ್ದ ಸಾಧನೆಯನ್ನ ಪುನರಾವರ್ತಿಸಿದ್ದಾರೆ.

ಪವರ್ ಪ್ಲೇ ಓವರ್‌ನಲ್ಲಿ 3 ವಿಕೆಟ್ ಪಡೆದ ಭುವಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಕಲೆಹಾಕಿತು. 149ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ ಭುವನೇಶ್ವರ್ ಕುಮಾರ್ ಇನ್ನಿಲ್ಲದಂತೆ ಕಾಡಿದ್ರು. ಪವರ್‌ಪ್ಲೇ ಓವರ್‌ಗಳಲ್ಲಿ ಮೂರು ವಿಕೆಟ್ ಎಗರಿಸಿದ ಭುವಿ 2012ರ ಪದಾರ್ಪಣೆಯ ಟಿ20 ಪಂದ್ಯದಲ್ಲಿ ಮಾಡಿದ್ದ ಸಾಧನೆಯನ್ನ ಮತ್ತೊಮ್ಮೆ ಮಾಡಿದ್ರು.
ರೀಜ್ಹಾ ಹೆಂಡ್ರಿಕ್ಸ್ (4), ಡ್ವೇನ್ ಪ್ರಿಟೋರಿಯಸ್ (4), ರಾಸ್ಸಿ ವ್ಯಾನ್ ಡಸ್ಸೆನ್ (1) ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾಗೆ ಭಾರೀ ಆಘಾತ ನೀಡಿದ್ರು. ಆರಂಭಿಕ ಪವರ್ ಪ್ಲೇ ಓವರ್‌ಗಳಲ್ಲಿ ಮೂರು ವಿಕೆಟ್ ಪಡೆದ ಭುವಿ ತನ್ನ ಕೆರಿಯರ್‌ನಲ್ಲಿ ಎರಡನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. 2012ರಲ್ಲಿ ಪಾಕಿಸ್ತಾನ ವಿರುದ್ಧ ಚೊಚ್ಚಲ ಟಿ20 ಪಂದ್ಯವನ್ನಾಡಿದಾಗಲೂ ಭುವನೇಶ್ವರ್ ಇಂತಹದೇ ದಾಖಲೆ ಮಾಡಿದ್ದರು.

ಆರ್. ಅಶ್ವಿನ್ ದಾಖಲೆ ಮುರಿದ ಅನುಭವಿ ವೇಗಿ
ಭುವನೇಶ್ವರ್ ಕುಮಾರ್ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರ್. ಅಶ್ವಿನ್ ಹೆಸರಿನಲ್ಲಿದ್ದ 61 ವಿಕೆಟ್‌ಗಳ ದಾಖಲೆಯನ್ನ ಮುರಿದಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಮೂರನೇ ಗರಿಷ್ಠ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ್ದಾರೆ.
ರವಿಚಂದ್ರನ್ ಅಶ್ವಿನ್ 51 ಪಂದ್ಯಗಳಲ್ಲಿ 61 ವಿಕೆಟ್ ಪಡೆದಿದ್ದು, 6.79 ಎಕಾನಮಿ ಮತ್ತು 21.27ರ ಸರಾಸರಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಇವರ ಬೌಲಿಂಗ್ ಬೆಸ್ಟ್ 8ರನ್‌ಗೆ 4 ವಿಕೆಟ್ ಪಡೆದಿರುವುದು ಆಗಿದೆ.
ಈ ದಾಖಲೆ ಮುರಿದ ಭುವಿ 61 ಪಂದ್ಯಗಳಲ್ಲಿ 63 ವಿಕೆಟ್ ಪಡೆಯುವ ಮೂಲಕ ಭಾರತದ ಮೂರನೇ ಗರಿಷ್ಠ ವಿಕೆಟ್ ಟೇಕರ್ ಆಗಿದ್ದಾರೆ. 6.99 ಎಕಾನಮಿ ಹಾಗೂ 24.06 ಸರಾಸರಿ ಜೊತೆಗೆ ಬೆಸ್ಟ್ 5/24 ಆಗಿದೆ.
ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಯುಜವೇಂದ್ರ ಚಹಾಲ್ (69), ಜಸ್ಪ್ರೀತ್ ಬುಮ್ರಾ (67) ಮೊದಲೆರಡು ಸ್ಥಾನ ಪಡೆದಿದ್ದಾರೆ.
IND vs SA: ದ.ಆಫ್ರಿಕಾ ವಿರುದ್ಧದ ಹೀನಾಯ ಸೋಲಿಗೆ ಕಾರಣರಾದ ಇಬ್ಬರು ಯಾರೆಂದು ಬಿಚ್ಚಿಟ್ಟ ಪಂತ್!

ಪವರ್ ಪ್ಲೇ ಓವರ್‌ಗಳಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್
ಭುವನೇಶ್ವರ್ ಕುಮಾರ್ ಪವರ್‌ಪ್ಲೇ ಓವರ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದು, ನ್ಯೂಜಿಲೆಂಡ್‌ನ ಟಿಮ್ ಸೌಥಿ ಮತ್ತು ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ ಬದ್ರಿ ಜೊತೆಗೆ ಅಗ್ರ ಸ್ಥಾನವನ್ನ ಹಂಚಿಕೊಂಡಿದ್ದಾರೆ. ಈ ಮೂವರ್ ಬೌಲರ್ಸ್ ಪವರ್‌ಪ್ಲೇ ಓವರ್‌ಗಳಲ್ಲಿ 33 ವಿಕೆಟ್ ಪಡೆದಿದ್ದಾರೆ.
IND vs SA: ಕಂಟಕವಾದ ಕ್ಲಾಸೆನ್; 2ನೇ ಟಿ ಟ್ವೆಂಟಿಯನ್ನೂ ಸೋತು ಸಂಕಷ್ಟಕ್ಕೆ ಸಿಲುಕಿದ ಭಾರತ

ವೈಯಕ್ತಿಕ ಎರಡನೇ ಬೆಸ್ಟ್ ಬೌಲಿಂಗ್ ಮಾಡಿದ ಭುವನೇಶ್ವರ್
ಭುವನೇಶ್ವರ್ ಕುಮಾರ್ ಟೀಂ ಇಂಡಿಯಾ ಎರಡನೇ ಬೆಸ್ಟ್ ಬೌಲಿಂಗ್ ಪ್ರದರ್ಶನ ಮಾಡುವ ಮೂಲಕ ಮಿಂಚಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭುವಿ 4 ಓವರ್‌ಗಳಲ್ಲಿ 17 ಡಾಟ್ ಬಾಲ್, 13 ರನ್ ನೀಡಿ 4 ಪ್ರಮುಖ ವಿಕೆಟ್‌ಗಳನ್ನ ಕಬಳಿಸಿದ್ದಾರೆ. ಇದಕ್ಕೂ ಮೊದಲು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಬೆಸ್ಟ್ ಬೌಲಿಂಗ್ ಮಾಡಿದ್ದ ಪೇಸರ್ 24 ರನ್ ನೀಡಿ 5 ವಿಕೆಟ್ ಉರುಳಿಸಿದ್ದರು.
ಇದೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬೌಲರ್ ಕಗಿಸೊ ರಬಾಡ ಟಿ20 ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದು, ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಹೆನ್ರಿಕ್ ಕ್ಲಾಸೆನ್ ಟಿ20ಯಲ್ಲಿ ವೈಯಕ್ತಿಕ ವೈಯಕ್ತಿಕ ಬೆಸ್ಟ್ ಸ್ಕೋರ್ 46 ಎಸೆತಗಳಲ್ಲಿ 81 ರನ್ ಕಲೆಹಾಕಿದ್ದಾರೆ. ಇದಕ್ಕೂ ಮೊದಲು 2018ರಲ್ಲಿ ಭಾರತ ವಿರುದ್ಧವೇ 69 ರನ್ ಸಿಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications