Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನದ ಪ್ರಮುಖ ಬೌಲರ್‌ ಶಾಹಿನ್ ಅಫ್ರಿದಿಗೆ ಬೌಲಿಂಗ್ ಟಿಪ್ಸ್‌ ನೀಡಿದ ಮೊಹಮ್ಮದ್ ಶಮಿ

Shaheen afridi and M shami

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವನ್ನ ಸಾಧಿಸಿದ್ದಲ್ಲದೆ ಆಸ್ಟ್ರೇಲಿಯಾವನ್ನು ಅಂತಿಮ ಓವರ್‌ನಲ್ಲಿ ಸೋಲಿಸಿದೆ. ಅದ್ರಲ್ಲೂ ಟೀಂ ಇಂಡಿಯಾ ಹಿರಿಯ ವೇಗಿ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ಮಾಡುವ ಮೂಲಕ ಕಾಂಗರೂಗಳಿಗೆ ಶಾಕ್ ನೀಡಿದ್ರು.

ಅಂತಿಮ ಓವರ್‌ನಲ್ಲಿ ಯಾರೂ ಊಹಿಸದ ರೀತಿಯಲ್ಲಿ ಮೊಹಮ್ಮದ್ ಶಮಿ ಕಾಂಗರೂಗಳನ್ನ ಕಟ್ಟಿಹಾಕಿದ್ರು. ಮೊದಲೆರಡು ಎಸೆತಗಳಲ್ಲಿ ತಲಾ 2 ರನ್ ಬಿಟ್ಟುಕೊಟ್ಟಿದ್ದ ಮೊಹಮ್ಮದ್ ಶಮಿ ಮೂರನೇ ಎಸೆತದಲ್ಲಿ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್‌ನಿಂದಾಗಿ ಪ್ಯಾಟ್ ಕಮಿನ್ಸ್ ವಿಕೆಟ್ ಕಬಳಿಸಿದ್ರು. ಇದರ ನಂತರದ ಎಸೆತದಲ್ಲೇ ಆಷ್ಟನ್ ಅಗರ್ ರನೌಟ್‌ಗೆ ಬಲಿಯಾಗಿದ್ದು ಆಸಿಸ್‌ಗೆ ದೊಡ್ಡ ಹೊಡೆತ ನೀಡಿತು.

ಕೊನೆಯ ಎರಡು ಎಸೆತಗಳಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 7ರನ್‌ಗಳು ಬೇಕಿತ್ತು. ಐದನೇ ಎಸೆತದಲ್ಲಿ ಯಾರ್ಕರ್ ಹಾಕುವ ಮೂಲಕ ಜೋಸ್ ಇಂಗ್ಲಿಸ್‌ ಅನ್ನು ಶಮಿ ಬೌಲ್ಡ್ ಮಾಡಿದ್ರು. ಅಂತಿಮ ಎಸೆತದಲ್ಲಿ ಒಂದು ಸಿಕ್ಸರ್ ಸಿಡಿಸಿದ್ರೆ ಸ್ಕೋರ್ ಸಮಗೊಳ್ಳುತ್ತಿತ್ತು. ಆದ್ರೆ ಯಾವುದೇ ಅವಕಾಶ ನೀಡದ ಭಾರತದ ಅನುಭವಿ ಪೇಸರ್ ಶಮಿ ಪರ್ಫೆಕ್ಟ್‌ ಯಾರ್ಕರ್ ಹಾಕುವ ಮೂಲಕ ಕೇನ್ ರಿಚರ್ಡ್ಸನ್‌ ಬೌಲ್ಡ್‌ ಮಾಡುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಕೊನೆಯ ಓವರ್‌ನಲ್ಲಿ 4 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಈ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆಯಲ್ಲಿ ಪಾಕಿಸ್ತಾನದ ಸ್ಟಾರ್ ಬೌಲರ್‌ ಶಾಹಿನ್ ಅಫ್ರಿದಿಗೆ ಬೌಲಿಂಗ್ ಟಿಪ್ಸ್‌ ನೀಡಿದ್ದಾರೆ. ಬೌಲಿಂಗ್ ಸೀಮ್‌ ಹಿಡಿಯುವ ಕುರಿತಾಗಿ ಮೊಹಮ್ಮದ್ ಶಮಿ ಬಳಿ ಪ್ರಶ್ನೆಯನ್ನ ಕೇಳಿದ್ದಾರೆ.

ಈ ಕುರಿತಾದ ವೀಡಿಯೋವನ್ನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಿದೆ. ಈ ವೀಡಿಯೋದಲ್ಲಿ ಶಮಿ ತನ್ನ ಎಡಗೈನಲ್ಲಿ ಚೆಂಡು ಹಿಡಿದು ''ಚೆಂಡಿನ ಬಿಡುಗಡೆ ಗುರಿ ಸರಿಯಾಗಿದ್ರೆ, ಸೀಮ್ ಸಹ ಉತ್ತಮವಾಗಿರುತ್ತದೆ'' ಎಂದು ಹೇಳಿದ್ದಾರೆ.

ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾವನ್ನು ಸೇರಿಕೊಂಡಿರುವ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮಿಂಚಿನ ದಾಳಿ ನಡೆಸಿ ಅದ್ಭುತ ಕಂಬ್ಯಾಕ್ ಮಾಡಿದ್ದಾರೆ. 1 ಓವರ್‌ನಲ್ಲಿ 4 ಡಾಟ್ ಬಾಲ್, 4 ರನ್ ಹಾಗೂ 3 ವಿಕೆಟ್ ಪಡೆದ ಮೊಹಮ್ಮದ್ ಶಮಿ ಬೌಲಿಂಗ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

Story first published: Monday, October 17, 2022, 19:30 [IST]
Other articles published on Oct 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+