Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ ಜತೆ ಮಲ್ಯ ಕಂಡು ಕಿರಿಕಿರಿ ಅನುಭವಿಸಿದ ಆಟಗಾರರು!

ಲಂಡನ್, ಜೂನ್ 06: ಕೋಹ್ಲಿ ನೇತೃತ್ವದ ಟೀಂ ಇಂಡಿಯಾ ದೇಣಿಗೆ ಕಾರ್ಯಕ್ರಮದಲ್ಲಿ ಉದ್ಯಮಿ ವಿಜಯ್ ಮಲ್ಯ ಅವರ ಆಗಮನವಾಗುತ್ತಿದ್ದಂತೆ ತಂಡದ ಅನೇಕ ಆಟಗಾರರು ಮುಜುಗರದಿಂದ ಅತ್ತಿತ್ತ ನೋಡ ತೊಡಗಿದ್ದಾರಂತೆ.

ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು

ಮನಿಲಾಂಡ್ರಿಂಗ್ ಕೇಸಿನ ಆರೋಪ ಹೊತ್ತಿರುವ ವಿಜಯ್ ಮಲ್ಯ ಅವರು ಭಾರತ ತೊರೆದು ಇಂಗ್ಲೆಂಡಿನಲ್ಲಿ ನೆಲೆಸಿದ್ದು, ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರಲು ತನಿಖಾ ತಂಡಗಳು ಹರ ಸಾಹಸ ಪಡುತ್ತಿವೆ.[]

Indian players 'uncomfortable' as Vijay Mallya attends Virat Kohli's event

ಆದರೆ, ಇಂಗ್ಲೆಂಡಿನಲ್ಲಿ ಆರಾಮಾಗಿ ಓಡಾಡಿಕೊಂಡಿರುವ ಮಲ್ಯ ಅವರು ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕರೆಗೆ ಓಗೊಟ್ಟು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ನಡುವಿನ ಪಂದ್ಯವನ್ನು ನೋಡಲು ಮೈದಾನದಲ್ಲಿ ಆಗಮಿಸಿದ್ದ ಮಲ್ಯ ಅವರು ಭಾರತ ಆಡುವ ಉಳಿದ ಪಂದ್ಯಗಳನ್ನು ನೋಡಲು ಹೋಗುವುದಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ ಕೂಡ ಮಾಡಿದ್ದಾರೆ.['ಕುಂಬ್ಳೆ ಆಯ್ಕೆ ಬಗ್ಗೆ ಕೊಹ್ಲಿಗೆ ಅಸಮಾಧಾನವಿತ್ತು']

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಲಂಡನ್ನಿನಲ್ಲಿ ಜಸ್ಟೀಸ್ ಅಂಡ್ ಕೇರ್ ಸಂಸ್ಥೆಗೆ ಹಣ ಸಂಗ್ರಹಿಸಲು ಚಾರಿಟಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಡಿನ್ನರ್ ಜತೆಗೆ ದೇಣಿಗೆ ಸಂಗ್ರಹ ಮಾಡಲಾಯಿತು. [ಮ್ಯಾಚ್ ನೋಡಲು ಬಂದ ಮಲ್ಯಗೆ ಆಯ್ತು ಕೆಟ್ಟ ಅನುಭವ!]

ಈ ಕಾರ್ಯಕ್ರಮಕ್ಕೆ ಮಲ್ಯ ಆಗಮಿಸಿದ್ದು, ಹಲವರಿಗೆ ಇರುಸು ಮುರುಸು ಉಂಟು ಮಾಡಿದೆ. ಅವಧಿಗೂ ಮುನ್ನವೇ ರಾತ್ರಿ ಊಟ ಮುಗಿಸಿ ಅನೇಕ ಆಟಗಾರರು ಜಾಗ ಬಿಟ್ಟು ತಮ್ಮ ಹೋಟೆಲ್ ಗೆ ತೆರಳಿದರು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಸಿಸಿಐ ಪ್ರತಿನಿಧಿಯೊಬ್ಬರು ಹೇಳಿದ್ದಾರೆ. (ಪಿಟಿಐ)

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+