
ಮುಂದಿನ 9 ವರ್ಷಗಳಲ್ಲಿ ಭಾರತ ಐಸಿಸಿ ಟ್ರೋಫಿ ಬೇಟೆಯಾಡಲಿದೆ
2022 ರಿಂದ 2031 ರ ನಡುವೆ ನಡೆಯಲಿರುವ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡವು ಪ್ರಮುಖ ಪ್ರಶಸ್ತಿ ಸ್ಪರ್ಧಿಗಳಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಅವಧಿಯಲ್ಲಿ ತಂಡವು ಐದು ಟಿ20 ವಿಶ್ವಕಪ್‌ಗಳು, ಮೂರು 50 ಓವರ್‌ಗಳ ವಿಶ್ವಕಪ್‌ಗಳು ಮತ್ತು ಎರಡು ಚಾಂಪಿಯನ್ಸ್ ಟ್ರೋಫಿಗಳಲ್ಲಿ ಭಾಗವಹಿಸಲಿದೆ. ಇದರಲ್ಲಿ ಬಹುತೇಕ ಟೂರ್ನಿಯಲ್ಲಿ ಗೆಲುವಿನ ನೆಚ್ಚಿನ ತಂಡವಾಗಿರಲಿದೆ ಎಂದು ಗಂಗೂಲಿ ಹೇಳಿದ್ದಾರೆ.
2021 ಫ್ಲ್ಯಾಶ್‌ಬ್ಯಾಕ್: ಈ ವರ್ಷ 2 ಐಸಿಸಿ ಟ್ರೋಫಿಗಳನ್ನ ಕೈ ಚೆಲ್ಲಿದ ಟೀಂ ಇಂಡಿಯಾ

2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಗೆಲುವು
ಭಾರತ ಕೊನೆಯ ಬಾರಿಗೆ 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು. ಎಂಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಈ ಪ್ರಶಸ್ತಿಯನ್ನು ಜಯಿಸಿತ್ತು. ಆದರೆ, ಇದರ ನಂತರ ಟೀಂ ಇಂಡಿಯಾ 2014ರ ಟಿ20 ವಿಶ್ವಕಪ್, 2015ರ ಏಕದಿನ ವಿಶ್ವಕಪ್, 2016ರ ಟಿ20 ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿ, 2019ರ ಏಕದಿನ ವಿಶ್ವಕಪ್, 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ: ರೋಹಿತ್ ಶರ್ಮಾ ಔಟ್

ಐಸಿಸಿ ಟೂರ್ನಿ ಗೆಲುವನ್ನ ಎದುರು ನೋಡುತ್ತಿದ್ದೇನೆ: ಸೌರವ್ ಗಂಗೂಲಿ
ಮುಂದಿನ 9 ವರ್ಷಗಳಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಅದರಲ್ಲೂ 2022 ರಲ್ಲೇ ಟಿ20 ವಿಶ್ವಕಪ್ ನಡೆಯಲಿದೆ. ಹಾಗೆಯೇ 2023 ರಲ್ಲಿ ಭಾರತದಲ್ಲೇ ಏಕದಿನ ವಿಶ್ವಕಪ್ ಕೂಡ ಜರುಗಲಿದೆ. ಇದಲ್ಲದೆ 2031 ರವರೆಗೆ ಪ್ರತಿ ವರ್ಷ ಐಸಿಸಿ ಟೂರ್ನಿಗಳು ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸವಿದೆ ಎಂದು ಗಂಗೂಲಿ ತಿಳಿಸಿದ್ದಾರೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋಲು ಮತ್ತು 2021ರ ಟಿ20 ವಿಶ್ವಕಪ್‌ನಲ್ಲಿ ಲೀಗ್ ಹಂತದಲ್ಲೇ ಟೀಮ್ ಇಂಡಿಯಾ ಹೊರಬಿದ್ದಿತ್ತು. ಇದೀಗ ನಾನು ಕೂಡ ಐಸಿಸಿ ಟೂರ್ನಿ ಗೆಲ್ಲುವುದನ್ನು ಎದುರು ನೋಡುತ್ತಿದ್ದೇನೆ ಎಂದು ಗಂಗೂಲಿ ತಿಳಿಸಿದ್ದಾರೆ.

2023ರ ಏಕದಿನ ವಿಶ್ವಕಪ್ ಆತಿಥ್ಯ ವಹಿಸಲಿದೆ ಭಾರತ
ಭಾರತವು 2023 ರ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದ್ದ, ಈ ಮೂಲಕ ಏಕೈಕ ಆತಿಥ್ಯ ವಹಿಸುವ ರಾಷ್ಟ್ರವಾಗಲಿದೆ. ಈ ಹಿಂದೆ 1987, 1996 ಮತ್ತು 2011 ರಲ್ಲಿ, ಅವರು ಪಾಕಿಸ್ತಾನ (1987 ಮತ್ತು 1996), ಶ್ರೀಲಂಕಾ (1996 ಮತ್ತು 2011) ಮತ್ತು ಬಾಂಗ್ಲಾದೇಶ (2011) ಜೊತೆ ಸಹ ಆತಿಥೇಯರಾಗಿದ್ದರು.
ಇನ್ನು ಭಾರತವು , ಶ್ರೀಲಂಕಾ ಜೊತೆಗೆ 2026ರ ಟಿ20 ವಿಶ್ವಕಪ್ ಅನ್ನು ಸಹ ಹೋಸ್ಟ್ ಮಾಡಲಿದೆ. 2029 ರಲ್ಲಿ, ಭಾರತವು ಚಾಂಪಿಯನ್ಸ್ ಟ್ರೋಫಿಯ ಏಕೈಕ ಆತಿಥ್ಯ ವಹಿಸಲಿದೆ ಮತ್ತು ನಂತರ ಬಾಂಗ್ಲಾದೇಶದೊಂದಿಗೆ 2031 ರಲ್ಲಿ 50 ಓವರ್‌ಗಳ ವಿಶ್ವಕಪ್ ಸಹ ಆತಿಥ್ಯ ವಹಿಸಲಿದೆ. ಇದರ ನಡುವೆ ಭಾರತವು ಐಸಿಸಿ ಟ್ರೋಫಿ ಗೆಲ್ಲಬಹುದು ಎಂದು ಸೌರವ್ ಗಂಗೂಲಿ ಹೇಳಿದ್ದು, ಪ್ರತಿ ಪಂದ್ಯಾವಳಿಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.


Click it and Unblock the Notifications