For Quick Alerts
ALLOW NOTIFICATIONS  
For Daily Alerts
 

ರಿಷಭ್ ಪಂತ್ ಬಯಸಿದ ರೀತಿಯಲ್ಲಿ ಬ್ಯಾಟಿಂಗ್‌ಗೆ ಅವಕಾಶ ನೀಡುತ್ತೇವೆ: ರೋಹಿತ್ ಶರ್ಮಾ

Rishabh pant

ಟೀಂ ಇಂಡಿಯಾ ಡ್ಯಾಶಿಂಗ್ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್, ಶ್ರೀಲಂಕಾ ವಿರುದ್ಧ ಅಬ್ಬರದ ಆಟವಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಪಂತ್‌ ಬ್ಯಾಟಿಂಗ್ ಮಾಡುವ ಶೈಲಿಯನ್ನ ಆಸ್ಟ್ರೇಲಿಯಾದ ಲೆಜೆಂಡರಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆ್ಯಡಂ ಗಿಲ್‌ಕ್ರಿಸ್ಟ್‌ಗೆ ಹೋಲಿಸಲಾಗುತ್ತದೆ. ಹೀಗೆ ತನ್ನದೇ ಶೈಲಿಯಲ್ಲಿ ಬ್ಯಾಟ್ ಬೀಸುವ ಪಂತ್ ಅವರನ್ನು ಅವರು ಬಯಸಿದ ರೀತಿಯಲ್ಲಿ ಬ್ಯಾಟಿಂಗ್ ಮಾಡಲು ಬಿಡುವುದಾಗಿ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಶ್ರೀಲಂಕಾವನ್ನು ಸೋಲಿಸೋಕೆ ರೋಹಿತ್ ಗೆ ಹೆಲ್ಪ್‌ ಮಾಡಿದ್ದು ಯಾರು? | Oneindia Kannada

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯುವುದು ತಮ್ಮ ಗುರಿಯಾಗಿರುವುದರಿಂದ, ಪಂತ್‌ ಇಷ್ಟ ಪಡುವಂತೆ ಬ್ಯಾಟಿಂಗ್ ಮಾಡಲು ಬಿಡೋದಕ್ಕೆ ತಂಡದ ಮ್ಯಾನೇಜ್‌ಮೆಂಟ್ ಸಿದ್ಧವಾಗಿದೆ ಎಂದು ಭಾರತೀಯ ನಾಯಕ ರೋಹಿತ್ ಶರ್ಮಾ ಸೋಮವಾರ ಹೇಳಿದ್ದಾರೆ.

ಪಂತ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಆಡಬಲ್ಲರು

ಪಂತ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಆಡಬಲ್ಲರು

ರಿಷಭ್ ಪಂತ್‌ ಪರಿಸ್ಥಿತಿಯನ್ನ ಚೆನ್ನಾಗಿ ಅರಿತುಕೊಂಡು, ಪಂದ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನ ಹೊಂದಿದ್ದಾರೆ. ಆತ ತನ್ನದೇ ಆದ ಬ್ಯಾಟಿಂಗ್ ಯೋಜನೆಯನ್ನ ಹೊಂದಿದ್ದಾನೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿ್ದಾರೆ.

'' ಆತ ಹೇಗೆ ಬ್ಯಾಟಿಂಗ್ ಮಾಡಬಲ್ಲ ಎಂಬುದು ನಮಗೆ ತಿಳಿದಿದೆ. ತಂಡವಾಗಿ ನಾವು ಆತನಿಗೆ ಬೇಕಾದ ರೀತಿಯಲ್ಲಿ ಬ್ಯಾಟಿಂಗ್ ಮಾಡುವ ಸ್ವಾತಂತ್ರ್ಯ ನೀಡಲು ಬಯಸುತ್ತೇವೆ, ಆದ್ರೆ ಆಟದ ಪರಿಸ್ಥಿತಿ ನೆನಪಿನಲ್ಲಿಡಬೇಕು. ಆಟವು ಹೇಗೆ ಸಾಗುತ್ತಿದೆ ಎಂಬುದನ್ನ ಅರಿತು ಬ್ಯಾಟಿಂಗ್ ಮಾಡುವ ಯೋಜನೆಯನ್ನ ಆತ ಅರಿತುಕೊಳ್ಳಲು ಬಯಸುತ್ತೇವೆ.

ಆತನ ಆಟದ ಯೋಜನೆಗಳನ್ನ ಗಮನಿಸಿದ್ರೆ, ಆತ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿರುವುದು ಕಂಡುಬರುತ್ತಿದೆ. ಕೆಲವೊಮ್ಮೆ ಆತ ಕೆಟ್ಟ ಶಾಟ್‌ಗೆ ಔಟಾದಾಗ, ಆ ಶಾಟ್‌ ಯಾಕೆ ಆಡಿದನು ಎಂದು ತಲೆ ಚಚ್ಚಿಕೊಳ್ಳುತ್ತೇವೆ. ಆದ್ರೆ ಆತ ಮತ್ತೆ ಬ್ಯಾಟಿಂಗ್ ಮಾಡುವಾಗ ಅದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಾಗಿರಬೇಕು'' ಎಂದು ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ

ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ

ಬೆಂಗಳೂರಿನ ಎನ್. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಹಾಗೂ ಡೇ & ನೈಟ್ ಟೆಸ್ಟ್‌ ಪಂದ್ಯದಲ್ಲಿ ರಿಷಭ್ ಪಂತ್ ಮಾಜಿ ನಾಯಕ ಕಪಿಲ್ ದೇವ್ ಹೆಸರಲ್ಲಿದ್ದ 40 ವರ್ಷಗಳ ಹಳೆಯ ದಾಖಲೆಯನ್ನ ಪುಡಿಗಟ್ಟಿದ್ದರು. ಕೇವಲ 28 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ರಿಷಭ್ ಭಾರತ ಪರ ಅತ್ಯಂತ ವೇಗದ ಅರ್ಧಶತಕ ದಾಖಲಿಸಿದ್ರು.

1982ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಪಿಲ್ ದೇವ್ 30 ಎಸೆತಗಳಲ್ಲಿ 50 ರನ್ ಕಲೆಹಾಕಿದ್ದರು. ಆದ್ರೆ ಇದೀಗ ಬರೋಬ್ಬರಿ 40 ವರ್ಷದ ಬಳಿಕ ಪಂತ್ ತನ್ನ ಹೆಸರಿಗೆ ಈ ದಾಖಲೆ ಬರೆದುಕೊಂಡಿದ್ದಾನೆ. ಹೀಗಾಗಿಯೇ ರೋಹಿತ್ ಶರ್ಮಾ ರಿಷಭ್ ಪಂತ್‌ರ ಆಟವು ತಂಡದ ಫಲಿತಾಂಶದ ಮೇಲೆ ತ್ವರಿತ ಪರಿಣಾಮ ಬೀರುವುದರಿಂದ, ಆತ ಬಯಸಿದಂತೆ ಬ್ಯಾಟಿಂಗ್ ಮಾಡಲು ಅವರು ಸಿದ್ಧರಿದ್ದಾರೆ ಎಂದು ಹೇಳಿದರು.

ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್ ಯೊಯೊ ಟೆಸ್ಟ್ ಪಾಸ್

ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಭಾರತದ ಮೊದಲ ವಿಕೆಟ್ ಕೀಪರ್

ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಭಾರತದ ಮೊದಲ ವಿಕೆಟ್ ಕೀಪರ್

ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ರಿಷಭ್ ಪಂತ್‌ಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ನೀಡಲಾಯಿತು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ಸಾಧನೆಯನ್ನ ರಿಷಭ್ ಪಂತ್ ಮಾಡಿದ್ದಾರೆ.

ಎರಡು ಪಂದ್ಯಗಳಲ್ಲಿ ರಿಷಭ್ 61.67ರ ಬ್ಯಾಟಿಂಗ್ ಸರಾಸರಿಯಲ್ಲಿ 185 ರನ್ ಕಲೆಹಾಕಿದ್ದು, 23 ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸಿದ್ದಾರೆ. ಸ್ಟ್ರೈಕ್‌ರೇಟ್ 120.13ರಲ್ಲಿ ಬ್ಯಾಟ್ ಬೀಸಿರುವುದು ಗಮನಾರ್ಹ.

ಅಭಿಮಾನಿಗಳು ಈ ಗೆಲುವಿನ ಸಂಭ್ರಮ ಇಮ್ಮಡಿಗೊಳಿಸಿದರು: ಬೆಂಗಳೂರು ಪ್ರೇಕ್ಷಕರ ಬೆಂಬಲಕ್ಕೆ ತಲೆದೂಗಿದ ರೋಹಿತ್

ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿಕೆಗೊಂಡ ಭಾರತ

ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿಕೆಗೊಂಡ ಭಾರತ

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್‌ ಟೇಬಲ್‌ನಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನ ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಭಾರತ ಶೇಕಡಾ 58.33ರಷ್ಟು ಪಾಯಿಂಟ್ಸ್‌ ಹೊಂದಿದ್ದು, ಮೊದಲ ಮೂರು ಸ್ಥಾನಗಳಲ್ಲಿ ಆಸ್ಟ್ರೇಲಿಯಾ (77.77%), ಪಾಕಿಸ್ತಾನ (66.66%) ದಕ್ಷಿಣ ಆಫ್ರಿಕಾ (60.00%) ಇದೆ. ಇಂಗ್ಲೆಂಡ್ ಪಾಯಿಂಟ್ಸ್ ಟೇಬಲ್‌ನಲ್ಲಿ ಎಲ್ಲರಿಗಿಂತ ತಳಮುಟ್ಟಿದೆ (11.67%).

Story first published: Tuesday, March 15, 2022, 8:54 [IST]
Other articles published on Mar 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+