ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್ ಯೊಯೊ ಟೆಸ್ಟ್ ಪಾಸ್

Suryakumar yadav

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ನ ಆರಂಭಕ್ಕೆ ಇನ್ನು 11 ದಿನಗಳು ಬಾಕಿ ಉಳಿದಿದೆ. ಇದರೊಂದಿಗೆ ಎಲ್ಲಾ ತಂಡಗಳು ಮೆಗಾ ಲೀಗ್‌ಗೆ ಸಿದ್ಧತೆ ನಡೆಸಿವೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬಿಸಿಸಿಐ ವಿಶೇಷ ಶಿಬಿರ ಆಯೋಜಿಸಿದ್ದು, ಐಪಿಎಲ್‌ನಲ್ಲಿ ಆಡಲು ಬಹುತೇಕ ಆಟಗಾರರು ಪಾಲ್ಗೊಂಡು ತರಬೇತಿ ನಡೆಸಿದ್ದಾರೆ.

ಈ ಫಿಟ್ನೆಸ್ ಶಿಬಿರದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಆಟಗಾರರು ತಮ್ಮ ಫಿಟ್ನೆಸ್ ಸುಧಾರಿಸಿಕೊಂಡಿದ್ದಾರೆ. ಅಲ್ಲದೆ, ಎನ್‌ಸಿಎ ನಡೆಸಿದ ಫಿಟ್‌ನೆಸ್‌ನ ಯೋ-ಯೋ ಪರೀಕ್ಷೆಯಲ್ಲಿ ಹಲವು ಆಟಗಾರರು ಉತ್ತೀರ್ಣರಾಗಿದ್ದಾರೆ.

ಯೊಯೊ ಪರೀಕ್ಷೆಯಲ್ಲಿ ಉತ್ತೀರ್ಣರಾದವರಲ್ಲಿ ಶಹಬಾಜ್ ಅಹ್ಮದ್, ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಭುವನೇಶ್ವರ್ ಕುಮಾರ್ ಮತ್ತು ಉಮ್ರಾನ್ ಮಲಿಕ್ ಸೇರಿದ್ದಾರೆ. ಯೋಯೋ ಟೆಸ್ಟ್‌ನಲ್ಲಿ ಉತ್ತೀರ್ಣರಾಗುವುದರೊಂದಿಗೆ, ಅವರು ಇದೀಗ ತಮ್ಮ ಐಪಿಎಲ್ ತಂಡಗಳನ್ನು ಸೇರಲು ಸಿದ್ಧರಾಗಿದ್ದಾರೆ. ಯೊಯೊ ಟೆಸ್ಟ್‌ನಲ್ಲಿ ಪಾಸ್ ಆಗಲು ಆಟಗಾರನು 19.5 ಅಂಕಗಳನ್ನು ಗಳಿಸಬೇಕು.

ಏತನ್ಮಧ್ಯೆ, ಭುವನೇಶ್ವರ್ ಕುಮಾರ್ ಮತ್ತು ಉಮ್ರಾನ್ ಮಲಿಕ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಪ್ರತಿನಿಧಿಸಲಿದ್ದಾರೆ. ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ. ಶಹಬಾಜ್ ಅಹ್ಮದ್ ನವದೀಪ್ ಸೈನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ. ಶಾರ್ದೂಲ್ ಠಾಕೂರ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ.

RCB camp ಸೇರಿಕೊಂಡ ಮೊದಲ ಆಟಗಾರ Faf Quarantine ಶುರು | Oneindia Kannada

ಐಪಿಎಲ್ 2022 ಇದೇ ತಿಂಗಳ 26 ರಿಂದ ಆರಂಭವಾಗಲಿದೆ. ಕಳೆದ ವರ್ಷ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಎದುರಿಸಲಿದೆ. 2 ತಿಂಗಳ ಕಾಲ ನಡೆಯಲಿರುವ ಮೆಗಾ ಐಪಿಎಲ್ ಲೀಗ್ ಮೇ 29 ರಂದು ಅಂತಿಮ ಪಂದ್ಯದೊಂದಿಗೆ ಮುಕ್ತಾಯವಾಗಲಿದೆ. ಲೀಗ್ ಹಂತದಲ್ಲಿ 70 ಪಂದ್ಯಗಳು ನಡೆಯಲಿದ್ದರೆ, 4 ಪಂದ್ಯಗಳು ಪ್ಲೇ ಆಫ್‌ನಲ್ಲಿ ನಡೆಯಲಿವೆ. ಹೀಗಾಗಿ ಈ ಋತುವಿನಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ.

Story first published: Tuesday, March 15, 2022, 13:11 [IST]
Other articles published on Mar 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X