Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Handshake Controversy: ಭಾರತದ ವಿರುದ್ಧ PCB ದೂರು: ಅಖ್ತರ್ ಹೇಳಿದ್ದೇನು?

ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ದುಬೈನಲ್ಲಿ ಕಾದಾಟ ನಡೆಸಿದವು. ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ "ಎ" ಗುಂಪಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ 7 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ತನ್ನ ಪ್ರದರ್ಶನದಿಂದ ಸದ್ದು ಮಾಡುತ್ತಿದೆ. ಆದರೆ ಪಾಕ್‌ ಮಾಧ್ಯಮದಲ್ಲಿ ಪಾಕ್ ಆಟಗಾರರೊಂದಿಗೆ ಕೈ ಕುಲುಕದೇ ಇರುವುದೇ ದೊಡ್ಡ ಚರ್ಚಾ ವಸ್ತುವಾಗಿದೆ.

ಟೀಮ್ ಇಂಡಿಯಾದ ವಿರುದ್ಧ ಟಾಸ್‌ ಗೆದ್ದ ಪಾಕ್‌ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ನಾಯಕನ ನಿರ್ಧಾರವನ್ನು ಬ್ಯಾಟರ್‌ಗಳು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಪರಿಣಾಮ ಪಾಕ್‌ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 127 ರನ್‌ ಕಲೆ ಹಾಕಿತು. ಇನ್ನು ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೀಮ್ ಇಂಡಿಯಾ 3 ವಿಕೆಟ್‌ ಕಳೆದುಕೊಂಡು ಅಗತ್ಯ ರನ್ ಕಲೆ ಹಾಕಿ ಅಬ್ಬರಿಸಿತು. ಈ ಪಂದ್ಯದ ಮುಗಿದ ಬಳಿಕ ಟೀಮ್ ಇಂಡಿಯಾ ಆಟಗಾರರು ಪಾಕ್‌ ಆಟಗಾರರೊಂದಿಗೆ ಹಸ್ತಲಾಘವ ಮಾಡದೇ ಇರುವುದು ದೊಡ್ಡ ಚರ್ಚೆಯಾಗಿದೆ.

Team India s Post-Match Behavior in Asia Cup Sparks Controversy in Pakistan

ಪಂದ್ಯ ಮುಗಿದ ಬಳಿಕ ಸೂರ್ಯಕುಮಾರ್ ಯಾದವ್ ಹಾಗೂ ಶಿವಂ ದುಬೆ ಇಬ್ಬರು ತಮ್ಮ ಪಾಡಿಗೆ ತಾವು ಡ್ರೆಸ್ಸಿಂಗ್ ರೂಮ್‌ನತ್ತ ಮುಖ ಮಾಡಿದರು. ಅಲ್ಲದೆ ಪಂದ್ಯ ಮುಗಿಯುತ್ತಿದ್ದಂತೆ ಡ್ರೆಸ್ಸಿಂಗ್‌ ರೂಮ್‌ ಬಾಗಿಲನ್ನು ಸಹ ಮುಚ್ಚಲಾಯಿತು. ಟೀಮ್ ಇಂಡಿಯಾದ ಆಟಗಾರರು ಮೈದಾನಕ್ಕೆ ಬಂದು ಪಾಕ್‌ ಆಟಗಾರರೊಂದಿಗೆ ಕೈ ಕುಲಕಲಿಲ್ಲ. ಇದರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Story first published: Monday, September 15, 2025, 15:43 [IST]
Other articles published on Sep 15, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+