ಬಿಸಿಸಿಐ ಟೀಂ ಸೇರಿದ ವಿವಿಎಸ್, ಗಂಗೂಲಿ, ತೆಂಡೂಲ್ಕರ್
ಮುಂಬೈ, ಜೂ.01: ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕೆಟ್ ಸಲಹಾ ಸಮಿತಿ ಸೇರಿದ್ದಾರೆ. ಸೋಮವಾರ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಿದ್ದಿದೆ. ಅದರೆ, ರಾಹುಲ್ ದ್ರಾವಿಡ್ ಅವರ ಹೆಸರು ಎಲ್ಲೂ ಕಾಣಿಸಿಕೊಂಡಿಲ್ಲ.
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಈ ವಿಷಯ ಪ್ರಕಟಿಸಿದ್ದಾರೆ. ಜೂ.10ರಿಂದ ಆರಂಭಗೊಳ್ಳಲಿರುವ ಬಾಂಗ್ಲಾ ಪ್ರವಾಸಕ್ಕೆ ಟೀಂ ಇಂಡಿಯಾ ತೆರಳುವ ಮುನ್ನ ಹೊಸ ಕೋಚ್, ಹೊಸ ನಿರ್ದೇಶಕ, ಹೊಸ ಮುಖ್ಯ ಫಿಜಿಯೋಥೆರಪಿಸ್ಟ್ ನೇಮಕವಾಗಲಿದೆ. [ಜೂ.6ರಂದು ಟೀಂ ಇಂಡಿಯಾ ಹೊಸ ಕೋಚ್ ಘೋಷಣೆ]

ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಅವರು ಒಟ್ಟಿಗೆ ಕ್ರಿಕೆಟ್ ಆಡಿದ್ದಾರೆ. ಈಗ ಟೀಂ ಇಂಡಿಯಾದ ಕೋಚ್ ಆಯ್ಕೆ ಹಾಗೂ ಕ್ರಿಕೆಟ್ ಸಂಬಂಧಿಸಿದ ವಿಷಯಗಳಲ್ಲಿ ಬಿಸಿಸಿಐಗೆ ನೆರವಾಗಲಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ. [ಸಚಿನ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿಗೆ ಭರ್ಜರಿ ಉಡುಗೊರೆ]
ಕ್ರಿಕೆಟ್ ಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲೂ ಈ ಮೂವರ ಸಲಹೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪಡೆಯಲಿದೆ ಎಂದು ಅಧ್ಯಕ್ಷ ಜಗನ್ ಮೋಹನ್ ದಾಲ್ಮಿಯಾ ಅವರು ಇಂಡಿಯಾ ಟುಡೇಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)
Story first published: Wednesday, January 3, 2018, 10:03 [IST]
Other articles published on Jan 3, 2018
Read in English: Tendulkar, Ganguly and Laxman join BCCI
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications