For Quick Alerts
ALLOW NOTIFICATIONS  
For Daily Alerts
 

ಸಚಿನ್ -ವಾರ್ನ್ ಜೋಡಿಯಿಂದ ಆಲ್ ಸ್ಟಾರ್ ಟಿ20 ಲೀಗ್!

By Mahesh

ಸಿಡ್ನಿ, ಮೇ.15: ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಶೇನ್ ವಾರ್ನ್ ಅವರು ಹೊಸ ಆಲ್ ಸ್ಟಾರ್ ಟ್ವೆಂಟಿ20 ಲೀಗ್ ಆರಂಭಿಸಲಿದ್ದಾರೆ ಎಂಬ ಸುದ್ದಿ ಶುಕ್ರವಾರ ಬಂದಿದೆ.

'ದಿ ಆಸ್ಟ್ರೇಲಿಯನ್' ಪತ್ರಿಕೆ ವರದಿಯಂತೆ ಈ ಟ್ವಿ20 ಲೀಗ್ ವಿಶ್ವದೆಲ್ಲೆಡೆ ಆಯೋಜನೆಗೊಳ್ಳಲಿದೆ. ಮುಖ್ಯವಾಗಿ ಕ್ರಿಕೆಟ್ ಬಗ್ಗೆ ಹೆಚ್ಚಿನ ಪರಿಚಯವಿಲ್ಲದ ದೇಶಗಳತ್ತ ಬ್ಯಾಟ್ -ಬಾಲ್ ಹಿಡಿದು ಈ ದಿಗ್ಗಜರು ತೆರಳಲಿದ್ದಾರೆ.

ಕ್ರಿಕೆಟ್ ಆಲ್ ಸ್ಟಾರ್‌ಲೀಗ್ ಹೆಸರಿನಲ್ಲಿ ಒಟ್ಟು 25ಸಾವಿರ ಯುಎಸ್ ಡಾಲರ್ ಪ್ರಶಸ್ತಿ ಮೊತ್ತದ ಈ ಪಂದ್ಯಾವಳಿಯಲ್ಲಿ ಕ್ರಿಕೆಟ್ ದಿಗ್ಗಜರುಗಳಾದ ಶೇನ್‌ವಾರ್ನ್, ಸಚಿನ್‌ ತೆಂಡೂಲ್ಕರ್, ರಿಕಿ ಪಾಂಟಿಂಗ್, ಆಡಂ ಗಿಲ್‌ಕ್ರಿಸ್ಟ್, ಪ್ಲಿಂಟ್‌ಆಫ್, ಜಾಕ್ ಕ್ಯಾಲಿಸ್, ಮೆಗ್‌ಗ್ರಾ ಸೇರಿದಂತೆ ಹಲವಾರು ಸ್ಟಾರ್‌ಗಳು ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

Tendulkar and Warne to start new Cricket All Stars T20 League: Reports

ಮೂರು ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿ ವಿಶ್ವದ ನಾನಾ ಕಡೆಗಳಲ್ಲಿ ಈ ಪಂದ್ಯಗಳು ನಡೆಯಲಿದ್ದು, ಮುಖ್ಯವಾಗಿ ಅಮೆರಿಕದಿಂದ ಈ ಪಂದ್ಯಾವಳಿಯನ್ನು ಆರಂಭಿಸಲು ಯೋಜಿಸಲಾಗಿದೆ. ಮುಂಬರುವ ಸೆಪ್ಟೆಂಬರ್‌ನಲ್ಲಿ ಇದಕ್ಕೆ ಚಾಲನೆ ಸಿಗುವ ಸಾಧ್ಯತೆಯಿದೆ.

[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]

ತೆಂಡೂಲ್ಕರ್ ಹಾಗೂ ವಾರ್ನ್ ಅವರು ಈಗಾಗಲೇ ಸುಮಾರು 28ಕ್ಕೂ ಅಧಿಕ ಮಾಜಿ ಕ್ರಿಕೆಟರ್ಸ್ ಗಳನ್ನು ಸಂಪರ್ಕಿಸಿದ್ದು, ಎಲ್ಲರೂ ಲೀಗ್ ನಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಬ್ರೆಟ್ ಲೀ ಅವರ ಮ್ಯಾನೇಜರ್ ನೀಲ್ ಮ್ಯಾಕ್ಸ್ ವೆಲ್ ಅವರು ಸುದ್ದಿಯನ್ನು ದೃಢಪಡಿಸಿದ್ದು, ಇಂಥ ಪಂದ್ಯಾವಳಿಯನ್ನು ಆಯೋಜಿಸಿದರೆ ತಪ್ಪೇನಿಲ್ಲ, ಬಿಸಿಸಿಐ, ಐಸಿಸಿ, ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡುವ ನಿರೀಕ್ಷೆಯಿದೆ ಎಂದಿದ್ದಾರೆ.

ನ್ಯೂಯಾರ್ಕ್, ಲಾಸ್ ಏಂಜಲೀಸ್ ಹಾಗೂ ಚಿಕಾಗೋದಲ್ಲಿ ಮೊದಲಿಗೆ ಕ್ರಿಕೆಟ್ ಮೈದಾನ ಹಾಗೂ ಆಟದ ಬಗ್ಗೆ ಚರ್ಚೆ ನಡೆದಿದೆ. ಅದರೆ, ವಾರ್ನ್ ಆಗಲಿ, ಸಚಿನ್ ಆಗಲಿ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಐಕಾನ್ ಆಟಗಾರರೆನಿಸಿರುವ ಸಚಿನ್ ಅವರು ಗುರುವಾರ ಸುನಿಲ್ ಗವಾಸ್ಕರ್ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಯಾವುದೇ ತಂಡ ಖರೀದಿ ಅಥವಾ ಲೀಗ್ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:02 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+