
ಹಸನ್ ಅಲಿ ನೀರಸ ಪ್ರದರ್ಶನ
ಪೇಸ್ ಬೌಲಿಂಗ್ ವಿಭಾಗದಲ್ಲಿ ಪಾಕಿಸ್ತಾನ ಅದ್ಭುತ ಪ್ರದರ್ಶನ ನೀಡಿದೆ. ಶಾಹೀನ್ ಶಾ ಆಫ್ರಿದಿ T20 ವಿಶ್ವಕಪ್ 2021 ರಲ್ಲಿ ತಂಡದ ಅಭಿಯಾನವನ್ನು ಮರೆಯಲಾಗದ ರೀತಿಯಲ್ಲಿ ಪ್ರಾರಂಭಿಸಿದರು. ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್‌ರನ್ನು ಎರಡು ಅದ್ಭುತ ಎಸೆತಗಳೊಂದಿಗೆ ಪೆವಿಲಿಯನ್‌ಗೆ ಅಟ್ಟಿದರು. ಇನ್ನು ಹ್ಯಾರಿಸ್ ರೌಫ್ ನ್ಯೂಜಿಲೆಂಡ್ ವಿರುದ್ಧ ಮಿಂಚಿನ ದಾಳಿ ನಡೆಸಿದ್ರು. ಆದರೆ ಮೂರನೇ ಸೀಮರ್ ಆಗಿ ಹಸನ್ ಅಲಿ ಅಷ್ಟಾಗಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡದೇ ಇರುವುದು ತಂಡದ ಬೌಲಿಂಗ್ ವಿಭಾಗಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.
ನಿಸ್ಸಂದೇಹವಾಗಿ ಹಸನ್ ಅಲಿ ಓರ್ವ ಉನ್ನತ ಮಟ್ಟದ ಪ್ರತಿಭೆಯಾಗಿದ್ದಾರೆ. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ಈ ಪಾಕ್ ಬೌಲರ್ ಮಿಂಚುವಲ್ಲಿ ವಿಫಲವಾಗಿರುವುದಂತು ಸತ್ಯ. ಭಾರತದ ವಿರುದ್ಧ 44 ರನ್‌ಗಳಿಗೆ ಒಂದೆರಡು ವಿಕೆಟ್‌ಗಳನ್ನು ಪಡೆದರು. ಮತ್ತು ಇತರ ಪಂದ್ಯಗಳಲ್ಲಿಯೂ ಅವರು ಸಾಕಷ್ಟು ಸುಧಾರಣೆಯನ್ನು ತೋರಿಸಿಲ್ಲ. ಹೀಗಾಗಿ ಸೆಮೀಸ್‌ನಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಫಖಾರ್ ಜಮಾನ್ ರನ್ ಬರ
ಪಾಕಿಸ್ತಾನ ಬ್ಯಾಟರ್ ಫಖಾರ್ ಜಮಾನ್ ವಿಶ್ವಕಪ್ ಟೀಮ್ ಸೆಲೆಕ್ಷನ್ ಆದಾಗ 15ರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ನಂತರದಲ್ಲಿ ಬ್ಯಾಕಪ್ ಆಗಿ ಈತನನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ಫಖಾರ್ ಜಮಾನ್ ಕೊಟ್ಟ ಅವಕಾಶದಲ್ಲಿ ಮಿಂಚುವಲ್ಲಿ ವಿಫಲಗೊಂಡಿದ್ದಾರೆ.
31 ವರ್ಷದ ಫಖಾರ್ ಐದು ಪಂದ್ಯಗಳಲ್ಲಿ ನಾಲ್ಕು ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು ಕೇವಲ 11, 30, 05, ಮತ್ತು 08 ರನ್‌ಗಳಿಸಿದ್ದಾರೆ. ಫಖಾರ್‌ನ ಈ ಪ್ರದರ್ಶನ ತಂಡದ ಬ್ಯಾಟಿಂಗ್ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಕಾರಣ ಇತರೆ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಕ್ಯಾಪ್ಟನ್ ಬಾಬರ್ ಮತ್ತು ಮೊಹಮ್ಮದ್ ರಿಜ್ವಾನ್ ಜೊತೆಗೆ ಅನುಭವಿ ಶೋಯೆಬ್ ಮಲ್ಲಿಕ್ ಮತ್ತು ಅಸಿಫ್ ಅಲಿ ಬ್ಯಾಟಿಂಗ್ ತಂಡಕ್ಕೆ ಕೊಡುಗೆಯಾಗಿದೆ.
ಇದರ ನಡುವೆ ನಾಯಕ ಬಾಬರ್ ಅಜಮ್ ಫಖಾರ್ ಬೆಂಬಲಕ್ಕೆ ನಿಂತಿರುವುದು ಸಹ ಫಖಾರ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ. ಆದರೆ ಸೆಮಿಫೈನಲ್‌ನಲ್ಲಿ ಈತನ ಪ್ರದರ್ಶನ ನೀರಸಗೊಂಡು, ಉಳಿದ ಬ್ಯಾಟ್ಸ್‌ಮನ್‌ಗಳು ಮಿಂಚದಿದ್ರೆ ಪಾಕಿಸ್ತಾನಕ್ಕೆ ದೊಡ್ಡ ತೊಂದರೆ ಎದುರಾಗಲಿದೆ.

ಅನಿರೀಕ್ಷಿತ ಪ್ರದರ್ಶನ ನೀಡುವ ತಂಡ
ಇದು ಪಾಕಿಸ್ತಾನದ ಕಡೆಯಿಂದ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಶುದ್ಧ ಪ್ರತಿಭೆ ಮತ್ತು ಆಕ್ರಮಣಶೀಲತೆಯನ್ನು ಅವಲಂಬಿಸಿರುವ ಹಿಂದಿನ ಪಾಕಿಸ್ತಾನ ತಂಡಗಳಿಗಿಂತ ಬಾಬರ್ ಅಜಮ್ ಅಡಿಯಲ್ಲಿ ಈ ಪ್ರಸ್ತುತ ತಂಡ ಹೆಚ್ಚು ಕ್ರಮಬದ್ಧವಾಗಿದೆ. ಆದರೆ ಆಸ್ಟ್ರೇಲಿಯಾದಂತಹ ಪೂರ್ಣ ಆತ್ಮವಿಶ್ವಾಸವುಳ್ಳ ತಂಡದ ಎದುರು ಯುವ ಆಟಗಾರರನ್ನೇ ಹೆಚ್ಚು ಹೊಂದಿರುವ ಪಾಕಿಸ್ತಾನ ಯಾವ ರೀತಿ ಪ್ರದರ್ಶನ ನೀಡಬಲ್ಲದು ಎಂದು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ತಂಡದ ನಾಯಕ ಬಾಬರ್ ಅಜಮ್ ಮತ್ತು ಯುವಪಡೆ ಯಾವ ರೀತಿ ಸೆಮೀಸ್‌ನಲ್ಲಿ ಆಡಬಲ್ಲದು ಎಂಬುದು ಸಹ ಪ್ರಶ್ನೆಯಾಗಿಯೇ ಉಳಿದಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಸಂಭಾವ್ಯ ತಂಡ
ಮೊಹಮ್ಮದ್ ರಿಜ್ವಾನ್ (W), ಬಾಬರ್ ಅಜಮ್ (C), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶಾದಾಬ್ ಖಾನ್, ಇಮಾದ್ ವಾಸಿಂ, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ


Click it and Unblock the Notifications












