For Quick Alerts
ALLOW NOTIFICATIONS  
For Daily Alerts
 

ಯಾರಿಂದಲೂ ಮುರಿಯಲು ಸಾಧ್ಯವಾಗದ ಯುವರಾಜ್ ಸಿಂಗ್ ಹೆಸರಿನಲ್ಲಿರುವ 4 ದಾಖಲೆಗಳು!

These 5 major records of Yuvraj Singh still unbroken

ಟೀಮ್ ಇಂಡಿಯಾ ಕಂಡ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಯುವರಾಜ್ ಸಿಂಗ್ ಒಬ್ಬರು. ಭಾರತದ ಈ ಮಾಜಿ ಕ್ರಿಕೆಟಿಗ ಇಂದು 41ನಜೇ ವರ್ಷದ ಹುಟ್ಟುಹನ್ನ ಆಚರಿಸಿಕೊಳ್ಳುತ್ತಿದ್ದಾರೆ. ಭಾರತ ಎರಡು ಬಾರಿ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣವಾಗಿದ್ದ ಆಟಗಾರ ಯುವರಾಜ್ ಸಿಂಗ್. 2007ರಲ್ಲಿ ಟಿ20 ವಿಶ್ವಕಪ್ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ನೀಡಿದ ಕೊಡುಗೆಯನ್ನು ಭಾರತೀಯ ಕ್ರಿಕೆಟ್‌ನ ಅಭಿಮಾನಿಗಳು ಯಾರು ಕೂಡ ಮರೆಯಲು ಸಾಧ್ಯವಿಲ್ಲ. ಅತ್ಯುನ್ನತ ಟೂರ್ನಿಯಲ್ಲಿ ತಾನೋರ್ವ ನಿಜವಾದ ಆಲ್‌ರೌಂಡರ್ ಹಾಗೂ ಮ್ಯಾಚ್ ವಿನ್ನರ್ ಎಂದು ಯುವಿ ಸಾಬೀತುಪಡಿಸಿದ್ದಾರೆ.

ಎರಡು ವಿಶ್ವಕಪ್ ಹೊರತುಪಡಿಸಿದರೆ ಐಸಿಸಿ ಅಂಡರ್ 19 ವಿಶ್ವಕಪ್, ಐಪಿಎಲ್ ಟ್ರೋಫಿ, ರೋಡ್ ಸೇಫ್ಟಿ ವರ್ಲ್ಡ ಸಿರೀಸ್ ಮತ್ತು ಅಬುದಾಬಿ ಟಿ10 ಲೀಗ್ ಟೂರ್ನಿಯನ್ನು ಕೂಡ ಯವರಾಜ್ ಸಿಂಗ್ ಗೆದ್ದ ಸಾಧನೆ ಮಾಡಿದ್ದಾರೆ. ಇನ್ನು ತಮ್ಮ ವೃತ್ತಿ ಜೀವನದ ಸಂದರ್ಭದಲ್ಲಿ ಯುವರಾಜ್ ಸಿಂಗ್ ಸಾಕಷ್ಟು ವಿಶ್ವದಾಖಲೆ ಮಾಡಿದ್ದಾರೆ. ಆದರೆ ಈ 4 ದಾಖಲೆಗಳನ್ನು ಈವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಆ 4 ದಾಖಲೆಗಳು ಯಾವುದು? ಮುಂದೆ ಓದಿ..

ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ವೇಗದ ಅರ್ಧ ಶತಕ

ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ವೇಗದ ಅರ್ಧ ಶತಕ

ಟಿ20 ಕ್ರಿಕೆಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಅರ್ಧ ಶತಕ ಸಿಡಿಸುವುದು ಸುಲಭದ ಕೆಲಸವಲ್ಲ. ಆದರೆ ಯುವರಾಜ್ ಸಿಂಗ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಭಾರತದ ಪರವಾಗಿ ಹಲವು ವೇಗವಾಗಿ ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅದರಲ್ಲೂ 2007ರ ವಿಶ್ವಕಪ್‌ನ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಂತ ವೇಗದ ಅರ್ಧಶತಕವಾಗಿ ಇಂದಿಗೂ ಉಳಿದುಕೊಂಡಿದೆ.

PAK Vs ENG 2nd Test: ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್‌, ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಸರಣಿ ಜಯ

ODI ಮಾದರಿಯಲ್ಲಿ 5ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ

ODI ಮಾದರಿಯಲ್ಲಿ 5ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ

ಯುವರಾಜ್ ಸಿಂಗ್ ಹೆಸರಿನಲ್ಲಿರುವ ಮತ್ತೊಂದು ಪ್ರಮುಖ ದಾಖಲೆಯೆಂದರೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತೀ ಹೆಚ್ಚು ಶತಕ ಬಾರಿಸಿರುವುದು. ಮಧ್ಯಮ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ಪಾಲಿಗೆ ಪ್ರಮುಖ ಅಸ್ತ್ರವಾಗಿದ್ದ ಯುವಿ ಈ ಕ್ರಮಾಂಕದಲ್ಲಿ ಅತೀ ಹೆಚ್ಚು ಶತಕಗಳಿಸಿದ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಯುವಿ ಒಟ್ಟು 7 ಶತಕಗಳನ್ನು ಐದನೇ ಕ್ರಮಾಂಕದಲ್ಲಿ ಗಳಿಸಿದ್ದಾರೆ.

ಅತಿ ಹೆಚ್ಚು ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳಲ್ಲಿ ಕಣಕ್ಕೆ

ಅತಿ ಹೆಚ್ಚು ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳಲ್ಲಿ ಕಣಕ್ಕೆ

ಯುವರಾಜ್ ಸಿಂಗ್ ಮತ್ತೊಂದು ಅತ್ಯಂತ ವಿಶೇಷ ಹಾಗೂ ಪ್ರಮುಖ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಅತಿ ಹೆಚ್ಚು ಐಸಿಸಿ ಟೂರ್ನಿಗಳ ಫೈನಲ್ ಪಂದ್ಯದಲ್ಲಿ ಆಡಿರುವ ವಿಶೇಷ ದಾಖಲೆ ಯುವರಾಜ್ ಹೆಸರಿನಲ್ಲಿದೆ. ಒಟ್ಟು 7 ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳಲ್ಲಿ ಆಡಿ ಯುವಿ ದಾಖಲೆ ಬರೆದಿದ್ದಾರೆ. ಇದನ್ನು ಕೂಡ ಈವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ.

Ishan Kishan Records : ಇಶಾನ್ ಕಿಶನ್ ಬಾರಿಸಿದ್ದು ಒಂದು ದ್ವಿಶತಕ, ಅಳಿಸಿ ಹಾಕಿದ್ದು ಹಲವು ದಾಖಲೆ!

ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಹ್ಯಾಟ್ರಿಕ್

ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಹ್ಯಾಟ್ರಿಕ್

ಯುವರಾಜ್ ಸಿಂಗ್ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ಬೌಲಿಂಗ್‌ನಲ್ಲಿಯೂ ಸಾಕಷ್ಟು ಸಂದರ್ಭಗಳಲ್ಲಿ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ. 2009ರ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ ತಂಡದ ಪರವಾಗಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದರು. ಈ ಮೂಲಕ ಒಂದು ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಹ್ಯಾಟ್ರಿಕ್ ವಿಕೆಟ್ ಸಂಪಾದಿಸಿದ ದಾಖಲೆ ಬರೆದುಕೊಂಡಿದ್ದಾರೆ.

Story first published: Monday, December 12, 2022, 21:25 [IST]
Other articles published on Dec 12, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+