For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ಟೆಸ್ಟ್‌ ನಾಯಕತ್ವದಿಂದ ಕೇನ್ ವಿಲಿಯಮ್ಸನ್ ಬದಲಾಯಿಸುವ ಸಮಯ ಬಂದಿದೆ: ಸೈಮನ್ ಡೌಲ್

Kane williamson

ನ್ಯೂಜಿಲೆಂಡ್ ಟೆಸ್ಟ್ ನಾಯಕನಾಗಿ ಕೇನ್ ವಿಲಿಯಮ್ಸನ್‌ ಬದಲಿಗೆ ಟಾಮ್ ಲಥಾಮ್ ಸಿದ್ಧರಾಗಿದ್ದಾರೆ ಎಂದು ಕಿವೀಸ್ ಮಾಜಿ ಆಟಗಾರ ಸೈಮನ್ ಡೌಲ್ ಅಭಿಪ್ರಾಯ ಪಟ್ಟಿದ್ದಾರೆ.

ನ್ಯೂಜಿಲೆಂಡ್ ತಂಡದ ಓಪನರ್ , ಪ್ರಸ್ತುತ ಕೇನ್ ವಿಲಿಯಮ್ಸನ್ ಬದಲು ಕಿವೀಸ್ ತಂಡವನ್ನ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಮುನ್ನಡೆಸುತ್ತಿರುವ ಟಾಮ್ ಲಥಾಮ್ ಭಯಂಕರ ಕ್ಯಾಪ್ಟನ್ ಆಗಿದ್ದಾರೆ ಎಂದು ಸೈಮನ್ ಹೇಳಿದ್ದಾರೆ.

ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಲಥಾಮ್ ಇದುವರೆಗೂ 9 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸಿದ್ದು ಇದರಲ್ಲಿ ನಾಲ್ಕು ಪಂದ್ಯವನ್ನ ಕಿವೀಸ್ ಗೆದ್ದರೆ, ಮತ್ತೆ ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ.

ಕೇನ್‌ ವಿಲಿಯಮ್ಸನ್‌ಗೆ ಕೊರೊನಾ ಪಾಸಿಟಿವ್ ಆಗಿದೆ

ಕೇನ್‌ ವಿಲಿಯಮ್ಸನ್‌ಗೆ ಕೊರೊನಾ ಪಾಸಿಟಿವ್ ಆಗಿದೆ

ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಹಿಂದಿನ ರಾತ್ರಿ ನಾಯಕ ಕೇನ್ ವಿಲಿಯಮ್ಸನ್‌ಗೆ ಕೋವಿಡ್-19 ಪಾಸಿಟಿವ್ ಆಗಿರುವುದು ದೃಢಪಟ್ಟಿತು. ಹೀಗಾಗಿ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟಾಮ್ ಲಥಾಮ್ ನಾಯಕತ್ವ ವಹಿಸಿಕೊಂಡಿದ್ದು ತಂಡವನ್ನ ಮುನ್ನಡೆಸುತ್ತಿದ್ದಾರೆ.

Ind vs SA 2nd T20: ಪಂದ್ಯದ ಪ್ರಿವ್ಯೂ, ಪಿಚ್ ರಿಪೋರ್ಟ್‌, ಹವಾಮಾನ, ಪ್ಲೇಯಿಂಗ್ 11

ಈ ಸರಣಿಯು ವಿಲಿಯಮ್ಸನ್‌ಗೆ ಕೊನೆಯ ನಾಯಕತ್ವ: ಸೈಮನ್

ಈ ಸರಣಿಯು ವಿಲಿಯಮ್ಸನ್‌ಗೆ ಕೊನೆಯ ನಾಯಕತ್ವ: ಸೈಮನ್

ಸ್ಕೈ ಸ್ಪೋರ್ಟ್ಸ್‌ಗೆ ಮಾತನಾಡಿದರುವ ನ್ಯೂಜಿಲೆಂಡ್ ಮಾಜಿ ಆಟಗಾರ ಸೈಮನ್ ಬಹುಶಃ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯು ಕೇನ್ ವಿಲಿಯಮ್ಸನ್‌ಗೆ ಟೆಸ್ಟ್ ನಾಯಕತ್ವ ಕೊನೆಯದಾಗಿರಬಹುದು. ಟಾಮ್ ಲಥಾಮ್ ನ್ಯೂಜಿಲೆಂಡ್ ಟೆಸ್ಟ್‌ ತಂಡದ ನಾಯಕತ್ವ ವಹಿಸಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಅವರು ಭಯಂಕರ ನಾಯಕ, ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ ಮತ್ತು ಪಂದ್ಯವನ್ನ ಚೆನ್ನಾಗಿ ರೀಡ್ ಮಾಡುತ್ತಾನೆ ಎಂದು ನಾನು ಭಾವಿಸುತ್ತೇನೆ. ಕೇನ್ ವಿಲಿಯಮ್ಸನ್ ಕೊನೆಯ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗಿದ್ದರೆ ಮತ್ತು ನ್ಯೂಜಿಲೆಂಡ್ ನಾಯಕನಾಗಿದ್ದರೆ, ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಇರಬಹುದೇ? ಈ ಟೆಸ್ಟ್ ತಂಡವನ್ನು ಲ್ಯಾಥಮ್ ವಹಿಸಿಕೊಳ್ಳುವ ಬಹುತೇಕ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ'' ಎಂದು ಲಾಮ್ ಲಥಾಮ್ ಹೇಳಿದ್ದಾರೆ.

Eng vs NZ 2nd Test: 2ನೇ ಟೆಸ್ಟ್‌ನ 2ನೇ ದಿನದಾಟದ ಲೈವ್‌ ಸ್ಕೋರ್‌ ಅಪ್‌ಡೇಟ್

ಈ ಸ್ಟಾರ್ ಪ್ಲೇಯರ್ಸ್ ಗೆ ಐಪಿಎಲ್ ಆಡೋಕೆ ಮನಸ್ಸು ಇಲ್ವಂತೆ ! | Oneindia Kannada
ಟಾಮ್ ಲಥಾಮ್ ನ್ಯೂಜಿಲೆಂಡ್‌ನ ಭವಿಷ್ಯದ TEST ನಾಯಕ

ಟಾಮ್ ಲಥಾಮ್ ನ್ಯೂಜಿಲೆಂಡ್‌ನ ಭವಿಷ್ಯದ TEST ನಾಯಕ

ವಿಲಿಯಮ್ಸನ್ ನ್ಯೂಜಿಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಆಗಬೇಕೆಂದು ಡೌಲ್ ಅವರು ಬಯಸುತ್ತಾರೆ. ಆದ್ರೆ ವಿಲಿಯಮ್ಸನ್ ಅವರ ಇತ್ತೀಚಿನ ರನ್‌ಗಳ ಆಟ ನೋಡಿದರೆ, ನೋವುಂಟುಮಾಡುತ್ತದೆ ಎಂದು ಹೇಳಿದರು. ಬ್ಲ್ಯಾಕ್ ಕ್ಯಾಪ್ಸ್‌ನ ವೈಟ್-ಬಾಲ್ ನಾಯಕನಾಗಿ ವಿಲಿಯಮ್ಸನ್ ಮುಂದುವರಿಯಬೇಕು ಮತ್ತು ಲ್ಯಾಥಮ್ ಅವರನ್ನು ಟೆಸ್ಟ್ ನಾಯಕನಾಗಿ ನೇಮಿಸುವುದನ್ನು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.

"ಕೇನ್ ನ್ಯೂಜಿಲೆಂಡ್ ಹಿಂದೆಂದೂ ಕಂಡಿರದ ಅತ್ಯುತ್ತಮ ಬ್ಯಾಟರ್ ಆಗಬೇಕೆಂದು ನಾನು ಬಯಸುತ್ತೇನೆ. ಅವರು ಆಗುತ್ತಾರೆ, ಆದರೆ ಅವರು ಉತ್ತಮ ಗುಣಮಟ್ಟದ ಆಟಗಾರರಾಗಿದ್ದರು, ಐಪಿಎಲ್ ಬಳಿಕ ಅವರ ಬ್ಯಾಟಿಂಗ್ ಸ್ಥಿತಿ ಉತ್ತಮವಾಗಿಲ್ಲವೆಂದು ನೋಡಲು ನನಗೆ ನೋವಾಗುತ್ತದೆ. ಅವರು ಅಂತಹ ಗುಣಮಟ್ಟದ ಆಟಗಾರ ಮತ್ತು ಗುಣಮಟ್ಟದ ವ್ಯಕ್ತಿ. ಬಿಳಿ-ಚೆಂಡಿನ ಮಾದರಿಯಲ್ಲಿ ನಾಯಕನಾಗಿ ಅವರು ಮುಂದುವರಿಯುವುದನ್ನು ನಾನು ಇನ್ನೂ ನೋಡುತ್ತಿದ್ದೇನೆ, ಆದರೆ ನಾನು ಲ್ಯಾಥಮ್ ಅನ್ನು ನಮ್ಮ ಭವಿಷ್ಯದ ಟೆಸ್ಟ್ ನಾಯಕನಾಗಿ ನೋಡುತ್ತೇನೆ. ಇದರಿಂದ ವಿಲಿಯಮ್ಸನ್ ಮೇಲಿನ ಕೆಲವು ಒತ್ತಡವನ್ನು ನಿವಾರಿಸುತ್ತದೆ'' ಎಂದು ಸೈಮನ್ ಡೌಲ್ ಹೇಳಿದ್ದಾರೆ.

Story first published: Saturday, June 11, 2022, 16:43 [IST]
Other articles published on Jun 11, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+