ಆಸ್ಟ್ರೇಲಿಯಾದ ರೀತಿಯಲ್ಲೇ ಆಡಲಿಲ್ಲ: ಫಿಂಚ್ ತಂಡದ ಕುರಿತು ಮೈಕಲ್ ಕ್ಲಾರ್ಕ್ ತೀವ್ರ ಟೀಕೆ

ಟಿ20 ವಿಶ್ವಕಪ್ 2022ರ ಆರಂಭಕ್ಕೂ ಮುನ್ನ ಪ್ರಶಸ್ತಿ ಗೆಲುವಿನ ಫೇವರಿಟ್ ಆಗಿದ್ದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಸೂಪರ್ 12 ಹಂತದಲ್ಲೇ ತನ್ನ ಅಭಿಯಾನವನ್ನು ಕೊನೆಗೊಳಿಸಿತು. ಆರಂಭಿಕ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ 89ರನ್‌ಗಳಿಂದ ಸೋಲುವ ಮೂಲಕ ಭಾರೀ ಮುಖಭಂಗ ಎದುರಿಸಿದ್ದಲ್ಲದೆ ತಮ್ಮ ಹಾದಿಗೆ ತಾವೇ ಮುಳ್ಳಾದರು.
2015ರ ಏಕದಿನ ವಿಶ್ವಕಪ್ ಚಾಂಪಿಯನ್ ತಂಡದ ನಾಯಕ ಮೈಕಲ್ ಕ್ಲಾರ್ಕ್, ಆಸಿಸ್ ತಂಡವು ತನ್ನ ತವರಿನ ಪರಿಸ್ಥಿತಿಗಳನ್ನ ಚೆನ್ನಾಗಿ ಬಳಸಿಕೊಂಡು ಆಕ್ರಮಣಾಕಾರಿ ಆಟವಾಡದೇ, ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರ ಕುರಿತಾಗಿ ಟೀಕಿಸಿದ್ದಾರೆ.

ಆಸ್ಟ್ರೇಲಿಯಾ ತಂಡವು ಆಸ್ಟ್ರೇಲಿಯಾದ ರೀತಿಯಲ್ಲಿ ಆಡಲೇ ಇಲ್ಲ!
'' ನನ್ನ ಪ್ರಕಾರ ಆಸ್ಟ್ರೇಲಿಯಾ ತಂಡವು ಸಾಮಾನ್ಯವಾಗಿ , ಹೆಚ್ಚಿನ ಒತ್ತಡವಿರುವು ದೊಡ್ಡ ಮಟ್ಟದ ಟೂರ್ನಿಗಳಲ್ಲಿ, ಒತ್ತಡವನ್ನೆಲ್ಲಾ ಬದಿಗಿಟ್ಟು ಯಶಸ್ಸು ಸಾಧಿಸುತ್ತದೆ. ನಾವು ಎಂದಿಗೂ ಸೋಲಲು ಭಯ ಪಡುವುದಿಲ್ಲ. ನಾವು ಅಗ್ರೆಸ್ಸಿವ್ ಆಗಿ ಆಡುವ 11 ಆಟಗಾರರು ಆಯ್ಕೆ ಮಾಡಿದೆವು ಮತ್ತು ವಿಶ್ವಕಪ್ ಸ್ಕ್ವಾಡ್ ಸಾಕಷ್ಟು ರಕ್ಷಣಾತ್ಮಕವಾಗಿ ಕಾಣಿಸಿಕೊಂಡೆವು. ಆಸ್ಟ್ರೇಲಿಯಾವು, ಆಸ್ಟ್ರೇಲಿಯಾ ತಂಡದ ರೀತಿಯಲ್ಲಿ ಆಡಲಿಲ್ಲ'' ಎಂದು ತುಂಬಾ ಹತಾಶೆಯಿಂದ ರೇಡಿಯೋ ಶೋ 'ಬಿಗ್ ಸ್ಪೋರ್ಟ್ಸ್ ಬ್ರೇಕ್‌ಫಾಸ್ಟ್'ಗೆ ಮೈಕಲ್ ಕ್ಲಾರ್ಕ್ ತಿಳಿಸಿದ್ದಾರೆ.
ಪ್ರಸ್ತುತ ABD ರೀತಿಯಲ್ಲಿ ಆಡುತ್ತಿರುವ ಏಕೈಕ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್: ಕೊಬಸ್ ಒಲಿವರ್

ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಟ್ರಿಕ್ ಮಿಸ್ ಮಾಡಿದ್ದಾರೆ!
ಮೊದಲ ಪಂದ್ಯದಲ್ಲಿ ಸೋತ ಬಳಿಕ ಆಸ್ಟ್ರೇಲಿಯಾ ಉಳಿದ ಪಂದ್ಯಗಳಲ್ಲಿ ಹೆಚ್ಚಿನ ಅಂತರದಲ್ಲಿ ಗೆಲ್ಲಬೇಕಿತ್ತು. ಸೂಪರ್ 12 ಹಂತದಲ್ಲಿ ನೆಟ್ ರನ್‌ರೇಟ್ ತುಂಬಾ ಮಹತ್ವದ ಪಾತ್ರವಹಿಸುವುದರಿಂದ ಆಸ್ಟ್ರೇಲಿಯಾ ತಂಡವು ಅಫ್ಘಾನಿಸ್ತಾನ ತಂಡದ ದೊಡ್ಡ ಅಂತರದ ಗೆಲುವು ಸಾಧಿಸಬೇಕಾಗಿತ್ತು.
ಆದ್ರೆ ಅಫ್ಘಾನಿಸ್ತಾನ ವಿರುದ್ಧ ಆಸಿಸ್ ತಂಡವು ಕಷ್ಟಪಟ್ಟು ಗೆದ್ದಿತು. ಮೊಹಮ್ಮದ್ ನಬಿ ನಾಯಕತ್ವದ ಅಫ್ಘಾನಿಸ್ತಾನ ತಂಡದ ವಿರುದ್ಧ ಆಸಿಸ್ ಗೆಲುವಿನ ಟ್ರಿಕ್ ಮಿಸ್ ಮಾಡಿದೆ ಎಂದು ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.

ಆ್ಯರೋನ್ ಫಿಂಚ್ ನಾಯಕತ್ವದ ಕುರಿತಾಗಿ ಭಾರೀ ಟೀಕೆ
ಸೂಪರ್ 12 ಹಂತದಲ್ಲೇ ಹೊರಬಿದ್ದಂತಹ ಆ್ಯರೋನ್ ಫಿಂಚ್ ಮತ್ತು ಅವರ ತಂಡದ ವಿರುದ್ಧ ಭಾರೀ ಟೀಕೆ ಎದುರಾಗಿದೆ. ಫಿಂಚ್ ನಾಯಕತ್ವದ ಅಡಿಯಲ್ಲಿ ಆಡಿದ ಆಸ್ಟ್ರೇಲಿಯಾ ತಂಡದ ಪ್ರದರ್ಶನದ ಕುರಿತು ಎಲ್ಲೆಡೆ ಅಸಮಾಧಾನ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಮತ್ತು ಆಸಿಸ್ ತಂಡವು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಸಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications