ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ಯಾಟ್ಸ್‌ಮನ್‌ಗಳ ತಪ್ಪಿಗೆ ಆತ ಒಂದೆರೆಡು ವಿಕೆಟ್ ಪಡೆದಿದ್ದಾನೆ, ತನ್ನ ಮುಖ ಮರೆಮಾಚಿದ್ದಾನೆ: ಅಶ್ವಿನ್ ಕುರಿತು ಕಪಿಲ್ ದೇವ್ ಟೀಕೆ

Kapil dev and R ashwin

ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಆತನ ಸಾಮರ್ಥ್ಯದ ಕುರಿತಾಗಿ ಎದುರಿಸುತ್ತಿರುವ ಆತ್ಮವಿಶ್ವಾಸದ ಕೊರತೆ ಕುರಿತಾಗಿ ಲೆಜೆಂಡರಿ ಆಲ್‌ರೌಂಡರ್ ಕಪಿಲ್ ದೇವ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ರವಿ ಅಶ್ವಿನ್ ಪ್ರದರ್ಶನದ ಕುರಿತಾಗಿ ಮಾತನಾಡಿರುವ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್‌, ಆತ ಸಾಕಷ್ಟು ಆತ್ಮವಿಶ್ವಾಸದ ಕೊರತೆಯನ್ನು ಎದುರಿಸುತ್ತಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ರವಿಚಂದ್ರನ್ ಅಶ್ವಿನ್ ತೆಗೆದುಕೊಂಡಿರುವ ಬಹುತೇಕ ವಿಕೆಟ್‌ಟ್‌ಗಳು ಬ್ಯಾಟ್ಸ್‌ಮನ್ ಮಾಡಿದ ತಪ್ಪುಗಳಿಂದ ಸಿಕ್ಕಿವೆ ಎಂದು ಕಪಿಲ್ ದೇವ್ ಟೀಕಿಸಿದ್ದಾರೆ.

ಯುಜವೇಂದ್ರ ಚಹಾಲ್‌ಗೆ ಬೆಂಚ್, ಅಶ್ವಿನ್ ಮೇಲೆ ಸಂಪೂರ್ಣ ವಿಶ್ವಾಸ

ಯುಜವೇಂದ್ರ ಚಹಾಲ್‌ಗೆ ಬೆಂಚ್, ಅಶ್ವಿನ್ ಮೇಲೆ ಸಂಪೂರ್ಣ ವಿಶ್ವಾಸ

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾದ ಸ್ಪಿನ್ ಬೌಲಿಂಗ್ ಮುಂದಾಳತ್ವ ವಹಿಸಿದ್ದಾರೆ. ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಸೂಪರ್ 12 ಪಂದ್ಯಗಳಲ್ಲಿ ಅಶ್ವಿನ್ ಮೇಲೆ ಸಂಪೂರ್ಣ ವಿಶ್ವಾಸವಿಟ್ಟು ಆಡಿಸಿದೆ. ಅದೇ ವೇಳೆಯಲ್ಲಿ ಕಳೆದೊಂದು ವರ್ಷದಲ್ಲಿ ಟೀಂ ಇಂಡಿಯಾದ ಪರ ಚುಟುಕು ಫಾರ್ಮೆಟ್‌ನಲ್ಲಿ ಯಶಸ್ಸು ಕಂಡಿರುವ ವ್ರಿಸ್ಟ್‌ ಸ್ಪಿನ್ನರ್ ಯುಜವೇಂದ್ರ ಚಹಾಲ್‌ಗೆ ಬೆಂಚ್‌ನಲ್ಲಿ ಕೂರಿಸುವ ರಿಸ್ಕ್‌ ಕೂಡ ತೆಗೆದುಕೊಂಡಿದೆ.

ಪ್ರಸ್ತುತ ABD ರೀತಿಯಲ್ಲಿ ಆಡುತ್ತಿರುವ ಏಕೈಕ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್: ಕೊಬಸ್ ಒಲಿವರ್

ಅಶ್ವಿನ್‌ ಆತ್ಮವಿಶ್ವಾಸದ ಬೌಲಿಂಗ್ ಪ್ರದರ್ಶಿಸಿಲ್ಲ ಎಂದ ಕಪಿಲ್ ದೇವ್

ಅಶ್ವಿನ್‌ ಆತ್ಮವಿಶ್ವಾಸದ ಬೌಲಿಂಗ್ ಪ್ರದರ್ಶಿಸಿಲ್ಲ ಎಂದ ಕಪಿಲ್ ದೇವ್

'' ಇಲ್ಲಿಯವರೆಗೆ, ಅಶ್ವಿನ್‌ ಸ್ವಲ್ಪೂ ಆತ್ಮವಿಶ್ವಾಸವನ್ನ ತೋರಿಸಿಲ್ಲ. ಆತ ಇಂದು ವಿಕೆಟ್‌ ಪಡೆದಿದ್ದಾನೆ ಅಂದ ಮಾತ್ರಕ್ಕೆ ಆತ ಬೆಸ್ಟ್ ಅನಿಸಿಕೊಳ್ಳುವುದಿಲ್ಲ. ನೈಜತೆ ಏನಂದ್ರೆ ಬ್ಯಾಟ್ಸ್‌ಮನ್‌ಗಳು ಮಾಡಿದ ತಪ್ಪಿಗೆ ಆತ ಒಂದೆರಡು ವಿಕೆಟ್ ಪಡೆದಿದ್ದಾನೆ. ಆತ ತನ್ನ ಮುಖವನ್ನು ಮರೆಮಾಚಿದ್ದಾನೆ. ವಿಕೆಟ್ ಪಡೆದರೆ ಸ್ವಾಭಾವಿಕವಾಗಿ ಬೌಲರ್‌ನ ಆತ್ಮವಿಶ್ವಾಸ ಹೆಚ್ಚುತ್ತದೆ. ಆದ್ರೆ ಅಶ್ವಿನ್ ವಿಚಾರದಲ್ಲಿ ಇಲ್ಲಿಯವರೆಗೆ ಆತನಿ ರಿದಮ್ ಪಡೆದಿರುವುದನ್ನ ಕಂಡಿಲ್ಲ'' ಎಂದು ಕಪಿಲ್ ದೇವ್ ಎಬಿಪಿ ನ್ಯೂಸ್‌ಗೆ ತಿಳಿಸಿದ್ದಾರೆ.

2024ರ ಟಿ20 ವಿಶ್ವಕಪ್‌ಗೆ ಕ್ವಾಲಿಫೈ ಆಗಿರುವ ತಂಡಗಳು: ನೆದರ್ಲ್ಯಾಂಡ್ಸ್‌ ಕೂಡ ಸೇರ್ಪಡೆ

ಸೆಮಿಫೈನಲ್‌ನಲ್ಲಿ ಅಶ್ವಿನ್‌ಗೆ ಅವಕಾಶ ನೀಡಬೇಕೆ? ಅಥವಾ ಬೇಡವೇ?

ಸೆಮಿಫೈನಲ್‌ನಲ್ಲಿ ಅಶ್ವಿನ್‌ಗೆ ಅವಕಾಶ ನೀಡಬೇಕೆ? ಅಥವಾ ಬೇಡವೇ?

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆರ್. ಅಶ್ವಿನ್‌ಗೆ ಸ್ಥಾನ ಒದಗಿಸಬೇಕೇ? ಅಥವಾ ಬೇಡವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಕಪಿಲ್ ದೇವ್ '' ಅವೆಲ್ಲವೂ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧಾರವಾಗಿರುತ್ತದೆ. ಅವರಿಗೆ ಅಶ್ವಿನ್ ಮೇಲೆ ವಿಶ್ವಾಸವಿದ್ದರೆ ಉತ್ತಮ. ಆತ ಇಡೀ ಟೂರ್ನಮೆಂಟ್‌ನಲ್ಲಿ ಆಡಿರುವುದರಿಂದ ಹೊಂದಿಕೊಳ್ಳಬಲ್ಲ. ಆದ್ರೆ ಎದುರಾಳಿಯನ್ನ ಆಶ್ಚರ್ಯಗೊಳಿಸಬೇಕಾದ್ರೆ, ಅವರು ವ್ರಿಸ್ಟ್‌ ಸ್ಪಿನ್ನರ್‌ (ಯುಜವೇಂದ್ರ ಚಹಾಲ್) ಕಡೆಗೆ ತಿರುಗಬೇಕಾಗುತ್ತದೆ. ನಾಯಕ ಮತ್ತು ಮ್ಯಾನೇಜ್‌ಮೆಂಟ್ ವಿಶ್ವಾಸವನ್ನು ಯಾರು ಗೆಲ್ಲುತ್ತಾರೆ, ಅವರು ಆಡುತ್ತಾರೆ'' ಎಂದು ಕಪಿಲ್ ದೇವ್ ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯ ಕೇಸ್: ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

5 ಪಂದ್ಯಗಳಿಂದ 6 ವಿಕೆಟ್ ಪಡೆದಿರುವ ರವಿಚಂದ್ರನ್ ಅಶ್ವಿನ್

5 ಪಂದ್ಯಗಳಿಂದ 6 ವಿಕೆಟ್ ಪಡೆದಿರುವ ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್ ಪ್ರಸ್ತುತ ವಿಶ್ವಕಪ್‌ನಲ್ಲಿ 5 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನಷ್ಟೇ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ವಿನ್ನಿಂಗ್ ರನ್‌ ಹೊಡೆಯುವ ಮೂಲಕ ಅಶ್ವಿನ್ ಟೀಂ ಇಂಡಿಯಾವನ್ನು ಗೆಲುವಿನ ಗೆರೆ ದಾಟಿಸಿದ್ದರು.

ರವಿಚಂದ್ರನ್ ಅಶ್ವಿನ್ ಕಳೆದ ಜಿಂಬಾಬ್ವೆ ವಿರುದ್ಧದ ಅಂತಿಮ ಸೂಪರ್ 12 ಪಂದ್ಯದಲ್ಲಿ ಭಾರತದ ಪರ ಮೂರು ವಿಕೆಟ್ ಉರುಳಿಸಿದರು. ಗಮನಾರ್ಹವಾದ ಪ್ರದರ್ಶನ ನೀಡಿದ ಅಶ್ವಿನ್‌ 4 ಓವರ್‌ಗಳಲ್ಲಿ 5.5 ಎಕಾನಮಿಯಲ್ಲಿ ಬೌಲಿಂಗ್‌ ಮಾಡಿ ಕೇವಲ 22 ರನ್ ನೀಡಿ 3 ವಿಕೆಟ್ ಕಬಳಿಸಿದರು.

Story first published: Monday, November 7, 2022, 17:22 [IST]
Other articles published on Nov 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X