Vijay Hazare Trophy 2022 : 50 ಓವರ್, 45 ಬೌಂಡರಿ, 17 ಸಿಕ್ಸ್, 506 ರನ್: ಚಿನ್ನಸ್ವಾಮಿ ಅಂಗಳದಲ್ಲಿ ದಾಖಲೆ ಬರೆದ ತಮಿಳುನಾಡು

ವಿಜಯ್ ಹಜಾರೆ ಟ್ರೋಫಿಯ ಪಂದ್ಯಾವಳಿಯಲ್ಲಿ ತಮಿಳುನಾಡು ಇತಿಹಾಸ ಸೃಷ್ಟಿಸಿದೆ. ಮೊದಲ ಬಾರಿಗೆ ಲಿಸ್ಟ್ ಎ ಏಕದಿನ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ತಂಡ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅರುಣಾಚಲ ಪ್ರದೇಶದ ವಿರುದ್ಧದ ಪಂದ್ಯದಲ್ಲಿ ತಮಿಳುನಾಡು ಈ ಸಾಧನೆ ಮಾಡಿದೆ. ಈ ಮೊದಲು 50 ಓವರ್ ಗಳಲ್ಲಿ ನೆದರ್ಲೆಂಡ್ಸ್ ವಿರುದ್ಧ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 498 ರನ್ ಗಳಿಸಿದ್ದ ಇಂಗ್ಲೆಂಡ್ 232 ರನ್‌ಗಳ ಜಯ ಸಾಧಿಸಿತ್ತು. ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಇಂಗ್ಲೆಂಡ್ ಹೆಸರಿನಲ್ಲಿದೆ.
ತಮಿಳುನಾಡು ತಂಡದ ಆರಂಭಿಕರಾದ ಎನ್ ಜಗದೀಸನ್ ಮತ್ತು ಸಾಯಿ ಸುದರ್ಶನ್ ದಾಖಲೆಯ ಜೊತೆಯಾಟ ಆಡಿದರು. ಈ ಜೊಡಿ ಮೊದಲ ವಿಕೆಟ್ ನಷ್ಟಕ್ಕೆ 416 ರನ್ ಗಳಿಸುವ ಮೂಲಕ ಅಮೋಘ ದಾಖಲೆ ಬರೆದಿದೆ.
ಎನ್ ಜಗದೀಸನ್ ದಾಖಲೆಯ ದ್ವಿಶತಕ ಗಳಿಸಿದರೆ, ಸಾಯಿ ಸುದರ್ಶನ್ ಶತಕ ಬಾರಿಸಿದರು. ಅಂತಿಮವಾಗಿ ತಮಿಳುನಾಡು 50 ಓವರ್ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 506 ರನ್ ಕಲೆಹಾಕಿತು.

ಜಗದೀಸನ್, ಸಾಯಿ ಸುದರ್ಶನ್ ದಾಖಲೆ ಜೊತೆಯಾಟ
ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಎನ್ ಜಗದೀಸನ್ ಮತ್ತು ಸಾಯಿ ಸುದರ್ಶನ್ ಅರುಣಾಚಲಪ್ರದೇಶ ವಿರುದ್ಧದ ಪಂದ್ಯದಲ್ಲಿ ದಾಖಲೆಯ ಜೊತೆಯಾಟ ಆಡಿದರು. ಸಾಯಿ ಸುದರ್ಶನ್ 102 ಎಸೆತಗಳಲ್ಲಿ 19 ಬೌಂಡರಿ 2 ಸಿಕ್ಸರ್ ನೆರವಿನಿಂದ 154 ರನ್ ಗಳಿಸಿದರೆ, ಎನ್ ಜಗದೀಸನ್ 141 ಎಸೆತಗಳಲ್ಲಿ 25 ಬೌಂಡರಿ 15 ಸಿಕ್ಸರ್ ನೆರವಿನಿಂದ ದಾಖಲೆಯ 277 ರನ್ ಗಳಿಸಿದರು.
ಈ ಜೋಡಿ ಮೊದಲ ವಿಕೆಟ್‌ಗೆ 416 ರನ್ ಕಲೆಹಾಕಿದ್ದು, ಇದು ಏಕದಿನ ಪಂದ್ಯದಲ್ಲಿ ದಾಖಲಾದ ಅತ್ಯಧಿಕ ಜೊತೆಯಾಟ ಎನಿಸಿಕೊಂಡಿದೆ.
IND vs NZ: ವಿರಾಟ್ ಕೊಹ್ಲಿಯ ಅಪರೂಪದ ಟಿ20 ದಾಖಲೆ ಮೀರಿಸಿದ ಸೂರ್ಯಕುಮಾರ್ ಯಾದವ್

ರೋಹಿತ್ ಶರ್ಮಾ ದಾಖಲೆ ಮುರಿದ ಎನ್ ಜಗದೀಸನ್
ವಿಜಯ್ ಹಜಾರೆ ಟ್ರೋಫಿಯಲ್ಲಿ ಜಗದೀಸನ್ ಸತತವಾಗಿ 5 ಶತಕಗಳನ್ನು ಸಿಡಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸತತವಾಗಿ 5 ಶತಕ ಬಾರಿಸಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಅದರಲ್ಲೂ 4 ಶತಕಗಳ ನಂತರ ಅರುಣಾಚಲ ಪ್ರದೇಶದ ವಿರುದ್ಧ ದ್ವಿಶತಕ ಗಳಿಸಿದ್ದಾರೆ.
ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಗಳಿಸಿದ್ದ 264 ರನ್ ಇದುವರೆಗೆ ಏಕದಿನ ಪಂದ್ಯದಲ್ಲಿ ಗಳಿಸಿದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿತ್ತು. ಲಿಸ್ಟ್ ಎ ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್ ಗಳಿಸಿದ ದಾಖಲೆ ಅಲೈಸ್ಟರ್ ಬ್ರೌನ್ (268 ರನ್) ಹೆಸರಿನಲ್ಲಿತ್ತು. ಜಗದೀಸನ್ ಈಗ ಆ ದಾಖಲೆಯನ್ನು ಮುರಿದಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆ
ಸತತವಾಗಿ 5 ಶತಕ ದಾಖಲಿಸುವ ಮೂಲಕ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಪೃಥ್ವಿ ಶಾ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಈ ಮೂವರು ದೇಶೀಯ ಕ್ರಿಕೆಟ್‌ನ ಒಂದು ಪಂದ್ಯಾವಳಿಯಲ್ಲಿ 4 ಶತಕಗಳನ್ನು ಸಿಡಿಸಿದ ದಾಖಲೆ ಹೊಂದಿದ್ದಾರೆ. ವಿರಾಟ್ ಕೊಹ್ಲಿ 2028-09ರ ವಿಜಯ್ ಹಜಾರೆ ಟ್ರೋಫಿಯಲ್ಲಿ 4 ಶತಕ ಸಿಡಿಸಿದ್ದರು.
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕುಮಾರ್ ಸಂಗಾಕ್ಕರ, ಆಲ್ವಿರೋ ಪೀಟರ್ಸನ್, ದೇವದತ್ ಪಡಿಕ್ಕಲ್ ಮಾತ್ರ ಸತತವಾಗಿ ನಾಲ್ಕು ಶತಕಗಳನ್ನು ಬಾರಿಸಿದ ಆಟಗಾರರಾಗಿದ್ದರು. ಈಗ ಜಗದೀಸನ್ ಸತತವಾಗಿ 5 ಶತಕ ದಾಖಲಿಸಿದ ಮೊದಲ ಕ್ರಿಕೆಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಏಕದಿನ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಕೀರ್ತಿ ಕೂಡ ಜಗದೀಸನ್ ಪಾಲಾಗಿದೆ. ಅಲಿಸ್ಟೈರ್ ಬ್ರೌನ್ 2002ರಲ್ಲಿ ಇಂಗ್ಲೆಂಡ್ ದೇಶೀಯ ಕ್ರಿಕೆಟ್‌ನಲ್ಲಿ 268 ರನ್ ಗಳಿಸಿದ್ದು ಈ ವರೆಗಿನ ದಾಖಲೆಯಾಗಿತ್ತು. ರೋಹಿತ್ ಶರ್ಮಾ 264 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications