ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ವಿರಾಟ್ ಕೊಹ್ಲಿಯ ಅಪರೂಪದ ಟಿ20 ದಾಖಲೆ ಮೀರಿಸಿದ ಸೂರ್ಯಕುಮಾರ್ ಯಾದವ್

IND vs NZ: Suryakumar Yadav Breaks Virat Kohlis T20 Man Of The Match Record

ತನ್ನ ವಿಶಿಷ್ಟ ಬ್ಯಾಟಿಂಗ್ ಶೈಲಿಯಿಂದಲೇ ಕ್ರಿಕೆಟ್ ಜಗತ್ತಿನಲ್ಲಿ ಹೆಸರುವಾಸಿಯಾಗಿರುವ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಪ್ರತಿ ಪಂದ್ಯದಲ್ಲಿ ಒಂದಿಲ್ಲೊಂದು ದಾಖಲೆ ಮುರಿಯುತ್ತಿದ್ದಾರೆ.

ನಂ.1 ಟಿ20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು ಭಾನುವಾರ (ನವೆಂಬರ್ 20) ನಡೆದ 3 ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 111 ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದರು.

IND vs NZ: ಟಿ20ನಲ್ಲಿ ನಂ.1 ಪಟ್ಟ ಪಡೆದಿರುವ ಸೂರ್ಯಕುಮಾರ್ ಮುಂದಿನ ಗುರಿ ಇದು!

ಸೂರ್ಯಕುಮಾರ್ ಯಾದವ್ ಕೇವಲ 49 ಎಸೆತಗಳನ್ನು ಎದುರಿಸಿ ಮೂರಂಕಿ ಸ್ಕೋರ್ ಮಾಡಿದರು. ಈ ಮೂಲಕ ತಮ್ಮ ಶ್ರೇಷ್ಠ ಬ್ಯಾಟಿಂಗ್ ಅನ್ನು ಮತ್ತೊಮ್ಮೆ ತೋರ್ಪಡಿಸಿದರು. ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೇ ವೇಳೆ ಸೂರ್ಯಕುಮಾರ್ ಯಾದವ್ ಅವರು ಚುಟುಕು ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಅಪರೂಪದ ದಾಖಲೆಯನ್ನು ಮುರಿದರು.

ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್ 7ನೇ ಬಾರಿಗೆ ಪಂದ್ಯಶ್ರೇಷ್ಠ

ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್ 7ನೇ ಬಾರಿಗೆ ಪಂದ್ಯಶ್ರೇಷ್ಠ

ಟಿ20 ಕ್ರಿಕೆಟ್‌ನ ಇತಿಹಾಸದಲ್ಲಿ 7ನೇ ಬಾರಿಗೆ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡದ ಪರ ಪಂದ್ಯಶ್ರೇಷ್ಠ ಆಟಗಾರನಾಗಿ ಆಯ್ಕೆಯಾದರು. ಈ ಗೌರವದೊಂದಿಗೆ ಸೂರ್ಯಕುಮಾರ್ ಅವರು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 6 ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗಳನ್ನು ಪಡೆದಿರುವ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಿಂಬಾಬ್ವೆಯ ಸಿಕಂದರ್ ರಝಾ ಮಾತ್ರ ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್ ಯಾದವ್ ಅವರಷ್ಟೇ 7 ಪಂದ್ಯಶ್ರೇಷ್ಠ ಗೌರವವನ್ನು ಹೊಂದಿದ್ದಾರೆ. ಇನ್ನು ಮಂಗಳವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ರಝಾ ಅವರ ದಾಖಲೆಯನ್ನು ಮುರಿಯುವ ಅವಕಾಶ ಸೂರ್ಯಕುಮಾರ್ ಯಾದವ್‌ಗಿದೆ.

12ನೇ ಅಥವಾ 13ನೇ ಓವರ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್

12ನೇ ಅಥವಾ 13ನೇ ಓವರ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್

"ನಾನು ಬ್ಯಾಟಿಂಗ್‌ಗೆ ಹೋದಾಗ ಯೋಜನೆ ಸ್ಪಷ್ಟವಾಗಿರುತ್ತದೆ. 12ನೇ ಅಥವಾ 13ನೇ ಓವರ್‌ನಲ್ಲಿ ನಾವು ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ 170-175 ರನ್ ಗಳಿಸುವ ಬಗ್ಗೆ ಯೋಚಿಸಿದ್ದೇವೆ," ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.

"ನ್ಯೂಜಿಲೆಂಡ್‌ಗೆ ಬಂದಿರುವುದು ಉತ್ತಮ ಅನುಭವವಾಗಿದೆ ಮತ್ತು ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವುದು ಅತ್ಯುತ್ತಮವಾಗಿದೆ. ನನ್ನ ಆಟ ಯೋಜನೆಯನ್ನು ಹೊಂದಿತ್ತು ಮತ್ತು ಅದು ಚೆನ್ನಾಗಿ ಕೆಲಸ ಮಾಡಿದೆ. ಇಲ್ಲಿ ಅದ್ಭುತ ಪ್ರೇಕ್ಷಕರಿದ್ದಾರೆ," ಎಂದು ಸೂರ್ಯಕುಮಾರ್ ಯಾದವ್ ಪಂದ್ಯದ ನಂತರ ಮಾತನಾಡಿದರು.

ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸುವ ಬಯಕೆ ವ್ಯಕ್ತಪಡಿಸಿದ ಸೂರ್ಯ

ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸುವ ಬಯಕೆ ವ್ಯಕ್ತಪಡಿಸಿದ ಸೂರ್ಯ

ನಂ.1 ಟಿ20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಭಾನುವಾರ (ನವೆಂಬರ್ 20) ಪಂದ್ಯ ಮುಗಿದ ಬಳಿಕ ಮಾತನಾಡಿ, ಭಾರತವನ್ನು ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ರೆಡ್-ಬಾಲ್ ಕ್ರಿಕೆಟ್‌ಗೆ ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ನಾವು ಭಾರತದಲ್ಲಿ ಕೆಂಪು ಚೆಂಡಿನೊಂದಿಗೆ ಕ್ರಿಕೆಟ್ ಪ್ರಾರಂಭಿಸುತ್ತೇವೆ. ನಾನೂ ಸಹ ಕೆಂಪು ಚೆಂಡಿನ ಆಟವನ್ನು ಆನಂದಿಸುತ್ತೇನೆ. ನಾನು ಮುಂಬೈ ಪರ ಪ್ರಥಮ ದರ್ಜೆ ಕ್ರಿಕೆಟ್‌ ಅನ್ನು ರೆಡ್-ಬಾಲ್ ಮಾದರಿಯಲ್ಲಿ ಆಡಿದ್ದೇನೆ. ನನಗೆ ಆ ಸ್ವರೂಪದ ಬಗ್ಗೆ ಕಲ್ಪನೆ ಇದೆ ಮತ್ತು ಟೆಸ್ಟ್ ಕ್ಯಾಪ್ ಶೀಘ್ರದಲ್ಲೇ ಪಡೆಯಲಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು.

Story first published: Monday, November 21, 2022, 12:43 [IST]
Other articles published on Nov 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X