
61 ಎಸೆತಗಳಲ್ಲಿ ಅಜೇಯ 122 ರನ್, ಭಾರತದ ಪರ ದಾಖಲೆ
ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಮೂರಂಕಿ ಗಡಿ ಮುಟ್ಟಿದರು. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71ನೇ ಶತಕ ದಾಖಲಿಸಿದ ವಿರಾಟ್ ಕೊಹ್ಲಿ ಚೊಚ್ಚಲ ಟಿ20 ಅಂತರಾಷ್ಟ್ರೀಯ ಶತಕ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಟೀಂ ಇಂಡಿಯಾ ಇನ್ನಿಂಗ್ಸ್ ಮುಕ್ತಾಯಕ್ಕೆ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ ಅಜೇಯ 122 ರನ್ ಕಲೆಹಾಕಿದ್ರು. 200 ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ಗಳಿದ್ದವು.
1021 ದಿನಗಳ ಬಳಿಕ ಶತಕ ದಾಖಲಿಸಿದ ವಿರಾಟ್, 83 ಇನ್ನಿಂಗ್ಸ್ ನಂತರ ಮೂರಂಕಿ ಸ್ಕೋರ್

ಎದುರಾಳಿ ತಂಡಕ್ಕಿಂತ ಕೊಹ್ಲಿ ರನ್‌ಗಳೇ ಜಾಸ್ತಿ!
ಹೌದು, ಮೊದಲ ಬಾರಿಗೆ ಟೀಂ ಇಂಡಿಯಾ ಬ್ಯಾಟರ್ ಒಬ್ಬ ಟಿ20 ಕ್ರಿಕೆಟ್‌ನಲ್ಲಿ ಎದುರಾಳಿ ತಂಡದ ಒಟ್ಟಾರೆ ಸ್ಕೋರ್‌ಗಿಂತ ಹೆಚ್ಚು ರನ್ ಕಲೆಹಾಕಿದ್ದಾರೆ. ಅಜೇಯ 122 ರನ್ ಕಲೆಹಾಖಿದ ವಿರಾಟ್ ಕೊಹ್ಲಿ ಭಾರತದ ಟಿ20 ಫಾರ್ಮೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ದಾಖಲಿಸಿದ ಬ್ಯಾಟರ್ ಆಗಿದ್ದಾರೆ. ಜೊತೆಗೆ ರೋಹಿತ್ ಶರ್ಮಾ ಹೆಸರಿನಲ್ಲಿದ್ದ (118) ದಾಖಲೆಯನ್ನು ಸಹ ಮುರಿದಿದ್ದಾರೆ.
ಇಷ್ಟೇ ಅಲ್ಲದೆ ಕೊಹ್ಲಿ 122 ರನ್ ಕಲೆಹಾಕಿದ್ರೆ, ಇಡೀ ಅಫ್ಘಾನಿಸ್ತಾನ ಗಳಿಸಿದ್ದು ಕೇವಲ 111ರನ್. ಇದಕ್ಕೂ ಮುನ್ನ 2018ರಲ್ಲಿ ಕೆ.ಎಲ್ ರಾಹುಲ್ ಎದುರಾಳಿ ಐರ್ಲೆಂಡ್ ತಂಡದಷ್ಟೇ 70 ರನ್‌ಗಳನ್ನ ಕಲೆಹಾಕಿದ್ದು ದಾಖಲೆಯಾಗಿತ್ತು.
ಏಷ್ಯಾಕಪ್ 2022: ತಪ್ಪು ತಿದ್ದಿಕೊಳ್ಳಲು ಶ್ರೀಲಂಕಾ-ಪಾಕಿಸ್ತಾನಕ್ಕೆ ಇಂದಿನ ಪಂದ್ಯದಲ್ಲಿ ಅವಕಾಶ

ಶತಕ ಸಿಡಿಸದೇ ಬೇರೆ ಯಾವೊಬ್ಬ ಬ್ಯಾಟರ್ ಇಷ್ಟು ಸಮಯ ಉಳಿಯುತ್ತಿರಲಿಲ್ಲ: ಗಂಭೀರ್
ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡಿದ್ದು, ಫಾರ್ಮ್‌ಗೆ ಮರಳಿದಿದ್ದಾರೆ. ಆದ್ರೆ ವಿರಾಟ್ ಕೊಹ್ಲಿ ಹೊರತುಪಡಿಸಿ ಬೇರೆ ಯಾವೊಬ್ಬ ಬ್ಯಾಟರ್ ಮೂರು ವರ್ಷಗಳ ಕಾಲ ಶತಕ ಸಿಡಿಸದೇ ತಂಡದಲ್ಲಿ ಉಳಿಯುತ್ತಿರಲಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
"ನೋಡಿ ಅವರು (ವಿರಾಟ್ ಕೊಹ್ಲಿ) ಮೂರು ತಿಂಗಳಲ್ಲ ಮೂರು ವರ್ಷಗಳು (1,019 ದಿನಗಳು) ಎಂದು ಅರಿತುಕೊಳ್ಳಬೇಕು. ಮೂರು ವರ್ಷಗಳು ಬಹಳ ದೀರ್ಘ ಸಮಯ. ನಾನು ಅವರನ್ನು ಟೀಕಿಸಲು ಹೋಗುವುದಿಲ್ಲ, ಆದರೆ ಅವರು ಈ ಹಿಂದೆ ಸಾಕಷ್ಟು ರನ್ ಗಳಿಸಿದ್ದರಿಂದ ಅವರು ಈ ಬೆಂಬಲವನ್ನು ಗಳಿಸಿದ್ದಾರೆ ಎಂದು ಗಂಭೀರ್ , ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ನಂತರ ಆತಿಥೇಯ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
ಇದೇ ವೇಳೆಯಲ್ಲಿ ಅವರು "ಕಳೆದ ಮೂರು ವರ್ಷಗಳಲ್ಲಿ 100 ರನ್ ಗಳಿಸದಿದ್ದರೆ ಯಾವುದೇ ಕಿರಿಯ ಆಟಗಾರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬದುಕುಳಿಯುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ಅಂತಿಮವಾಗಿ ಸಂಭವಿಸಬೇಕಾಗಿತ್ತು ಮತ್ತು ಇದು ಸರಿಯಾದ ಸಮಯದಲ್ಲಿ ಸಂಭವಿಸಿದೆ. ಆದರೆ ನಾವು ನ್ಯಾಯಯುತವಾಗಿ ನೋಡುವುದಾದ್ರೆ, ಬೇರೆ ಯಾವೊಬ್ಬ ಆಟಗಾರನು ಇಷ್ಟು ದಿನ ತಂಡದಲ್ಲಿ ಉಳಿಯುತ್ತಿರಲಿಲ್ಲ '' ಎಂದು ಗಂಭೀರ್ ಹೇಳಿದ್ದಾರೆ.

ಅದ್ಭುತ ಬೌಲಿಂಗ್ ದಾಳಿ ನಡೆಸಿದ ಭುವನೇಶ್ವರ್
ಒಂದೆಡೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರವಾದ್ರೆ, ಭುವನೇಶ್ವರ್ ಬೌಲಿಂಗ್ ಕೈ ಚಳಕಕ್ಕೆ ಕ್ರಿಕೆಟ್ ಲೋಕ ಸಾಕ್ಷಿಯಾಯಿತು. ಟೀಂ ಇಂಡಿಯಾ ಪರ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ ಒಂದು ಮೇಡನ್ ಸಹಿತ ಕೇವಲ 4 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಇದು ಟಿ20 ಫಾರ್ಮೆಟ್‌ನಲ್ಲಿ ಭುವಿಯ ವೈಯಕ್ತಿಕ ಬೆಸ್ಟ್ ಬೌಲಿಂಗ್ ಫಿಗರ್ ಆಗಿದೆ.


Click it and Unblock the Notifications












