ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Pakistan vs Sri Lanka Asia Cup : ತಪ್ಪು ತಿದ್ದಿಕೊಳ್ಳಲು ಶ್ರೀಲಂಕಾ-ಪಾಕಿಸ್ತಾನಕ್ಕೆ ಇಂದಿನ ಪಂದ್ಯದಲ್ಲಿ ಅವಕಾಶ

ಏಷ್ಯಾ ಕಪ್ ಸೂಪರ್-4 ರ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಈಗಾಗಲೇ ಫೈನಲ್ ಪ್ರವೇಶಿಸಿದ್ದು, ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ಹೀಗಾಗಿ, ಭಾನುವಾರದ ಫೈನಲ್‌ಗೂ ಮುನ್ನ ಪಂದ್ಯವು ರಿಹರ್ಸಲ್ ಪಂದ್ಯ ಆಗುವ ನಿರೀಕ್ಷೆಯಿದೆ. ಭಾರತ ಮತ್ತು ಅಫ್ಘಾನಿಸ್ತಾನವನ್ನು ಸೋಲಿಸಿ ಶ್ರೀಲಂಕಾ ಮತ್ತು ಪಾಕಿಸ್ತಾನ ಫೈನಲ್‌ಗೆ ಅರ್ಹತೆ ಪಡೆದಿವೆ. ಆದರೆ ಕೊನೆಯ ಸೂಪರ್-4 ಪಂದ್ಯವು ಬಾಬರ್ ಅಜಮ್ ಮತ್ತು ದಸುನ್ ಶನಕ ತಮ್ಮ ತಂಡದಲ್ಲಿ ಪ್ರಯೋಗ ಮಾಡಲು ಅವಕಾಶ ಮಾಡಿಕೊಡಲಿದೆ.

ಮೊದಲನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಶ್ರೀಲಂಕಾ ನೀಡಿದ ಪ್ರದರ್ಶನ ನೋಡಿದವರಿಗೆ ಅವರು ಫೈನಲ್‌ವರೆಗೂ ಬರುತ್ತಾರೆ ಎನ್ನುವ ಕಲ್ಪನೆಯೂ ಬಂದಿರಲಿಲ್ಲ. ಸ್ವತಃ ಶ್ರೀಲಂಕಾ ಅಭಿಮಾನಿಗಳಿಗೇ ತಮ್ಮ ತಂಡದ ಮೇಲೆ ಭರವಸೆ ಇರಲಿಲ್ಲ.

1021 ದಿನಗಳ ಬಳಿಕ ಶತಕ ದಾಖಲಿಸಿದ ವಿರಾಟ್, 83 ಇನ್ನಿಂಗ್ಸ್ ನಂತರ ಮೂರಂಕಿ ಸ್ಕೋರ್1021 ದಿನಗಳ ಬಳಿಕ ಶತಕ ದಾಖಲಿಸಿದ ವಿರಾಟ್, 83 ಇನ್ನಿಂಗ್ಸ್ ನಂತರ ಮೂರಂಕಿ ಸ್ಕೋರ್

ಆದರೆ, ಮೊದಲನೇ ಪಂದ್ಯದಲ್ಲಿ ಹೀನಾಯ ಸೋಲಿನಿಂದ ಹೊರ ಬಂದ ಶ್ರೀಲಂಕಾ ಅದ್ಭುತವಾಗಿ ಪ್ರದರ್ಶನ ನೀಡಿದೆ. ಒತ್ತಡದ ಸಂದರ್ಭದಲ್ಲಿಯೂ ತಂಡವಾಗಿ ಪ್ರದರ್ಶನ ನೀಡಿದ ಶ್ರೀಲಂಕಾ ಬಲಿಷ್ಠ ಭಾರತವನ್ನೂ ಸೋಲಿಸಿ ಫೈನಲ್‌ ಪ್ರವೇಶಿಸಿದೆ. ಭಾನುವಾರ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಫೈನಲ್ ಪಂದ್ಯವನ್ನಾಡಲಿದೆ. ಅದಕ್ಕೂ ಮುನ್ನವೇ ಸೂಪರ್ 4 ಹಂತದ ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ.

ತಪ್ಪು ತಿದ್ದಿಕೊಳ್ಳಲು ಎರಡೂ ತಂಡಕ್ಕೆ ಅವಕಾಶ

ತಪ್ಪು ತಿದ್ದಿಕೊಳ್ಳಲು ಎರಡೂ ತಂಡಕ್ಕೆ ಅವಕಾಶ

ಫೈನಲ್‌ಗೂ ಮುನ್ನವೇ ಮುಖಾಮುಖಿಯಾಗುತ್ತಿರುವುದು ಎರಡೂ ತಂಡಗಳಿಗೆ ಅನುಕೂಲವಾಗಿದೆ. ಎದುರಾಳಿ ತಂಡದ ಬಲ, ಬಲಹೀನತೆಯನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಶುಕ್ರವಾರದ ಪಂದ್ಯದಲ್ಲಿ ಪಡೆಯುವ ಅನುಭವ ಫೈನಲ್ ಪಂದ್ಯದಲ್ಲಿ ಸಹಕಾರಿಯಾಗಲಿದೆ.

ಏಷ್ಯಾಕಪ್‌ 2022ರಲ್ಲಿ ಇದೇ ಮೊದಲ ಬಾರಿಗೆ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ. ಆದ್ದರಿಂದಲೇ ಸೂಪರ್ 4 ಹಂತದ ಕೊನೆಯ ಪಂದ್ಯವನ್ನು ಎರಡೂ ತಂಡಗಳಿಗೆ ರಿಹರ್ಸಲ್ ಪಂದ್ಯ ಎನ್ನುವಂತೆ ನೋಡಲಾಗುತ್ತಿದೆ.

Ind vs Afg: ಅಫ್ಘಾನಿಸ್ತಾನ ವಿರುದ್ಧ ಏಕಸ್ವಾಮ್ಯ ಜಯ ಸಾಧಿಸಿದ ಭಾರತ, 101ರನ್‌ಗಳ ಬೃಹತ್ ಗೆಲುವು

ಲೆಕ್ಕಾಚಾರ ತಲೆಕೆಳಗು ಮಾಡಿದ ಶ್ರೀಲಂಕಾ ಪ್ರದರ್ಶನ

ಲೆಕ್ಕಾಚಾರ ತಲೆಕೆಳಗು ಮಾಡಿದ ಶ್ರೀಲಂಕಾ ಪ್ರದರ್ಶನ

ಅಫ್ಘಾನಿಸ್ತಾನದ ವಿರುದ್ಧ ಹೀನಾಯ ಸೋಲಿನ ನಂತರ ಲಯ ಕಂಡುಕೊಂಡ ಶ್ರೀಲಂಕಾ ಆಟಗಾರರು ಬಾಂಗ್ಲಾ ವಿರುದ್ಧ 184 ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡುವ ಮೂಲಕ ಭರ್ಜರಿ ಜಯ ದಾಖಲಿಸಿದರು. ನಂತರ ಸೂಪರ್ 4 ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಆಡಿದ ಶ್ರೀಲಂಕಾ 176 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ತಲುಪಿದರು. 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಶ್ರೀಲಂಕಾ ಮೊದಲನೇ ಪಂದ್ಯದ ಸೋಲಿಗೆ ಸೇಡು ತೀರಿಸುಕೊಂಡಿತು.

ನಂತರ ಭಾರತದ ವಿರುದ್ಧದ ಪಂದ್ಯದಲ್ಲೂ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ ಶ್ರೀಲಂಕಾ ತಂಡ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ.

ರನ್‌ ಗಳಿಸಬೇಕಿದೆ ಬಾಬರ್ ಅಜಂ

ರನ್‌ ಗಳಿಸಬೇಕಿದೆ ಬಾಬರ್ ಅಜಂ

ಏಷ್ಯಾಕಪ್ 2022ರ ಆರಂಭದಿಂದಲೂ ಬಾಬರ್ ಅಜಂ ರನ್ ಗಳಿಸಲು ಪರದಾಡುತ್ತಿರುವುದು ಪಾಕಿಸ್ತಾನಕ್ಕೆ ತಲೆನೋವಾಗಿದೆ. ಸೂಪರ್ 4 ಹಂತಗಳ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನದ ವಿರುದ್ಧ ಪಾಕಿಸ್ತಾನ ಜಯ ಗಳಿಸಿದರೂ ಬ್ಯಾಟಿಂಗ್ ವಿಭಾಗದಲ್ಲಿ ಸ್ಥಿರವಾದ ಪ್ರದರ್ಶನ ಬಂದಿಲ್ಲ.

ಅದರಲ್ಲೂ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ 130 ರನ್‌ಗಳನ್ನು ಚೇಸ್‌ ಮಾಡಲು ಪಾಕಿಸ್ತಾನ ಹರಸಾಹಸ ಮಾಡಿತು. ಸೋಲುವ ಹಂತಕ್ಕೆ ಹೋಗಿದ್ದ ಪಾಕಿಸ್ತಾನವನ್ನು ನಸೀಂ ಶಾ ಎರಡು ಭರ್ಜರಿ ಸಿಕ್ಸರ್ ಮೂಲಕ ಗೆಲ್ಲಿಸಿದ್ದರು. ಫೈನಲ್‌ಗೂ ಮುನ್ನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಪ್ಪು ತಿದ್ದಿಕೊಳ್ಳಬೇಕಿದೆ.

Virat Kohli ಆಟ ನೋಡಿದ ಕೋಚ್ ಹಾಗು ಕ್ಯಾಪ್ಟನ್ ಮಾಡಿದ್ದೇನು | *Cricket | OneIndia Kannada
ಕಣಕ್ಕಿಳಿಯಲಿರುವ ಸಂಭಾವ್ಯ ತಂಡಗಳು

ಕಣಕ್ಕಿಳಿಯಲಿರುವ ಸಂಭಾವ್ಯ ತಂಡಗಳು

ಶ್ರೀಲಂಕಾ ಸಂಭಾವ್ಯ XI: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ/ದಿನೇಶ್ ಚಾಂಡಿಮಲ್, ದನುಷ್ಕ ಗುಣತಿಲಕ, ಭಾನುಕಾ ರಾಜಪಕ್ಸೆ, ದಸುನ್ ಶನಕ, ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ

ಪಾಕಿಸ್ತಾನ ಸಂಭಾವ್ಯ XI: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್, ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್/ಉಸ್ಮಾನ್ ಖಾದಿರ್, ಮೊಹಮ್ಮದ್ ನವಾಜ್, ಆಸಿಫ್ ಅಲಿ, ಖುಷ್ದಿಲ್ ಶಾ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸನೇನ್

Story first published: Friday, September 9, 2022, 14:06 [IST]
Other articles published on Sep 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X