1021 ದಿನಗಳ ಬಳಿಕ ಶತಕ ದಾಖಲಿಸಿದ ವಿರಾಟ್, 83 ಇನ್ನಿಂಗ್ಸ್ ನಂತರ ಮೂರಂಕಿ ಸ್ಕೋರ್

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರೀ ದಿನಗಳ ಬಳಿಕ 71ನೇ ಅಂತರಾಷ್ಟ್ರೀಯ ಶತಕ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ತನ್ನ ವಿಶ್ವರೂಪ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ, ಎರಡೂವರೆ ವರ್ಷಗಳ ಕಾಲ ಕಾಡಿದ್ದ ಶತಕವನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

61 ಎಸೆತಗಳಲ್ಲಿ ಅಜೇಯ 122 ರನ್ ಕಲೆಹಾಕಿದ ವಿರಾಟ್ ಕೊಹ್ಲಿ ಇನ್ನಿಂಗ್ಸ್‌ನಲ್ಲಿ 12 ಆಕರ್ಷಕ ಬೌಂಡರಿ ಮತ್ತು 6 ಅಮೋಘ ಸಿಕ್ಸರ್‌ಗಳು ದಾಖಲಾದವು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕ ಕೆ.ಎಲ್ ರಾಹುಲ್ ಜೊತೆಗೆ ಓಪನರ್ ಆಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಭರ್ಜರಿ 200ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸುವ ಮೂಲಕ ಅಮೋಘ ಮತ್ತು ಚೊಚ್ಚಲ ಟಿ20 ಅಂತರಾಷ್ಟ್ರೀಯ ಶತಕವನ್ನು ದಾಖಲಿಸಿದ್ದಾರೆ.

70 ಶತಕ ಸಿಡಿಸಿದ್ದ ಕೊಹ್ಲಿಗೆ ಟಿ20ಯಲ್ಲಿ ಒಂದು ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ!

70 ಶತಕ ಸಿಡಿಸಿದ್ದ ಕೊಹ್ಲಿಗೆ ಟಿ20ಯಲ್ಲಿ ಒಂದು ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ!

ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ ಫಾರ್ಮೆಟ್‌ನಲ್ಲಿ ಒಟ್ಟಾರೆ 70 ಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿ, ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಒಂದು ಶತಕವನ್ನ ಸಿಡಿಸಿರಲಿಲ್ಲ. ಆದ್ರೆ ಕೊನೆಗೂ ವಿರಾಟ್ ಕೊಹ್ಲಿಗೆ ಸಾಧ್ಯವಾಗದೇ ಉಳಿದಿದ್ದ ಶತಕ ಮೂಡಿಬಂದಿದೆ.

ಅಫ್ಘಾನಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಮೂರಂಕಿ ಗಡಿದಾಟಿದ ವಿರಾಟ್ ಕೊಹ್ಲಿ, ಅಮೋಘ ಶತಕ ದಾಖಲಿಸುವ ಮೂಲಕ ಚೊಚ್ಚಲ ಟಿ20 ಶತಕಕ್ಕೆ ಮುತ್ತಿಟ್ಟರು. ಈ ಮೂಲಕ ವಿರಾಟ್ ಕೊಹ್ಲಿ 71ನೇ ಅಂತರಾಷ್ಟ್ರೀಯ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

1021 ದಿನಗಳ ಬಳಿಕ ಶತಕ!

1021 ದಿನಗಳ ಬಳಿಕ ಶತಕ!

ನವೆಂಬರ್ 2019ರಲ್ಲಿ ಕೊನೆಯ ಅಂತರಾಷ್ಟ್ರೀಯ ಶತಕ ದಾಖಲಿಸಿದ್ದ ವಿರಾಟ್ ಕೊಹ್ಲಿ ಹತ್ತಿರ ಮೂರು ವರ್ಷಗಳ ಬಳಿಕ ಅಂತರಾಷ್ಟ್ರೀಯ ಶತಕ ದಾಖಲಿಸಿದ್ದಾರೆ ಅಂದ್ರೆ ನಂಬಲು ನಿಜಕ್ಕೂ ಆಶ್ಚರ್ಯವಾಗುತ್ತದೆ. ಕೊಹ್ಲಿ ಹೋದಲೆಲ್ಲಾ 71ನೇ ಶತಕ ಯಾವಾಗ ದಾಖಲಿಸುತ್ತಾರೆ ಎಂದು ಪ್ರಶ್ನೆಗಳೇ ಹೆಚ್ಚಿದ್ದವು. ಹೀಗಿರುವಾಗ ವಿರಾಟ್ ಕೊಹ್ಲಿ ಕೊನೆಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

"ಕಳೆದ 2.5 ವರ್ಷಗಳು ನನಗೆ ಬಹಳಷ್ಟು ಕಲಿಸಿದವು, ನಾನು ಸ್ವಲ್ಪ ಆಘಾತಕ್ಕೊಳಗಾಗಿದ್ದೇನೆ ಏಕೆಂದರೆ ಇದು ನಾನು ಶತಕವನ್ನು ನಿರೀಕ್ಷಿಸಿದ ಕನಿಷ್ಠ ಸ್ವರೂಪವಾಗಿತ್ತು" ಎಂದು ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಸಿಡಿಸಿದ ಬಳಿಕ ಹೇಳಿಕೆ ನೀಡಿದ್ದಾರೆ.

Ind vs Afg: ಕೊಹ್ಲಿ ಚೊಚ್ಚಲ ಟಿ20 ಶತಕ, 212 ರನ್ ಕಲೆಹಾಕಿದ ಟೀಂ ಇಂಡಿಯಾ

ಸಚಿನ್ ಬಳಿಕ ಸೆಂಚುರಿ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ

ಸಚಿನ್ ಬಳಿಕ ಸೆಂಚುರಿ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ

71ನೇ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳ ಒಡೆಯ ಸಚಿನ್ ತೆಂಡೂಲ್ಕರ್ ಬಳಿಕ ಅತಿ ಹೆಚ್ಚು ಶತಕ ಸಿಡಿಸಿದ ಎರಡನೇ ಬ್ಯಾಟರ್ ಆಗಿ ರಿಕಿ ಪಾಂಟಿಂಗ್ ಜೊತೆಗೆ ಜಂಟಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಲೆಜೆಂಡ್ ಕ್ರಿಕೆಟರ್ ರಿಕಿ ಪಾಂಟಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71 ಶತಕ ದಾಖಲಿಸಿದ್ದರು. ಇದೀಗ ಕೊಹ್ಲಿ ಕೂಡ ಅಷ್ಟೇ ಶತಕ ದಾಖಲಿಸುವ ಮೂಲಕ ಪಾಂಟಿಂಗ್ ದಾಖಲೆಯನ್ನ ಸರಿಗಟ್ಟಿದ್ದಾರೆ.

'ಕಿಂಗ್ ಈಸ್ ಬ್ಯಾಕ್‌' : ಸಾವಿರ ದಿನಗಳ ಕಾಯವಿಕೆ ಅಂತ್ಯ, ಶತಕ ದಾಖಲಿಸಿದ ವಿರಾಟ್ ಕೊಹ್ಲಿ

Virat Kohli ಆಟ ನೋಡಿದ ಕೋಚ್ ಹಾಗು ಕ್ಯಾಪ್ಟನ್ ಮಾಡಿದ್ದೇನು | *Cricket | OneIndia Kannada
ಅತಿ ಹೆಚ್ಚು 50+ ರನ್‌ಗಳಿಸಿರುವ ಎರಡನೇ ಬ್ಯಾಟರ್ ವಿರಾಟ್!

ಅತಿ ಹೆಚ್ಚು 50+ ರನ್‌ಗಳಿಸಿರುವ ಎರಡನೇ ಬ್ಯಾಟರ್ ವಿರಾಟ್!

ಇನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಭಾರತಕ್ಕಾಗಿ 50 ಕ್ಕೂ ಹೆಚ್ಚು ರನ್ ಗಳಿಸಿದ ವಿಚಾರದಲ್ಲಿ, ಕೊಹ್ಲಿ ಇದೇ ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿದ್ದಾರೆ. ವಿರಾಟ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71 ಶತಕಗಳನ್ನು ಹೊಂದುವುದಷ್ಟೇ ಅಲ್ಲದೆ, 195 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಈ ಮೂಲಕ ವಿರಾಟ್, ಮಾಸ್ಟರ್ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನ ಪಡೆದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 264 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಭಾರತದ ಪರ ಇದೀಗ ಕೊಹ್ಲಿ ಮತ್ತೊಂದು ದಾಖಲೆಯ ಪಟ್ಟಿಯಲ್ಲಿ ಸಚಿನ್ ಬಳಿಕ ನಂತರದ ಸ್ಥಾನ ಪಡೆದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 8, 2022, 22:12 [IST]
Other articles published on Sep 8, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X