
ವಿರಾಟ್ ಕೊಹ್ಲಿಯಿಂದಲೇ ಬೌಲಿಂಗ್ ಪ್ರಯೋಗ?
ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ , ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯಿಂದ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆಯೇ? ಉತ್ತರ ಹೌದು ಎನ್ನಲಾಗಿದೆ. ತಂಡದಲ್ಲಿ ಆರನೇ ಬೌಲಿಂಗ್ ಆಯ್ಕೆಯಾಗಿ ವಿರಾಟ್ ಅವರನ್ನು ಸಿದ್ಧಪಡಿಸಲು ಅವರು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಆಸೀಸ್ ವಿರುದ್ಧದ ಮೊದಲ ಟಿ20 ಹಿನ್ನಲೆಯಲ್ಲಿ ಕೊಹ್ಲಿ 30 ರಿಂದ 40 ನಿಮಿಷಗಳ ಕಾಲ ನೆಟ್ಸ್ ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದರು. ಕೊಹ್ಲಿ ಕೇವಲ ಮೋಜಿಗೆ ಬೌಲಿಂಗ್ ಮಾಡದೇ, ಕೋಚ್ ರಾಹುಲ್ ದ್ರಾವಿಡ್ ಅವರ ಮೇಲ್ವಿಚಾರಣೆಯಲ್ಲಿ ಗಂಭೀರವಾಗಿ ಬೌಲಿಂಗ್ ಮಾಡಿದರು. ಈ ಫೋಟೊಗಳನ್ನ ನೋಡಿದ್ರೆ ಟೀಂ ಮ್ಯಾನೇಜ್ ಮೆಂಟ್ ಕೊಹ್ಲಿಯನ್ನು ಬೌಲರ್ ಆಗಿ ಬಳಸಿಕೊಳ್ಳಬೇಕು ಎಂಬುದು ಸ್ಪಷ್ಟವಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಆರಂಭ ಪಡೆದು, ಬಹುಬೇಗನೆ ಮರೆಯಾದ 3 ಭಾರತದ ಆಟಗಾರರು
40 ನಿಮಿಷಗಳ ಕಾಲ ಅಭ್ಯಾಸ
ರಾಹುಲ್ ದ್ರಾವಿಡ್ ಹೊರತಾಗಿ ಹಾರ್ದಿಕ್ ಪಾಂಡ್ಯ ಮತ್ತು ರವಿಚಂದ್ರನ್ ಅಶ್ವಿನ್ ಕೂಡ ಕೊಹ್ಲಿ ಬೌಲಿಂಗ್ ಅನ್ನು ಪರೀಕ್ಷಿಸಿದರು. ಮಧ್ಯಮ ವೇಗದ ಬೌಲಿಂಗ್ ಮಾಡುವ ಸಾಮರ್ಥ್ಯ ಕೊಹ್ಲಿಗಿದೆ. ವಿಶ್ವಕಪ್ ಆತಿಥ್ಯ ವಹಿಸಲಿರುವ ಆಸ್ಟ್ರೇಲಿಯಾದ ಪಿಚ್ ಗಳು ವೇಗಿಗಳಿಗೆ ಹೊಂದಿಕೆಯಾಗಲಿದೆ ಎಂಬ ಹಿನ್ನಲೆಯಲ್ಲಿ ನಾಯಕ ರೋಹಿತ್ ಈ ನಿರ್ಧಾರ ಕೈಗೊಂಡಿದ್ದಾರೆಯಂತೆ.
ಸುಮಾರು ಆರು ವರ್ಷಗಳ ನಂತರ, ಏಷ್ಯಾಕಪ್‌ನಲ್ಲಿ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಬೌಲಿಂಗ್ ಮಾಡಿದಾಗ ಪ್ರಭಾವಿತರಾದರು. ಹಿರಿಯ ಬೌಲರ್‌ಗಳು ಬೌಲಿಂಗ್ ಮಾಡಲು ವಿಫಲರಾಗಿ ರನ್ ಬಿಟ್ಟುಕೊಟ್ಟರು. ಹೆಚ್ಚುವರಿ ಬ್ಯಾಟರ್ ತೆಗೆದುಕೊಳ್ಳುವ ಉದ್ದೇಶದಿಂದ ಕೊಹ್ಲಿಯನ್ನು ಬೌಲರ್ ಆಗಿ ತಯಾರು ಮಾಡಲಾಗುತ್ತಿರಬಹುದು.
ಈ ಆಸ್ಟ್ರೇಲಿಯಾ ಆಟಗಾರನನ್ನೇ ಸ್ಲೆಡ್ಜ್ ಮಾಡಿದ್ದ ವಿರಾಟ್ ಕೊಹ್ಲಿ

ನಾಲ್ವರು ಸ್ಪೆಷಲಿಸ್ಟ್ ಬೌಲರ್‌ಗಳು
ಟೀಮ್ ಇಂಡಿಯಾ ನಾಲ್ವರು ಸ್ಪೆಷಲಿಸ್ಟ್ ಬೌಲರ್‌ಗಳು ಮತ್ತು ಒಬ್ಬ ಪೇಸ್ ಆಲ್‌ರೌಂಡರ್‌ನೊಂದಿಗೆ ಕಣಕ್ಕೆ ಇಳಿಯಲಿದೆ. ಹೆಚ್ಚುವರಿ ಬ್ಯಾಟರ್ ತೆಗೆದುಕೊಳ್ಳಲು, ಅವರಿಗೆ ಅರೆಕಾಲಿಕ ಬೌಲಿಂಗ್ ಮಾಡುವ ಆಟಗಾರನ ಅಗತ್ಯವಿದೆ. ಆ ಕ್ರಮದಲ್ಲಿ ರೋಹಿತ್ ಶರ್ಮಾ ವಿರಾಟ್ ಮೂಲಕ ಒಂದು ಅಥವಾ ಎರಡು ಓವರ್ ಬೌಲ್ ಮಾಡಿಸಲು ಮುಂದಾಗಿದ್ದಾರೆ. ಕೊಹ್ಲಿ ಯಾವುದೇ ತೊಂದರೆಯಿಲ್ಲದೆ ಬೌಲಿಂಗ್ ಮಾಡಿದರೆ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರನ್ನೂ ಆಡಿಸಬಹುದು, ಇಲ್ಲದಿದ್ದರೆ ಒಬ್ಬರು ಮಾತ್ರ ತಂಡಕ್ಕೆ ಬರುತ್ತಾರೆ ಎಂದು ಟೀಮ್ ಮ್ಯಾನೇಜ್‌ಮೆಂಟ್ ಭಾವಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಬ್ಯಾಟ್ಸ್‌ಮನ್ ಆಗಿ ಅಷ್ಟೇ ಅಲ್ಲದೆ ಬೌಲರ್ ಆಗಿ ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications
