For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಆತ್ಮವಿಶ್ವಾಸ ಮತ್ತಷ್ಟು ಕಡಿಮೆಯಾಗಿದೆ: ಸಂಜಯ್ ಮಂಜ್ರೇಕರ್

Virat kohli

ಎಡ್ಜ್‌ಬಾಸ್ಟನ್‌ ಸ್ಟೇಡಿಯಂನಲ್ಲಿ ಮರುನಿಗದಿಯಾದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಅದ್ಭುತ ಕಂಬ್ಯಾಕ್ ಮಾಡಿತು. 100 ರನ್‌ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಜೊತೆಯಾಟದಿಂದ 300ರನ್‌ಗಳ ಗಡಿ ದಾಟಿತು.

ರಿಷಭ್ ಪಂತ್ ಅದ್ಭುತ ಶತಕದ ಜೊತೆಗೆ ದ್ವಿಶತಕ ಜೊತೆಯಾಟವಾಡಿದ ಜಡೇಜಾ ಟೀಂ ಇಂಡಿಯಾಗೆ ಆಧಾರವಾದ್ರು. ಮೊದಲ ದಿನದಾಟದಂತ್ಯಕ್ಕೆ ಭಾರತ ಪರ ಪಂತ್ 146 ರನ್‌ಗಳಿಸಿ ಔಟಾದ್ರೆ, ಜಡೇಜಾ 104 ರನ್‌ ಕಲೆಹಾಕಿದರು. ಆದ್ರೆ ಈ ಪಂದ್ಯದಲ್ಲಿ ಟಾಪ್‌ ಆರ್ಡರ್ ಬ್ಯಾಟಿಂಗ್ ವೈಫಲ್ಯವು ಟೀಕಾರರಿಗೆ ಆಹಾರವಾಯ್ತು. ಅದ್ರಲ್ಲೂ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್‌ ಇಲ್ಲಿಯೂ ಮುಂದುವರಿದಿದೆ.

ಮತ್ತೆ ಮುಗ್ಗರಿಸಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ತನ್ನ ಕಳಪೆ ಫಾರ್ಮ್ ಅನ್ನು ಇಂಗ್ಲೆಂಡ್ ಅಂಗಳದಲ್ಲಿ ಮುಂದುವರಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ 19 ಎಸೆತಗಳಲ್ಲಿ 11 ರನ್ ಕಲೆಹಾಕಿ ಔಟಾದರು. ಇವರ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿಗಳು ಒಳಗೊಂಡಿದ್ದವು. ಮ್ಯಾಟಿ ಪಾಟ್ಸ್ ಬೌಲಿಂಗ್‌ನಲ್ಲಿ ಬ್ಯಾಟ್‌ ಬೀಸಲು ಹೋಗಿ ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಿಸಿದ ಕೊಹ್ಲಿ ಬ್ಯಾಟ್‌ಗೆ ಚೆಂಡು ತಗುಲಿ ವಿಕೆಟ್ ಎಗರಿಸಿತು.

ಕೊಹ್ಲಿ ಆಟಕ್ಕೆ ಬೇಸತ್ತ ಫ್ಯಾನ್ಸ್‌ ಟೀಕೆ

ವಿರಾಟ್ ಕೊಹ್ಲಿ ಮೇಲಿನ ಭರವಸೆ ಇಲ್ಲದ ಹೊರತಾಗಿಯೂ, ಕೊಹ್ಲಿ ಪದೇ ಪದೇ ಕೆಟ್ಟ ರೀತಿಯಲ್ಲಿ ಔಟಾಗುತ್ತಿರುವುದನ್ನ ಕಂಡು ಅಭಿಮಾನಿಗಳು ಬೇಸತ್ತು ಹೋಗಿದ್ದಾರೆ. ಇನ್ನೆಷ್ಟು ತಾಳ್ಮೆಯಿಂದ ನಿಮ್ಮ ಉತ್ತಮ ಇನ್ನಿಂಗ್ಸ್‌ ನೋಡಲು ಕಾಯಬೇಕು ಎಂದಿದ್ದಾರೆ. ವಿರಾಟ್ ಔಟಾದ ಬಳಿಕ ನಗುತ್ತಾ ಪೆವಿಲಿಯನ್ ಸೇರಿದ್ದು, ಅಭಿಮಾನಿಗಳನ್ನ ಮತ್ತಷ್ಟು ಕೆರಳಿಸಿತು. ಕೊಹ್ಲಿ ಫ್ಲಾಪ್‌ ಶೋ ಇಂಗ್ಲೆಂಡ್‌ನಲ್ಲೂ ಮುಂದುವರಿಯಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ 35ರನ್‌ ನೀಡಿದ ಸ್ಟುವರ್ಟ್ ಬ್ರಾಡ್: ಬುಮ್ರಾ ವಿಶ್ವದಾಖಲೆ

ಆತ್ಮವಿಶ್ವಾಸ ತಗ್ಗಿದೆ ಎಂದು ಸಂಜಯ್ ಮಂಜ್ರೇಕರ್

ಆತ್ಮವಿಶ್ವಾಸ ತಗ್ಗಿದೆ ಎಂದು ಸಂಜಯ್ ಮಂಜ್ರೇಕರ್

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯ ಆತ್ಮವಿಶ್ವಾಸ ಮತ್ತಷ್ಟು ತಗ್ಗಿದೆ ಎಂದು ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ. ವಿರಾಟ್ ಕೊಹ್ಲಿ ದೀರ್ಘಕಾಲದ ಕಳಪೆ ಫಾರ್ಮ್ ಅನ್ನು ಮುಂದುವರಿಸಿದ್ದು, ಆಶ್ಚರ್ಯ ಮೂಡಿಸುತ್ತದೆ ಎಂದಿದ್ದಾರೆ.

ಮಂಜ್ರೇಕರ್ ಕೊಹ್ಲಿ ಬ್ಯಾಟಿಂಗ್‌ನ ತೊಂದರೆಗಳ ಬಗ್ಗೆ ಮಾತನಾಡುತ್ತಾ, ಕೊಹ್ಲಿಯ ತಂತ್ರವು ಈ ಹಂತದಲ್ಲಿ ಪರಿಪೂರ್ಣವಾಗಿಲ್ಲ. ಆದರೆ ಕೆಲವು ಬ್ಯಾಟರ್‌ಗಳು ತಮ್ಮ ದೋಷಯುಕ್ತ ತಂತ್ರವನ್ನು ಲೆಕ್ಕಿಸದೆ ರನ್ ಗಳಿಸುತ್ತಾರೆ ಎಂದು ಹೇಳಿದರು. ಬ್ಯಾಟಿಂಗ್ ಮಾಡುವಾಗ ಕೊಹ್ಲಿ ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಮತ್ತು ಅವರ ಕಳಪೆ ಫಾರ್ಮ್‌ನೊಂದಿಗೆ ಕೆಲವು ದುರದೃಷ್ಟವನ್ನು ಹೊಂದಿದ್ದರು ಎಂದು ಅವರು ಪರಿಗಣಿಸಿದ್ದಾರೆ.

Ind vs Eng 5th Test: ಅಮೋಘ ಶತಕ ದಾಖಲಿಸಿದ ರವೀಂದ್ರ ಜಡೇಜಾ ದಾಖಲೆ

ವಿರಾಟ್ ಕೊಹ್ಲಿ ಇಷ್ಟು ದೊಡ್ಡ ಮಟ್ಟಿಗೆ ಫೇಲ್ಯೂರ್ ಆಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ!

ವಿರಾಟ್ ಕೊಹ್ಲಿ ಇಷ್ಟು ದೊಡ್ಡ ಮಟ್ಟಿಗೆ ಫೇಲ್ಯೂರ್ ಆಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ!

"ನಾನು ಏನು ಹೇಳಬೇಕು ಗೊತ್ತಾಗುತ್ತಿಲ್ಲ, ನಾನು ಒಬ್ಬ ಪರಿಣಿತನಾಗಿ ನನ್ನಲ್ಲಿ ಕೆಲವು ಅಭಿಪ್ರಾಯವನ್ನು ಹೊಂದಿದ್ದೇನೆ. ಆತನಲ್ಲಿ ಆತ್ಮವಿಶ್ವಾಸವು ಸ್ವಲ್ಪ ಕಡಿಮೆಯಾಗಿದೆ, ಅವನು ಸ್ವಲ್ಪ ಬ್ಯಾಡ್ ಲಕ್ ಅನ್ನು ಹೊಂದಿದ್ದಾನೆ. ಆತನಲ್ಲಿ ತಾಂತ್ರಿಕ ಸಮಸ್ಯೆಗಳಿವೆ, ಅವನು ಫ್ರಂಟ್ ಫೂಟ್ ಬಹಳಷ್ಟು ಆಡುತ್ತಿದ್ದಾನೆ ಎಂದು ನನಗೆ ತೋರುತ್ತದೆ ಆದರೆ ಈ ಕಾರಣದಿಂದಾಗಿ ಅವರು ರನ್ ಗಳಿಸುತ್ತಿಲ್ಲ. ಪ್ರತಿಯೊಬ್ಬರೂ ತಾಂತ್ರಿಕ ಪರಿಪೂರ್ಣತೆಯನ್ನು ಹೊಂದಿಲ್ಲ ಆದರೆ ಅವರು ರನ್ ಗಳಿಸುತ್ತಾರೆ. "ಎಂದು ಸೋನಿ ಸ್ಪೋರ್ಟ್ಸ್‌ನಲ್ಲಿ ನಡೆದ ಚರ್ಚೆಯಲ್ಲಿ ಮಂಜ್ರೇಕರ್ ಹೇಳಿದರು.

ಕೊಹ್ಲಿ ಶತಕ ಸಿಡಿಸಿ 2 ವರ್ಷಗಳೇ ಕಳೆದು ಹೋಗಿದೆ!

ಕೊಹ್ಲಿ ಶತಕ ಸಿಡಿಸಿ 2 ವರ್ಷಗಳೇ ಕಳೆದು ಹೋಗಿದೆ!

ವಿರಾಟ್ ಕೊಹ್ಲಿ ಕಳೆದೆರಡು ವರ್ಷಗಳಿಂದ ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಅವರು ಎರಡು ವರ್ಷಗಳಿಂದ ಯಾವುದೇ ಸ್ವರೂಪದಲ್ಲಿ ಶತಕ ದಾಖಲಿಸಲು ವಿಫಲರಾಗಿದ್ದಾರೆ. ಮತ್ತು ದೀರ್ಘ ಸ್ವರೂಪದ ಟೆಸ್ಟ್ ಕ್ರಿಕೆಟ್‌ನಲ್ಲಿ 2020ರ ಆರಂಭದಿಂದ 27.48 ರ ಸಾಧಾರಣ ಬ್ಯಾಟಿಂಗ್ ಸರಾಸರಿಯಲ್ಲಿ 852 ರನ್ ಗಳಿಸಿದ್ದಾರೆ. ಇದು ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್‌ಗೆ ಸಾಕ್ಷಿಯಾಗಿದೆ.

Story first published: Saturday, July 2, 2022, 17:12 [IST]
Other articles published on Jul 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+