ಸೊನ್ನೆ ಸುತ್ತೋದ್ರಲ್ಲೂ ವಿರಾಟ್ ದಾಖಲೆ: ಅತಿ ಹೆಚ್ಚು ಡಕೌಟ್ ಆದವರ ಪಟ್ಟಿ ಸೇರಿದ ಕೊಹ್ಲಿ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದೆರಡು ವರ್ಷದಲ್ಲಿ ಅತ್ಯಂತ ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ. ಅದ್ರಲ್ಲೂ ಇತ್ತೀಚೆಗೆ ವಿರಾಟ್ ಬ್ಯಾಟ್‌ನಿಂದ ರನ್‌ಗಳಿಕೆ ದಿನೇ ದಿನೇ ಕಮ್ಮಿಯಾಗತೊಡಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸಂಪೂರ್ಣ ವಿಫಲಗೊಂಡ ವಿರಾಟ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ರು.
ರೋಹಿತ್ ಶರ್ಮಾ ಅಲ್ಜಾರಿ ಜೋಸೆಫ್‌ಗೆ ವಿಕೆಟ್ ಒಪ್ಪಿಸಿದ ಓವರ್‌ನಲ್ಲೇ ಕ್ರೀಸ್‌ಗಿಳಿದಿದ್ದ ವಿರಾಟ್ ಕೊಹ್ಲಿ ತಾನು ಎದುರಿಸಿದ ಎರಡನೇ ಎಸೆತದಲ್ಲೇ ಡಕೌಟ್ ಆದ್ರು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ವಿರಾಟ್ ಫ್ಲಾಪ್ ಶೋ ಮುಂದುವರಿಯಿತು.
ರೋಹಿತ್ ಶರ್ಮಾ ಫುಲ್ ಟೈಂ ನಾಯಕತ್ವದ ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯದಲ್ಲಿ ಗಳಿಸಿದ್ದು ಕೇವಲ 8 ರನ್ ರನ್, ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ 18 ರನ್‌ಗೆ ವಿಕೆಟ್ ಒಪ್ಪಿಸಿದ್ರು, ಇದೀಗ ಮೂರನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ವಿರಾಟ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
70 ಅಂತರಾಷ್ಟ್ರೀಯ ಶತಕಗಳ ಒಡೆಯ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಶತಕ ಸಿಡಿದು ಎರಡು ವರ್ಷಗಳೇ ಕಳೆದು ಹೋಗಿದೆ. ಇದೀಗ ಶೂನ್ಯ ಸುತ್ತೋದ್ರಲ್ಲೂ ವಿರಾಟ್ ಕೊಹ್ಲಿ ದಾಖಲೆ ಮಾಡಿದ್ದಾರೆ.

15ನೇ ಬಾರಿಗೆ ಡಕೌಟ್ ಆದ ವಿರಾಟ್ ಕೊಹ್ಲಿ
ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 15 ಬಾರಿ ಡಕೌಟ್ ಆಗಿದ್ದಾರೆ. ಇದರೊಂದಿಗೆ ಕೊಹ್ಲಿ ಅತಿ ಹೆಚ್ಚು ಬಾರಿ ಏಕದಿನ ಕ್ರಿಕೆಟ್‌ನಲ್ಲಿ ಶೂನ್ಯ ಸುತ್ತಿದ್ದ ವಿರೇಂದ್ರ ಸೆಹ್ವಾಗ್ ಮತ್ತು ಸುರೇಶ್ ರೈನಾರನ್ನ ಹಿಂದಿಕ್ಕಿದ್ದಾರೆ. ಸೆಹ್ವಾಗ್ ಮತ್ತು ರೈನಾ ಇದುವರೆಗೆ 14 ಬಾರಿ ಶೂನ್ಯಕ್ಕೆ ಔಟಾಗಿದ್ದರು. ಆದ್ರೆ ಒಟ್ಟಾರೆ ಎಲ್ಲಾ ಫಾರ್ಮೆಟ್‌ನಿಂದ ಸಚಿನ್ ತೆಂಡೂಲ್ಕರ್ 20 ಬಾರಿ ಶೂನ್ಯಕ್ಕೆ ಔಟಾಗಿ ಅಗ್ರಸ್ಥಾನದಲ್ಲಿದ್ದಾರೆ. ಯುವರಾಜ್ ಸಿಂಗ್ 18 ಅಂಕಗಳೊಂದಿಗೆ ಎರಡನೇ ಮತ್ತು ಸೌರವ್ ಗಂಗೂಲಿ 16 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ, 1ರಿಂದ 7ನೇ ಸ್ಥಾನದವರೆಗೆ ಆಡಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಲೆಕ್ಕಾಚಾರ ಮಾಡಲಾಗಿದೆ.
Ind vs WI 3rd ODI: ಭಾರತಕ್ಕೆ ಭರ್ಜರಿ ಗೆಲುವು, ವೆಸ್ಟ್ ಇಂಡೀಸ್‌ಗೆ ವೈಟ್‌ವಾಶ್ ಮುಖಭಂಗ

ಮೂರು ಪಂದ್ಯಗಳಲ್ಲೂ ಕೊಹ್ಲಿ ವೈಫಲ್ಯ
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯದಲ್ಲೂ ಕೊಹ್ಲಿ ಮುಗ್ಗರಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಗಳಿಸಿದ್ದು ಕೇವಲ 8 ರನ್ ರನ್, ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ 18 ರನ್‌ಗೆ ವಿಕೆಟ್ ಒಪ್ಪಿಸಿದ್ರು, ಇದೀಗ ಮೂರನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ವಿರಾಟ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

2019ರಲ್ಲಿ ಕೊನೆಯ ಬಾರಿಗೆ ಶತಕ ಸಿಡಿಸಿದ ಕೊಹ್ಲಿ
ಕಳೆದೆರಡು ವರ್ಷಗಳಲ್ಲಿ ಕೊಹ್ಲಿ ರನ್ ಸಂಖ್ಯೆ ಗಣನೀಯವಾಗಿ ಕುಸಿದಿದೆ. ನವೆಂಬರ್ 2019 ರಿಂದ ವಿರಾಟ್ ಒಂದೇ ಒಂದು ಅಂತರರಾಷ್ಟ್ರೀಯ ಶತಕವನ್ನು ಗಳಿಸಿಲ್ಲ. ಬ್ಯಾಟಿಂಗ್ ದಿಗ್ಗಜನ ಬ್ಯಾಟ್‌ನಿಂದ ಶತಕಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ಕ್ರಿಕೆಟ್‌ನಲ್ಲಿ ವಿವಾದಗಳು ಕೂಡ ನಡೆಯುತ್ತಿವೆ. ಟಿ20 ವಿಶ್ವಕಪ್ 2021 ರ ನಂತರ ಭಾರತದ ಚುಟುಕು ಫಾರ್ಮೆಟ್ ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಏಕದಿನ ನಾಯಕತ್ವದಿಂದ ವಜಾಗೊಳಿಸಲ್ಪಟ್ಟರು. ನಂತರ ಕೊಹ್ಲಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಹೇಳಿಕೆಗಳಿಗೆ ವ್ಯತಿರಿಕ್ತವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications