ಲೆಜೆಂಡರಿ ಸಿಂಗರ್ ಕಿಶೋರ್ ಕುಮಾರ್ ಮುಂಬೈ ಬಂಗಲೆಯಲ್ಲಿ ರೆಸ್ಟೋರೆಂಟ್ ತೆರೆಯಲಿರುವ ವಿರಾಟ್ ಕೊಹ್ಲಿ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಆನ್‌ಫೀಲ್ಡ್ ಹೇಗೆ ಹೊಸ ಮೈಲಿಗಲ್ಲುಗಳನ್ನ ತಲುಪಿದ್ದಾರೋ, ಅದೇ ರೀತಿಯಲ್ಲಿ ಆಫ್ ದಿ ಫೀಲ್ಡ್‌ನಲ್ಲೂ ಹೊಸ ಹೊಸ ಪ್ರಯೋಗಕ್ಕೆ ಹೆಸರುವಾಸಿಯಾಗಿದ್ದಾರೆ. ತನ್ನ one8 ಉದ್ಯಮವನ್ನ ಮತ್ತಷ್ಟು ವಿಸ್ತರಿಸುತ್ತಿರುವ ಕೊಹ್ಲಿ ಈಗಾಗಲೇ ಪಾದರಕ್ಷೆ, ಬಟ್ಟೆ ಹಾಗೂ ಹೋಟೆಲ್ ಉದ್ಯಮ ಪ್ರವೇಶಿಸಿ ಸೈ ಎನಿಸಿಕೊಂಡಿದ್ದಾರೆ.
ತನ್ನ ಲಕ್ಸುರಿಯಾದ ಲೈಫ್ ಸ್ಟೈಲ್‌ನಿಂದ ಹೆಸರುವಾಸಿಯಾದ ವಿರಾಟ್ ಕೊಹ್ಲಿಗೆ ತಿಂಗಳ ಆದಾಯ ಕೋಟಿಗಟ್ಟಲೇ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈ ಆದಾಯ ಮೂಲವನ್ನ ಮತ್ತಷ್ಟು ಹೆಚ್ಚಿಸುತ್ತಿರುವ ಕೊಹ್ಲಿ one8 ರೆಸ್ಟೋರೆಂಟ್ ಅನ್ನು ಮುಂಬೈನ ಜುಹುದಲ್ಲಿ ತೆರೆಯಲು ಮುಂದಾಗಿದ್ದಾರೆ.

ಎರಡು ಭವ್ಯ ಮನೆಗಳನ್ನ ಹೊಂದಿರುವ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಈಗಾಗಲೇ ಎರಡು ದೊಡ್ಡ ಲಕ್ಸುರಿ ಮನೆಗಳನ್ನ ಹೊಂದಿದ್ದಾರೆ. ಮುಂಬೈನಲ್ಲಿ ಹಾಗೂ ಗುರುಗಾವ್‌ನಲ್ಲಿ ಎರಡು ಲಕ್ಸುರಿ ಮನೆಗಳನ್ನ ಹೊಂದಿರುವ ವಿರಾಟ್ ಕೊಹ್ಲಿ, ಕ್ರಿಕೆಟ್ ಪ್ರೀತಿಯ ಜೊತೆಗೆ ಉದ್ಯಮದಲ್ಲೂ ತಮ್ಮನ್ನ ತೊಡಗಿಸಿಕೊಳ್ಳುತ್ತಿದ್ದಾರೆ.
ವಿರಾಟ್‌ಗೆ ವ್ಯಾಪಾರದ ಬಗ್ಗೆ ಅಪಾರ ಒಲವಿದ್ದು, ಅವರು ತಮ್ಮದೇ ಆದ ರೆಸ್ಟೋರೆಂಟ್ ಸರಪಳಿ, 'One8 ಕಮ್ಯೂನ್' ಅನ್ನು ಹೊಂದಿದ್ದಾರೆ. ಇದನ್ನು ಅವರ ಜರ್ಸಿ ಸಂಖ್ಯೆ '18' ಎಂದು ಹೆಸರಿಸಲಾಗಿದೆ. ಆದಾಗ್ಯೂ, ಇತ್ತೀಚಿನ ವರದಿಯ ಪ್ರಕಾರ, ವಿರಾಟ್ ಮುಂಬೈನಲ್ಲಿ ಮತ್ತೊಂದು ರೆಸ್ಟೋರೆಂಟ್ ತೆರೆಯಲು ಸಿದ್ಧರಾಗಿದ್ದಾರೆ.
Breaking: ಆಲ್‌ರೌಂಡರ್ ರವೀಂದ್ರ ಜಡೇಜಾ ಏಷ್ಯಾಕಪ್‌ನಿಂದ ಔಟ್, ಅಕ್ಷರ್ ಪಟೇಲ್ ಬದಲಿ ಆಯ್ಕೆ html

ಈಗಾಗಲೇ ಮೂರು ನಗರಗಳಲ್ಲಿದೆ ವಿರಾಟ್ ರೆಸ್ಟೋ ಬಾರ್‌ಗಳಿವೆ
ವಿರಾಟ್ ಕೊಹ್ಲಿ ಈಗಾಗಲೇ One8 ಕಮ್ಯೂನ್' ರೆಸ್ಟೋ ಕಂ ಬಾರ್‌ಗಳು ದೇಶದ ಮೂರು ಪ್ರಮುಖ ನಗರಗಳಲ್ಲಿದೆ. ರಾಜಧಾನಿ ದೆಹಲಿ ಜೊತೆಗೆ ಕೋಲ್ಕತ್ತಾ ಮತ್ತು ಪುಣೆಯಲ್ಲಿ ಈಗಾಗಲೇ ರೆಸ್ಟೋ ಬಾರ್‌ಗಳಿವೆ. ಇದೀಗ ಕೊಹ್ಲಿ ತನ್ನ ಮುಂದಿನ ರೆಸ್ಟೋರೆಂಟ್ ಅನ್ನು ಮುಂಬೈನಲ್ಲಿ ತೆರೆಯಲು ಸಕಲ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮಹಾರಾಷ್ಟ್ರದ ಪುಣೆಯಲ್ಲಿರುವ ರೆಸ್ಟೋರೆಂಟ್ ಜೊತೆಗೆ ಕೊಹ್ಲಿ ರೆಸ್ಟೋರೆಂಟ್ ಸ್ವಾದ ಸವಿಯಲು ಮುಂಬೈ ಜನರಿಗೆ ಅವಕಾಶ ಒದಗಿಬರಲಿದೆ.
ಟಿ20 ವಿಶ್ವಕಪ್ 2022: ಭಾರತ ತಂಡದಲ್ಲಿ KL ರಾಹುಲ್ ಸ್ಥಾನಕ್ಕೆ ಸ್ಪರ್ಧೆಯೊಡ್ಡಿರುವ 3 ಆಟಗಾರರು

ಲೆಜೆಂಡರಿ ಕಿಶೋರ್ ಕುಮಾರ್ ಬಂಗಲೆಯಲ್ಲಿ ರೆಸ್ಟೋರೆಂಟ್!
ಮುಂಬೈನ ಜುಹುನಲ್ಲಿರುವ ಲೆಜೆಂಡರಿ ಸಿಂಗರ್ ಕಿಶೋರ್ ಕುಮಾರ್‌ರ ಬಂಗಲೆ 'ಗೌರಿ ಪುಂಜ್'ನಲ್ಲಿ ವಿರಾಟ್ ಕೊಹ್ಲಿ ತನ್ನ ಮುಂದಿನ ರೆಸ್ಟೋ ಬಾರ್ ಅನ್ನು ತೆರೆಯಲು ಯೋಜಿಸಿದ್ದಾರೆ.
ಎಕಾನಾಮಿಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸುದ್ದಿಯನ್ನು ಖಚಿತಪಡಿಸಿದ ದಿವಂಗತ ಕಿಶೋರ್ ಕುಮಾರ್ ಅವರ ಪುತ್ರ ಅಮಿತ್ ಕುಮಾರ್, ಲೀನಾ ಚಂದಾವರ್ಕರ್ ಅವರ ಮಗ ಸುಮೀತ್ ಕೆಲವು ತಿಂಗಳ ಹಿಂದೆ ವಿರಾಟ್ ಅವರನ್ನು ಭೇಟಿಯಾದಾಗ ಈ ಮಾತುಕತೆ ಪ್ರಾರಂಭವಾಯಿತು ಎಂದು ಹೇಳಿದರು. ವಿರಾಟ್ಗೆ ಸ್ಥಳವನ್ನು ಗುತ್ತಿಗೆ ನೀಡುವ ಆಲೋಚನೆ ಬಂದಿತು ಎಂದು ಅವರು ಹೇಳಿದರು. ಇದಲ್ಲದೆ, ಬಲಗೈ ಬ್ಯಾಟ್ಸ್‌ಮನ್ ಐದು ವರ್ಷಗಳ ಅವಧಿಗೆ ಜಾಗವನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ಅಮಿತ್ ಬಹಿರಂಗಪಡಿಸಿದ್ದಾರೆ.
ಈಗಾಗಲೇ ತನ್ನ ಅಧಿಕೃತ One8 ಕಮ್ಯೂನ್' ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲೂ ತನ್ನ ಮುಂದಿನ ಔಟ್‌ಲೇಟ್ ಮುಂಬೈನ ಜುಹುದಲ್ಲಿ ಸದ್ಯದಲ್ಲೇ ಬರಲಿದೆ ಎಂದು ಬಯೋವನ್ನ ಅಪ್‌ಡೇಟ್ ಮಾಡಿದ್ದಾರೆ.
ತನ್ನ ಬಿಜಿನೆಸ್ ಅನ್ನು ಮತ್ತಷ್ಟು ವಿಸ್ತರಿಸಿರುವ ವಿರಾಟ್ ಕೊಹ್ಲಿ
ಹೋಟೆಲ್ ವ್ಯವಹಾರದ ಬಗ್ಗೆ ವಿರಾಟ್ ಕೊಹ್ಲಿ ಒಲವಿನ ಹೊರತಾಗಿ, ವಿರಾಟ್ ಕೊಹ್ಲಿಗೆ ಬಟ್ಟೆ, ಬೂಟುಗಳು ಮತ್ತು ಸುಗಂಧದ(ಪರ್ಪ್ಯೂಮ್) ಬಗ್ಗೆ ಹೆಚ್ಚಿನ ವ್ಯಾಪಾರ ಆಸಕ್ತಿ ಇದೆ. ಇನ್ನು ಬಟ್ಟೆ ಮತ್ತು ಪರಿಕರಗಳ ಬ್ರಾಂಡ್‌ನ 'Wrogn'' ನಲ್ಲಿ ವಿರಾಟ್ ಕೊಹ್ಲಿ ಹೂಡಿಕೆ ಮಾಡಿದ್ದಾರೆ. ಇದಲ್ಲದೆ, ವಿರಾಟ್ ಫಿಟ್‌ನೆಸ್ ಫ್ರೀಕ್ ಆಗಿದ್ದು, ಕ್ರೀಡೆ-ಸಂಬಂಧಿತ ಬ್ರ್ಯಾಂಡ್‌ಗಳ ಜೊತೆಗೆ ಒಪ್ಪಂದಗಳನ್ನ ಮಾಡಿಕೊಂಡಿದ್ದು, ಹಲವಾರು ಉತ್ಪನ್ನಗಳ ರಾಯಭಾರಿ ಕೂಡ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications