ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ 2022: ಭಾರತ ತಂಡದಲ್ಲಿ KL ರಾಹುಲ್‌ ಸ್ಥಾನಕ್ಕೆ ಸ್ಪರ್ಧೆಯೊಡ್ಡಿರುವ 3 ಆಟಗಾರರು

KL Rahul

ಐಸಿಸಿ ಟಿ20 ವಿಶ್ವಕಪ್‌ ದಿನಾಂಕವು ದಿನದಿಂದ ದಿನಕ್ಕೆ ಸಮೀಪಿಸುತ್ತಿದೆ. ಈಗಾಗಲೇ ಆಸ್ಟ್ರೇಲಿಯಾ ಟಿ20 ಸ್ಕ್ವಾಡ್ ಅನ್ನು ಘೋಷಿಸಿದ್ದಾಗಿದೆ. ಕಾಂಗರೂ ನಾಡಿನಲ್ಲೇ ನಡೆಯಲಿರುವ ಚುಟುಕು ವಿಶ್ವಕಪ್‌ಗೆ ಸ್ಕ್ವಾಡ್‌ ಅನ್ನು ಅಂತಿಮಗೊಳಿಸಲು ಟೀಂ ಇಂಡಿಯಾ ಸೇರಿದಂತೆ ಉಳಿದ ತಂಡಗಳು ಪ್ರಯತ್ನ ನಡೆಸಿವೆ.

ಟೀಂ ಇಂಡಿಯಾ ತನ್ನ ಪ್ರಮುಖ ಬೌಲರ್‌ಗಳ ಇಂಜ್ಯುರಿ ನಡುವೆ ಟಿ20 ವಿಶ್ವಕಪ್‌ಗೆ ಸ್ಕ್ವಾಡ್ ಅನ್ನು ಅಂತಿಮಗೊಳಿಸುವ ತರಾತುರಿಯಲ್ಲಿದೆ. ಹೀಗಿರುವಾಗ ತಂಡಕ್ಕೆ ಕಂಬ್ಯಾಕ್ ಮಾಡಿರುವ ಆಟಗಾರರಲ್ಲಿ ಫಾರ್ಮ್ ಕೊರತೆ ಕೂಡ ಎದ್ದು ಕಾಣುತ್ತಿದೆ. ಇದರಲ್ಲಿ ಓಪನರ್ ಕೆ.ಎಲ್ ರಾಹುಲ್ ಕೂಡ ಒಬ್ಬರು. ಜಿಂಬಾಬ್ವೆ ಸರಣಿಯಲ್ಲಿ ಟೀಂ ಇಂಡಿಯಾಗೆ ದೀರ್ಘ ಸಮಯದ ಬಳಿಕ ಕಂಬ್ಯಾಕ್ ಮಾಡಿದ ರಾಹುಲ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ವಿಶ್ವಕಪ್‌ ದೃಷ್ಟಿಯಿಂದ ಬಲಿಷ್ಟ ಪ್ಲೇಯಿಂಗ್ 11 ರಚನೆಗೆ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ ಯೋಜನೆ ರೂಪಿಸಿದೆ. ಜಸ್ಪ್ರೀತ್ ಬುಮ್ರಾ , ಹರ್ಷಲ್ ಪಟೇಲ್ ಇಂಜ್ಯುರಿಯ ನಡುವೆ ಸ್ಕ್ವಾಡ್ ಅನ್ನು ಅಂತಿಮಗೊಳಿಸಬೇಕಿದೆ. ಆದ್ರೆ ಓಪನರ್ ಕೆ.ಎಲ್ ರಾಹುಲ್ ಸ್ಟ್ರೈಕ್‌ರೇಟ್ ವೇಗಗೊಳಿಸಿ ರನ್‌ಗಳಿಸಲು ಪರದಾಡುತ್ತಿದ್ದಾರೆ. ಹಾಂಕಾಂಗ್‌ನಂತಹ ದುರ್ಬಲ ತಂಡದೆದುರು 36 ಎಸೆತಗಳನ್ನ ಎದುರಿಸಿ ಗಳಿಸಿದ್ದು 39ರನ್‌ಗಳು. ಹೀಗಾಗಿ ಕೆ.ಎಲ್ ರಾಹುಲ್ ಬದಲಿಗೆ ಯುವ ಆಟಗಾರರಿಗೆ ಓಪನಿಂಗ್‌ ಅವಕಾಶ ನೀಡಿದ್ದೇ ಆದಲ್ಲಿ ಮೂವರು ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿದ್ದಾರೆ.

ಇಶಾನ್ ಕಿಶನ್

ಇಶಾನ್ ಕಿಶನ್

ಎಡಗೈ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಹೆಸರುವಾಸಿಯಾದ ಯುವ ಕ್ರಿಕೆಟಿಗ. ಪವರ್‌ಪ್ಲೇ ಓವರ್‌ಗಳಲ್ಲಿ ಇಶಾನ್ ವೇಗವಾಗಿ ರನ್‌ ಕಲೆಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಜೊತೆಗೆ ನಾಯಕ ರೋಹಿತ್ ಶರ್ಮಾ ಜೊತೆಗೆ ಈಗಾಗಲೇ ಆಡಿರುವ ಅನುಭವವುಳ್ಳ ಕಿಶನ್, ರೈಟ್ ಅಂಡ್ ಲೆಫ್ಟ್‌ ಕಾಂಬಿನೇಷನ್‌ನಲ್ಲಿ ಕಣಕ್ಕಿಳಿದ್ರೆ ಎದುರಾಳಿಗೆ ಸವಾಲಾಗಿ ಪರಿಣಮಿಸಬಹುದು.

ಕೆ.ಎಲ್ ರಾಹುಲ್‌ಗೆ ಹೋಲಿಸಿದ್ರೆ ಇಶಾನ್ ಕಿಶನ್ ಪ್ರಸ್ತುತ ವರ್ಷದಲ್ಲಿ 14 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 30.71ರ ಸರಾಸರಿಯಲ್ಲಿ 430 ರನ್ ಕಲೆಹಾಕಿದ್ದಾರೆ. 130.30ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಮುಂಬೈ ಬ್ಯಾಟರ್‌, ಐಪಿಎಲ್ 2022ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ 32.15ರ ಸರಾಸರಿಯಲ್ಲಿ 418 ರನ್ ಕಲೆಹಾಕಿದರು.

ಕಿಶನ್ ಸ್ವಾಭಾವಿಕವಾಗಿ ಉತ್ತಮ ಬಾಲ್‌ ಟೈಮರ್ ಆಗಿದ್ದು, ದೊಡ್ಡ ಹೊಡೆತಗಳನ್ನ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಬೇಕಿದ್ದಲ್ಲಿ ವಿಕೆಟ್ ಕೀಪರ್‌ ಮಾಡಬಲ್ಲರು. ಈ ಮೂಲಕ ಭಾರತದ ಟಾಪ್ ಆರ್ಡರ್ ಸಮಸ್ಯೆಯನ್ನ ಹೋಗಲಾಡಿಸುವ ಸಾಮರ್ಥ್ಯ ಹೊಂದಿದ್ದಾರೆ.

Asia cup 2022: ಬಾಂಗ್ಲಾ ವಿರುದ್ಧ ರಹಸ್ಯ ಕೋಡ್ ಅನ್ನು ಬಳಸಿದ ಶ್ರೀಲಂಕಾದ ಹೆಡ್ ಕೋಚ್‌

ರಿಷಭ್ ಪಂತ್

ರಿಷಭ್ ಪಂತ್

ಟೀಂ ಇಂಡಿಯಾದ ಸೂಪರ್ ಸ್ಟಾರ್ ರಿಷಭ್ ಪಂತ್‌ ಭಾರತ ತಂಡದದಲ್ಲಿ ಅದ್ರಲ್ಲೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅದ್ಭುತ ಪ್ಲೇಯರ್ ಆಗಿ ಹೊರಹೊಮ್ಮಿದ್ದಾರೆ. ಆದ್ರೆ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ರಿಷಭ್ ಪಂತ್ ಮಿಂಚಿದ್ದೇ ಕಡಿಮೆಯಾಗಿದೆ. ಹೀಗಿದ್ದರೂ ಈತ ಯಾವಾಗ ಬೇಕಾದರೂ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಇಶಾನ್ ಕಿಶನ್ ರೀತಿಯಲ್ಲಿ ಈತನೂ ಎಡಗೈ ಬ್ಯಾಟರ್ ಆಗಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಜೊತೆಗೆ ಪರಿಸ್ಥಿತಿಗೆ ತಕ್ಕಂತೆ ಆಡುವ ಜಾಣ್ಮೆ ಇವರಲ್ಲಿದೆ. ಪರಿಸ್ಥಿತಿಗೆ ತಕ್ಕಂತೆ ತಂಡಕ್ಕೆ ನೆರವಾಗುವ ಸಾಮರ್ಥ್ಯ ಹೊಂದಿರುವ ಇಶಾನ್ ಕಿಶನ್ ತಂಡವನ್ನ ಗೆಲುವಿನ ದಡ ತಲುಪಿಸುವ ಸಾಮರ್ಥ್ಯ ಹೊಂದಿದ್ದಾರೆ.

ರಿಷಭ್ ಪಂತ್ ದೊಡ್ಡ ಸಮಸ್ಯೆ ಏನಂದ್ರೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 23.86ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಪಂತ್ ಟಿ20ಯಲ್ಲಿ ಒಮ್ಮೆ ರಿದಮ್ ಕಂಡುಕೊಂಡಿದ್ದೇ ಆದಲ್ಲಿ ಟೆಸ್ಟ್‌ ಫಾರ್ಮೆಟ್‌ನಂತೆಯೇ ಟಿ20 ಕ್ರಿಕೆಟ್‌ನಲ್ಲಿ ಮ್ಯಾಚ್ ವಿನ್ನರ್ ಆಗಿ ಆಡಬಲ್ಲರು.

ಲೆಜೆಂಡ್ಸ್ ಲೀಗ್ ಕ್ರಿಕೆಟ್: ಗುಜರಾತ್ ಜೈಂಟ್ಸ್‌ಗೆ ಸೆಹ್ವಾಗ್, ಇಂಡಿಯಾ ಕ್ಯಾಪಿಟಲ್ಸ್‌ಗೆ ಗಂಭೀರ್ ನಾಯಕ

Asiacup 2022: ಟೀಮ್ ಇಂಡಿಯಾದ ನಾಲ್ಕು ದೊಡ್ಡ ನ್ಯೂನತೆಗಳು || Big Flaws of Team India | *Cricket | OneIndia
ದೀಪಕ್ ಹೂಡಾ

ದೀಪಕ್ ಹೂಡಾ

ಟೀಂ ಇಂಡಿಯಾ ಯುವ ಸ್ಫೋಟಕ ಬ್ಯಾಟರ್ ಆಗಿರುವ ದೀಪಕ್ ಹೂಡಾ ಮ್ಯಾಚ್‌ ವಿನ್ನಿಂಗ್ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಸ್ಥಿರ ಪ್ರದರ್ಶನದ ಮೂಲದ ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ದೀಪಕ್ ಹೂಡಾ ಐರ್ಲೆಂಡ್ ಟಿ20 ಸರಣಿಯಲ್ಲಿ ಶತಕ ಸಿಡಿಸಿ ತನ್ನ ತಾಕತ್ತು ಪ್ರದರ್ಶಿಸಿದ್ದರು.

ಟಾಪ್ ಆರ್ಡರ್ ಬ್ಯಾಟಿಂಗ್‌ ಆಡುವುದಷ್ಟೇ ಅಲ್ಲದೆ, ಕೆಳಕ್ರಮಾಂಕದಲ್ಲೂ ತಂಡಕ್ಕೆ ನೆರವಾಗಬಲ್ಲರು. ಜೊತೆಗೆ ಪಾರ್ಟ್ ಟೈಂ ಆಫ್‌ ಸ್ಪಿನ್ನರ್ ಆಗಿಯು ಕೊಡುಗೆ ನೀಡುತ್ತಾರೆ. ಈತನ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ, ಕೆ.ಎಲ್ ರಾಹುಲ್ ಬದಲಿ ಸ್ಥಾನವನ್ನ ತುಂಬಬಲ್ಲವರಾಗಿದ್ದಾರೆ.

ಫೆಬ್ರವರಿ 24, 2022ರಂದು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದೀಪಕ್ ಹೂಡಾ 54.80ರ ಸರಾಸರಿ ಹಾಗೂ 161.17ರ ಸ್ಟ್ರೈಕ್‌ರೇಟ್‌ನಲ್ಲಿ 274 ರನ್ ಸಿಡಿಸಿದ್ದಾರೆ. ಇದರಲ್ಲಿ ಗರಿಷ್ಠ 104ರನ್ ಸಹ ಒಳಗೊಂಡಿದೆ.

ಐಪಿಎಲ್ 2022ರ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 15 ಪಂದ್ಯಗಳಲ್ಲಿ 136.67ರ ಸ್ಟ್ರೈಕ್‌ರೇಟ್‌ನಲ್ಲಿ ದೀಪಕ್ ಹೂಡಾ 451ರನ್ ಕಲೆಹಾಕಿದರು. ಜೊತೆಗೆ ಈತ ಆರನೇ ಬೌಲರ್‌ ಆಗಿ ತಂಡಕ್ಕೆ ನೆರವಾಗುವುದರ ಜೊತೆಗೆ ಉತ್ತಮ ಫೀಲ್ಡರ್ ಕೂಡ ಆಗಿದ್ದಾರೆ.

Story first published: Friday, September 2, 2022, 14:19 [IST]
Other articles published on Sep 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X