For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ: ವಿರಾಟ್ ಅಂಕಿ-ಅಂಶ ನೋಡಿ ಶಾಕ್ ಆದ ರವಿಶಾಸ್ತ್ರಿ

Virat kohli

ಆಧುನಿಕ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಿಗೆ 'ಫ್ಯಾಬುಲಸ್ ಫೋರ್' ಎಂಬ ಪದವನ್ನು ನೀಡಲಾಗುತ್ತದೆ. ಪ್ರಸ್ತುತ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಮತ್ತು ಜೋ ರೂಟ್ ಅವರನ್ನು ಫ್ಯಾಬುಲಸ್ ಫೋರ್ ಆಟಗಾರರು ಎಂದು ಪರಿಗಣಿಸಲಾಗಿದೆ. ಆದ್ರೆ ಪಾಕಿಸ್ತಾನದ ಬಾಬರ್ ಆಜಮ್ ಆಗಮನದೊಂದಿಗೆ, ಇದು ಫ್ಯಾಬುಲಸ್ ಫೋರ್ ಬದಲು ಫ್ಯಾಬುಲಸ್ ಫೈವ್ ಆಗಬೇಕು ಎಂದು ಅನೇಕ ಜನರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಯಾರು ಉತ್ತಮರು ಎಂದು ಹೇಳುವುದು ಕಷ್ಟ ಎಂದು ಹೇಳಬಹುದು. ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಗಳಲ್ಲಿ ವಿಭಿನ್ನರಾಗಿದ್ದಾರೆ. ಇದೀಗ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಫ್ಯಾಬುಲಸ್ ಫೋರ್‌ನಲ್ಲಿ ಕೊಹ್ಲಿಯ ಗುಣಲಕ್ಷಣಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅದ್ರಲ್ಲೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ನನಗೆ ನಿಜವಾಗಿಯೂ ಆಶ್ಚರ್ಯವಾಯಿತು ಎಂದಿದ್ದಾರೆ.

ಅತಿ ಹೆಚ್ಚು ಪಂದ್ಯಗಳನ್ನ ಆಡಿರುವ ವಿರಾಟ್!

ಅತಿ ಹೆಚ್ಚು ಪಂದ್ಯಗಳನ್ನ ಆಡಿರುವ ವಿರಾಟ್!

''ಕಳೆದ ಮೂರು ವರ್ಷಗಳ ಅಂಕಿಅಂಶಗಳನ್ನು ನೋಡಿ. ಫ್ಯಾಬುಲಸ್ ಫೋರ್‌ನಲ್ಲಿ ಯಾವುದೇ ಆಟಗಾರರಿಗಿಂತ ಕೊಹ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಇದು ನಿಜವಾಗಿಯೂ ನನಗೆ ಆಶ್ಚರ್ಯ ತಂದಿದೆ. ತಂಡದ ನಾಯಕನಾಗಿ ಎಲ್ಲಾ ಮೂರು ಮಾದರಿಗಳಲ್ಲಿ ಹಲವು ಪಂದ್ಯಗಳನ್ನು ಆಡುವುದು ಸುಲಭವಲ್ಲ. ಹೀಗಾಗಿ ಕೆಟ್ಟ ಫಾರ್ಮ್‌ನಿಂದ ಮರಳಲು ಅವರಿಗೆ ವಿಶ್ರಾಂತಿ ಬೇಕು ಎಂದು ಆತ ಕೇಳಿದ್ದಾನೆ'' ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಫ್ಯಾಬುಲಸ್ ಫೋರ್‌ನ ಇತರ ಆಟಗಾರರ ಜೊತೆಗೆ, ಬಾಬರ್ ಎಲ್ಲಾ ಮೂರು ಸ್ವರೂಪಗಳಲ್ಲಿ ಸಕ್ರಿಯವಾಗಿದ್ದಾರೆ ಎಂದು ಹೇಳಬಹುದು. ಕೇನ್ ವಿಲಿಯಮ್ಸನ್ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರು ದೊಡ್ಡ ವಿರಾಮವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ಸ್ಟೀವ್ ಸ್ಮಿತ್‌ಗೆ ಸೀಮಿತ ಓವರ್‌ಗಳಲ್ಲಿ ಸ್ಥಾನವಿದ್ದರೂ ಅತ್ಯಂತ ಪ್ರಭಾವಕಾರಿ ಪ್ರದರ್ಶನ ನೀಡಿಲ್ಲ. ಆದ್ರೆ ಬಾಬರ್ ಆಜಮ್ ಎಲ್ಲಾ ಮೂರು ಮಾದರಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

Asia cup 2022: ಪಾಕಿಸ್ತಾನ ವಿರುದ್ಧ ವಿಶೇಷ ಬ್ಯಾಟ್‌ನಿಂದ ಆಡಲಿದ್ದಾರೆ ವಿರಾಟ್ ಕೊಹ್ಲಿ!

ಕೊಹ್ಲಿ ಫಿಟ್ನೆಸ್ ವಿಚಾರದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ!

ಕೊಹ್ಲಿ ಫಿಟ್ನೆಸ್ ವಿಚಾರದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ!

ಕೊಹ್ಲಿ ಅವರ ಫಿಟ್ನೆಸ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದೆ. ಭಾರತ ತಂಡದಲ್ಲಿ ಕೊಹ್ಲಿ ಫಿಟ್ಟೆಸ್ಟ್ ಆಟಗಾರ ಎಂದು ಹೇಳಬಹುದು. ಕೊಹ್ಲಿ ಬಿಡುವು ಮಾಡಿಕೊಂಡಾಗಲೂ ತಮ್ಮ ಫಿಟ್ನೆಸ್ ದಿನಚರಿಗಳನ್ನು ನಿಲ್ಲಿಸಲಿಲ್ಲ. ಕಳಪೆ ಫಾರ್ಮ್‌ನಿಂದ ಪುಟಿದೇಳುವ ಅಗತ್ಯವಿರುವುದರಿಂದ ಕೊಹ್ಲಿ ಭಾರವಾದ ಬ್ಯಾಟ್ ಹೊತ್ತು ಏಷ್ಯಾಕಪ್‌ಗೆ ಪ್ರವೇಶಿಸಿದ್ದಾರೆ. ಹಾಗಾಗಿ ಅವರಿಗೆ ಹೆಚ್ಚಿನ ಫಿಟ್ನೆಸ್ ಅಗತ್ಯವಿದೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು, ಅವರು ತಮ್ಮ ವಿರಾಮದ ಸಮಯದಲ್ಲಿ ಹೆಚ್ಚು ತೋಳಿನ ಶಕ್ತಿ ತರಬೇತಿಯನ್ನು ಪಡೆದಿದ್ದಾರೆ.

ವಿರಾಟ್ ಕೊಹ್ಲಿಯ ಬದ್ಧತೆ ಕಂಡು ನಾನು ದಿಗ್ಭ್ರಮೆಗೊಂಡಿದ್ದೇನೆ ಎಂದ ರಶೀದ್ ಖಾನ್

ಕೊಹ್ಲಿಗಿಂತ ಫಿಟ್‌ ಆಗಿರುವ ಮತ್ತೊಬ್ಬ ಆಟಗಾರನಿಲ್ಲ: ರವಿಶಾಸ್ತ್ರಿ

ಕೊಹ್ಲಿಗಿಂತ ಫಿಟ್‌ ಆಗಿರುವ ಮತ್ತೊಬ್ಬ ಆಟಗಾರನಿಲ್ಲ: ರವಿಶಾಸ್ತ್ರಿ

ಶಾಸ್ತ್ರಿ ಕೂಡ ಕೊಹ್ಲಿ ಕಂಬ್ಯಾಕ್‌ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ''ಭಾರತ ತಂಡದಲ್ಲಿ ಕೊಹ್ಲಿಯಷ್ಟು ಫಿಟ್‌ ಇರುವ ಆಟಗಾರ ಮತ್ತೊಬ್ಬರಿಲ್ಲ. ಆದ್ದರಿಂದ ಒಂದು ಇನ್ನಿಂಗ್ಸ್ ಅಥವಾ ಎರಡು ದೊಡ್ಡ ವ್ಯತ್ಯಾಸವನ್ನು ಮಾಡಬಹುದು. ಉತ್ತಮ ಕಾರ್ಯಕ್ಷಮತೆಗಾಗಿ ಮಾನಸಿಕ ಶಕ್ತಿ ಹೆಚ್ಚು ಮುಖ್ಯವಾಗಿದೆ. ರನ್‌ಗಳತ್ತ ಒಲವು ಮತ್ತು ಕ್ರಿಕೆಟ್ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ'' ಎಂದು ರವಿಶಾಸ್ತ್ರಿ ಸೇರಿಸಿದರು.

ಎರಡು ಪ್ರಶಸ್ತಿ ಗೆಲ್ಲುವುದು ನನ್ನ ಕನಸಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ. ಒಂದು ಏಷ್ಯಾಕಪ್ ಮತ್ತು ಎರಡನೆಯದು ಟಿ20 ವಿಶ್ವಕಪ್. ಏಷ್ಯಾಕಪ್‌ನಲ್ಲಿ ಕೊಹ್ಲಿ ಮಿಂಚುವುದು ಬಹಳ ಮುಖ್ಯ. ಮಿಂಚಿದರೆ ಮಾತ್ರ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಪಡೆಯುತ್ತಾರೆ. ಅನೇಕ ಯುವ ಆಟಗಾರರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಉತ್ತಮ ಪ್ರದರ್ಶನ ನೀಡುವಂತೆ ಕೊಹ್ಲಿ ಮೇಲೆ ಒತ್ತಡ ಹೆಚ್ಚಿದೆ.

ಕೊಹ್ಲಿ ಕಂಬ್ಯಾಕ್‌ಗಾಗಿ ಕಾದಿದ್ದಾರೆ ಅಭಿಮಾನಿಗಳು

ಕೊಹ್ಲಿ ಕಂಬ್ಯಾಕ್‌ಗಾಗಿ ಕಾದಿದ್ದಾರೆ ಅಭಿಮಾನಿಗಳು

ಕಳೆದ ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ಅಭಿಮಾನಿಗಳು ಶತಕಕ್ಕಾಗಿ ಕಾಯುತ್ತಿದ್ದಾರೆ. ವಿರಾಟ್‌ನ ವೇಗದ ಬ್ಯಾಟಿಂಗ್ ನೋಡಲು ಕಾತರರಾಗಿದ್ದಾರೆ. ಆದ್ರೆ ವಿರಾಟ್ ಮೊದಲಿನಂತೆ ಬ್ಯಾಟ್‌ ಬೀಸುತ್ತಿಲ್ಲ. ಮೊದಲಿನಂತೆ ವೇಗವಾಗಿ ಆಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಟಿ20 ವಿಶ್ವಕಪ್ ನಲ್ಲಿ ಕೊಹ್ಲಿ ಸ್ಥಾನಕ್ಕೆ ಕಂಟಕ ಎದುರಾಗಿದೆ.

ಹೀಗಾಗಿ ಕೊಹ್ಲಿಯಿಂದ ಬಲಿಷ್ಠ ಕಂಬ್ಯಾಕ್ ಅನ್ನು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಇದು ಏಷ್ಯಾಕಪ್ ಮೂಲಕವೇ ಆಗುವ ನಿರೀಕ್ಷೆಯಿದೆ. ಏಷ್ಯಾಕಪ್ ನಲ್ಲಿ ಕೊಹ್ಲಿ ಮಿಂಚಲು ವಿಫಲರಾದರೆ ಅವರ ಮುಂದಿನ ಪಯಣ ಕಷ್ಟಸಾಧ್ಯ ಎಂದೇ ಹೇಳಬಹುದು.

Story first published: Thursday, August 25, 2022, 18:45 [IST]
Other articles published on Aug 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+