ಕೊಹ್ಲಿ ಫಾರ್ಮ್‌ಗೆ ಮರಳಬೇಕಂದ್ರೆ, ಸಚಿನ್ ತೆಂಡೂಲ್ಕರ್‌ಗೆ ಕರೆ ಮಾಡಬೇಕು: ಸುನಿಲ್ ಗವಾಸ್ಕರ್

ಟೀಂ ಇಂಡಿಯಾ 2021ರ ಇಸವಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದಷ್ಟು , ಮತ್ಯಾವ ವರ್ಷದಲ್ಲೂ ಕಾಣಲು ಸಾಧ್ಯವಿಲ್ಲ. ಏಕೆಂದರೆ ಭಾರತವು ವಿದೇಶದಲ್ಲಿ ಆತಿಥೇಯ ತಂಡಗಳನ್ನೇ ಸೋಲಿಸಿ ಟೂರ್ನಿ ಗೆದ್ದುಕೊಂಡು ಬಂದಿದೆ. ಅದು ಆಸ್ಟ್ರೇಲಿಯಾ ಆಗಲಿ, ಇಂಗ್ಲೆಂಡ್ ಇರಲಿ ವಿರಾಟ್ ಪಡೆ ಟೆಸ್ಟ್ ಸರಣಿಯನ್ನ ಗೆದ್ದು ತಮ್ಮದಾಗಿಸಿಕೊಂಡಿವೆ.
ಕಳೆದ ನಾಲ್ಕೈದು ವರ್ಷಗಳಿಂದ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂಬರ್ 1 ತಂಡವಾಗಿ ವರ್ಷವನ್ನು ಕೊನೆಗೊಳಿಸಿರುವ ಭಾರತ ಈ ಬಾರಿಯು 124 ಪಾಯಿಂಟ್ಸ್‌ಗಳೊಂದಿಗೆ ನಂಬರ್ ಟೀಮ್ ಆಗಿಯೇ ವರ್ಷ ಮುಗಿಸಿದೆ.
ಇದರ ನಡುವೆ ವಿರಾಟ್ ಕೊಹ್ಲಿ 71ನೇ ಅಂತರಾಷ್ಟ್ರೀಯ ಶತಕ ಸಿಡಿಸಲು ಪರದಾಡುತ್ತಿದ್ದಾರೆ. ಕಳೆದೆರಡು ವರ್ಷದಿಂದ ಕೊಹ್ಲಿಯ ಶತಕ ನೋಡಲು ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಮೂರಂಕಿ ಗಡಿ ದಾಟಲು ವಿರಾಟ್ ಕೊಹ್ಲಿಗೆ ಕಳೆದೆರಡು ವರ್ಷಗಳಿಂದ ಸಾಧ್ಯವಾಗಿಲ್ಲ ಅಂದ್ರೆ ನಿಜಕ್ಕೂ ಆಶ್ಚರ್ಯವಾಗುತ್ತೆ.

2019ರಿಂದ ಒಂದು ಶತಕವನ್ನೂ ಸಿಡಿಸದ ವಿರಾಟ್!
ವಿರಾಟ್ ಕೊಹ್ಲಿ 2019 ರಿಂದ ಯಾವುದೇ ಫಾರ್ಮೆಟ್‌ನಲ್ಲೂ ಶತಕ ಗಳಿಸಿಲ್ಲ. ಸೆಂಚುರಿಯನ್ ಟೆಸ್ಟ್‌ನಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ 35 ಮತ್ತು 18 ರನ್ ಗಳಿಸಿದರು ಮತ್ತು ಎರಡೂ ಸಂದರ್ಭಗಳಲ್ಲಿ ಆಫ್ ಸ್ಟಂಪ್‌ನ ಹೊರಗಿನ ಎಸೆತಗಳಲ್ಲಿ ವಿಕೆಟ್ ಕೀಪರ್ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.
ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ಪರ ಹೆಚ್ಚು ಕಾಲ ಆಡ್ಬೇಕಂದ್ರೆ, IPLನಲ್ಲಿ ಆಡೋದನ್ನ ಬಿಡ್ಬೇಕು!

ಸಚಿನ್ ತೆಂಡೂಲ್ಕರ್ ಘಟನೆ ನೆನಪಿಸಿಕೊಂಡ ಸುನಿಲ್ ಗವಾಸ್ಕರ್
ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಪೋಸ್ಟ್ ಮ್ಯಾಚ್ ಶೋನಲ್ಲಿ, ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರಿಗೆ ಕರೆ ಮಾಡಬೇಕು ಎಂದು ಹೇಳಿದರು. 2003-04ರಲ್ಲಿ ಭಾರತವು ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಾಗ ಸಚಿನ್ ಕುರಿತಾಗಿ ಘಟನೆಯನ್ನ ಗವಾಸ್ಕರ್ ನೆನಪಿಸಿಕೊಂಡರು. ಅಲ್ಲಿ ಮಾಸ್ಟರ್ ಬ್ಲಾಸ್ಟರ್ ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕವನ್ನು ಗಳಿಸಿದರು, ಈ ಮೂಲಕ ಭಾರತ ತಂಡದ ಗೆಲುವಿಗೆ ಸಹಾಯ ಮಾಡಿದ್ದಲ್ಲದೆ ಸರಣಿಯಲ್ಲಿ ಡ್ರಾ ಮಾಡಲು ಸಹಾಯ ಮಾಡಿತು ಮತ್ತು ಸರಣಿಯನ್ನು 1-1 ರಲ್ಲಿ ಸಮಗೊಳಿಸಿತು.

ಕೊಹ್ಲಿ ಮಾಸ್ಟರ್ ಬ್ಲಾಸ್ಟರ್‌ಗೆ ಕರೆ ಮಾಡಲಿ ಎಂದ ಗವಾಸ್ಕರ್!
ಕೊಹ್ಲಿಯಂತೆಯೇ, ಸಚಿನ್ ಅವರು ಆಫ್ ಸ್ಟಂಪ್‌ನ ಹೊರಗಿನ ಎಸೆತಗಳಲ್ಲಿ ಔಟಾಗುತ್ತಿದ್ದರು. ಆದ್ರೆ ಸಿಡ್ನಿಯಲ್ಲಿ ಆ ಕೊರತೆಯನ್ನ ನಿಯಂತ್ರಿಸುವಲ್ಲಿ ಯಶಸ್ವಿಯಾದ ನಂತರ, ಆಫ್ ಸ್ಟಂಪ್‌ನ ಹೊರಗಿನ ಎಸೆತಗಳನ್ನು ಬೆನ್ನಟ್ಟುವ ಪ್ರವೃತ್ತಿಯನ್ನು ಕಲಿತರು ಎಂದು ಗವಾಸ್ಕರ್ ಉಲ್ಲೇಖಿಸಿದ್ದಾರೆ.
ಹೀಗಾಗಿ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್‌ಗೆ ಕರೆ ಮಾಡಿ ಆ ಕುರಿತಾಗಿ ಚರ್ಚಿಸಬೇಕು ಮತ್ತು ಸಲಹೆ ಪಡೆಯಬೇಕು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಕೆಲವು ತಿಂಗಳಲ್ಲಿ ಒಂದೇ ರೀತಿಯಲ್ಲಿ ಔಟಾಗುತ್ತಿರುವ ಕೊಹ್ಲಿ
33 ವರ್ಷದ ವಿರಾಟ್ ಕೊಹ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಹೆಚ್ಚು ಔಟಾಗಿದ್ದನ್ನ ಕಾಣಬಹುದು. ಹೀಗಾಗಿ ಕೆಲವು ಕ್ರಿಕೆಟ್ ತಜ್ಞರು ಮತ್ತು ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ಕವರ್ ಡ್ರ್ರೈವ್ ಶಾಟ್ ಹೊಡೆಯುವುದನ್ನ ನಿಲ್ಲಿಸಬೇಕು. ಹಾಗಿದ್ರೆ ಮಾತ್ರ ಹೆಚ್ಚು ರನ್ ಕಲೆಹಾಕಲು ಸಾಧ್ಯ ಎನ್ನಲಾಗಿದೆ.
ಆದ್ರೆ ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಕೊಹ್ಲಿ ಕವರ್ ಡ್ರೈವ್ ಶಾಟ್ ಹೊಡೆಯುವುದನ್ನ ಮುಂದುವರಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ಒಮ್ಮೆ ಇದೇ ರೀತಿಯಲ್ಲಿ ಮಾಡಿದಾಗ ಸಿಡ್ನಿಯಲ್ಲಿ 241ರನ್‌ಗಳ ಅಮೋಘ ಆಟ ಪ್ರದರ್ಶಿಸಿದ್ರು ಎಂದು ರಾಥೋಡ್ ಕೂಡ ಉಲ್ಲೇಖಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications