ಟೈಮ್ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕೊಹ್ಲಿ, ಸಚಿನ್ ಗೆ ಥ್ಯಾಂಕ್ಸ್

ಬೆಂಗಳೂರು, ಏಪ್ರಿಲ್ 21: ಟೈಮ್ ಮ್ಯಾಗಜೀನ್ ಹೊರ ತರುವ '100 ಪ್ರಭಾವಿ ವ್ಯಕ್ತಿಗಳು' ಪಟ್ಟಿಯಲ್ಲಿ ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಹೆಸರು ಕಾಣಿಸಿಕೊಂಡಿದೆ.
2017ನೇ ಸಾಲಿನ ಐಸಿಸಿ ವರ್ಷದ ಕ್ರಿಕೆಟರ್ ಪ್ರಶಸ್ತಿ ಗಳಸಿದ್ದ ಕೊಹ್ಲಿ ಈ ಬಾರಿ ಟೈಮ್ ಮ್ಯಾಗಜೀನ್ ನಲ್ಲಿ ಕಾಣಿಸಿಕೊಂಡಿದ್ದಕ್ಕೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಐಪಿಎಲ್ ವಿಶೇಷ ಪುಟ| ಆರ್ ಸಿಬಿ ವೇಳಾಪಟ್ಟಿ | ಐಪಿಎಲ್ ಫ್ಯಾಂಟಸಿ ಲೀಗ್
ಟೈಮ್ ಮ್ಯಾಗಜೀನ್ ನ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕೊಹ್ಲಿ ಅವರ ಹೆಸರು ಸೇರಲು ಸಚಿನ್ ಅವರ ಕೊಡುಗೆಯೂ ಇದೆ. ಕೊಹ್ಲಿ ಅವರ ಪ್ರೊಫೈಲ್ ಸಿದ್ಧಪಡಿಸಿ, ಟೈಮ್ ಮ್ಯಾಗಜೀನ್ ಗೆ ಶಿಫಾರಸು ಮಾಡಿದ್ದು ಸಚಿನ್. ಹೀಗಾಗಿ, ಸಚಿನ್ ಗೆ ಕೊಹ್ಲಿ ಅವರು ಧನ್ಯವಾದ ಅರ್ಪಿಸಿದ್ದಾರೆ.
ಬಹುತೇಕ ಯುಎಸ್ ನ ಕ್ರೀಡಾ ಸಾಧಕರನ್ನು ಹೊಂದಿರುವ ಪಟ್ಟಿಯಲ್ಲಿ ಸಚಿನ್ ಅವರ ನೆಚ್ಚಿನ ಟೆನಿಸ್ ದಿಗ್ಗಜ ರೊಜರ್ ಫೆಡರರ್ (ಸ್ವಿಟ್ಜರ್ಲೆಂಡ್) ಹಾಗೂ 29 ವರ್ಷ ವಯಸ್ಸಿನ ಕೊಹ್ಲಿ ಅವರು ಮಾತ್ರ ಯುಎಸ್ ಹೊರಗಿನ ಕ್ರೀಡಾಪಟುಗಳೆನಿಸಿದ್ದಾರೆ.
ಟೈಮ್ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ತುಂಬಾ ಗೌರವಯುತವಾಗಿದೆ. ನನ್ನ ಬಗ್ಗೆ ಪ್ರೋತ್ಸಾಹದ ನುಡಿಗಳನ್ನು ಬರೆದ ಸಚಿನ್ ಅವರಿಗೆ ನನ್ನ ಧನ್ಯವಾದಗಳು ಎಂಬರ್ಥದಲ್ಲಿ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
'ಅಂಡರ್ 19 ವಿಶ್ವಕಪ್ 2008ರ ಸಂದರ್ಭದಲ್ಲಿ ನಾನು ಮೊದಲಿಗೆ ಕೊಹ್ಲಿ ಅವರನ್ನು ನೋಡಿದೆ. ಭಾರತ ತಂಡಕ್ಕೆ ಯುವ ಆಟಗಾರರನ್ನು ಸೇರಿಸಿಕೊಳ್ಳುವ ಸಂದರ್ಭವಾಗಿತ್ತು. ಕೊಹ್ಲಿ ಅವರು ಆಟದ ಬಗ್ಗೆ ಹೊಂದಿದ್ದ ಕಾಳಜಿ, ಉತ್ಸಾಹ ಅವರನ್ನು ಇಂದು ಈ ಮಟ್ಟಕ್ಕೆ ತಂದಿದೆ. ಇಂದು ಕೊಹ್ಲಿ ಹೆಸರು ಮನೆ ಮಾತಾಗಲು ಅವರ ಕಠಿಣ ಪರಿಶ್ರಮ, ಪ್ರತಿಭೆಯೇ ಕಾರಣ. ರನ್ ಗಳಿಸುವ ದಾಹ, ಉತ್ತಮ ಕಾರ್ಯಕ್ಷಮತೆ ಹೊಂದಿರುವುದು ಕೊಹ್ಲಿ ಆಟದ ಹೆಗ್ಗುರುತು' ಎಂದು ಕೊಹ್ಲಿ ಬಗ್ಗೆ ಸಚಿನ್ ಬರೆದಿದ್ದಾರೆ.
2017ರಲ್ಲಿ ಕೊಹ್ಲಿ ಅವರು 11 ಶತಕ ಸಹಿತ 2,81 ಅಂತಾರಾಷ್ಟ್ರೀಯ ರನ್ ಗಳನ್ನು ಗಳಿಸಿ, ಎಲ್ಲಾ ಮೂರು ಮಾದರಿಯಲ್ಲೂ ಯಶಸ್ಸು ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications