ಆತನಿಲ್ಲದೆ ಟೀಂ ಇಂಡಿಯಾವನ್ನ ಊಹಿಸಲು ಸಾಧ್ಯವಿಲ್ಲ: ಕಪಿಲ್ ದೇವ್ ಹೀಗೆ ಹೇಳಿದ್ದು ಯಾರ ಬಗ್ಗೆ?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವಿಶ್ವಕಪ್ ವಿಜೇತ ಕಪಿಲ್ ದೇವ್, ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ.
ಸೂರ್ಯಕುಮಾರ್ ತನ್ನ ವಿಶಿಷ್ಟ ರೀತಿಯ ಬ್ಯಾಟಿಂಗ್ ಮೂಲಕವೇ ಜನರು ಆತನ ಕುರಿತು ಹಾಗೂ ಆತನ ಗೇಮ್ ಕುರಿತು ಮಾತನಾಡುವಂತೆ ಮಾಡಿದ್ದಾರೆ. ಕಳೆದೊಂದು ವರ್ಷದಲ್ಲಿ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ಖಾಯಂ ಸದಸ್ಯನಾಗಿದ್ದು, ಬೊಂಬಾಟ್ ಪ್ರದರ್ಶನ ನೀಡುತ್ತಿದ್ದಾರೆ.

ಆತನ ಸೇರ್ಪಡೆಯಿಂದಾಗಿ ಟೀಂ ಇಂಡಿಯಾ 4ನೇ ಕ್ರಮಾಂಕದ ಬ್ಯಾಟಿಂಗ್ ಕೊರತೆ ನೀಗಿದೆ
ಟೀಂ ಇಂಡಿಯಾ ಹಲವು ವರ್ಷಗಳ ಕಾಲ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಯಾರು ಎಂಬ ಹುಡುಕಾಟದಲ್ಲಿತ್ತು. ಹಲವು ಆಟಗಾರರು ತಂಡಕ್ಕೆ ಬಂದು ಹೋಗಿದ್ದರೇ ಹೊರತು ಸೂಕ್ತ ಆಟಗಾರ ದಕ್ಕಿರಲಿಲ್ಲ. ಆದ್ರೆ ಸೂರ್ಯಕುಮಾರ್ ಆಗಮನದಿಂದಾಗಿ ಆ ಕೊರತೆ ನೀಗಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
2021ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಕೂಡ ತಲುಪಲಾಗದೆ ಹಿಂದಿರುಗಿತು. ಅದ್ರಲ್ಲೂ ಟಾಪ್ ಆರ್ಡರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಆದ್ರೆ ಸೂರ್ಯಕುಮಾರ್ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ ಎಂದು ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.
ಇಂಗ್ಲೆಂಡ್ vs ಐರ್ಲೆಂಡ್: ನೆರೆಹೊರೆಯವರ ಕಾದಾಟದಲ್ಲಿ ಗೆಲ್ಲೋರು ಯಾರು? ಸಂಭಾವ್ಯ ಆಡುವ ಬಳಗ

ಟಾಪ್ ಆರ್ಡರ್ ಮೇಲೆ ಹೆಚ್ಚು ಅವಲಂಬಿತ, 2 ವಿಶ್ವಕಪ್‌ನಲ್ಲಿ ಭಾರತಕ್ಕೆ ಸೋಲು
ಈ ಮೇಲೆ ಹೇಳಿದ ರೀತಿಯಲ್ಲಿ ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್‌ಗಳ ಮೇಲೆ ಹೆಚ್ಚು ಅವಲಂಬಿತಗೊಂಡ ಪರಿಣಾಮ 2017ರ ಚಾಂಪಿಯನ್ ಟ್ರೋಫಿ ಮತ್ತು 2019ರ ಐಸಿಸಿ ಏಕದಿನ ವಿಶ್ವಕಪ್ ಅನ್ನು ಕಳೆದುಕೊಂಡಿತು. ಮೂವರು ಬ್ಯಾಟರ್‌ಗಳ ಮೇಲೆ ಭಾರತದ ಗೆಲುವು ನಿರ್ಧಾರವಾಗುತ್ತಿತ್ತು. ಆದ್ರೆ ಟಿ20 ಫಾರ್ಮೆಟ್‌ನಲ್ಲಿ ಸೂರ್ಯಕುಮಾರ್ ಬಂದ ಮೇಲೆ ಭಾರತದ ಟಾಪ್ ಆರ್ಡರ್ ಮೇಲೆ ಹೆಚ್ಚಿನ ಅವಲಂಬನೆ ತಪ್ಪಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್ ಇಷ್ಟರ ಮಟ್ಟಿಗೆ ತಂಡದ ಮೇಲೆ ಪರಿಣಾಮ ಬೀರುತ್ತಾರೆ ಎಂದು ಯಾರೂ ಊಹಿಸಿರ್ಲಿಲ್ಲ. ಆತ ತನ್ನ ಟ್ಯಾಲೆಂಟ್ ಮುಖಾಂತರ ಪ್ರದರ್ಶನ ನೀಡುತ್ತಿದ್ದು, ಎಲ್ಲರೂ ಈಗ ಆತನ ಕುರಿತು ಮಾತನಾಡುವಂತೆ ಮಾಡಿದ್ದಾರೆ ಎಂದಿದ್ದಾರೆ.
SA Vs Zim: ವಿಚಿತ್ರ ಕಾರಣಕ್ಕೆ 5 ರನ್ ದಂಡ ತೆತ್ತ ದಕ್ಷಿಣ ಆಫ್ರಿಕಾ, ಮಾಡಿದ ತಪ್ಪಾದರೂ ಏನು?

ಸೂರ್ಯಕುಮಾರ್‌ಗೆ ನಂಬರ್ 1 ಟಿ20 ಬ್ಯಾಟರ್ ಆಗುವ ಅವಕಾಶ
ಕಳೆದ ವಾರ ಬಿಡುಗಡೆಯಾದ ಐಸಿಸಿ ರ್ಯಾಂಕಿಂಗ್ ಪ್ರಕಾರ ಸೂರ್ಯಕುಮಾರ್ ಯಾದವ್ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟಾಪ್ 10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಹಿಂದಿದ್ದಾರೆ.
ಟಾಪ್ 20ಯಲ್ಲಿರುವ ಇತರೆ ಭಾರತದ ಆಟಗಾರರೆಂದರೆ ರೋಹಿತ್ ಶರ್ಮಾ (16), ಕೆ.ಎಲ್ ರಾಹುಲ್ (13) ವಿರಾಟ್ ಕೊಹ್ಲಿ(15) ರ್ಯಾಂಕಿಂಗ್ ಪಟ್ಟಿಯಲ್ಲಿದ್ದು, ಎಲ್ಲಾ ಭಾರತೀಯರಿಗೆ ಹೋಲಿಸಿದ್ರೆ, ಸೂರ್ಯಕುಮಾರ್ ಯಾದವ್ ಅತಿ ಹೆಚ್ಚಿನ ಮಟ್ಟದಲ್ಲಿದ್ದಾರೆ.
32 ವರ್ಷದ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಉತ್ತಮ ರನ್‌ಗಳಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ವಿರುದ್ಧ ಕೆಟ್ಟದಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಹಾರ್ದಿಕ್ ಪಾಂಡ್ಯ ಜೊತೆಗೆ ವಿರಾಟ್ ಕೊಹ್ಲಿ ಏಕಾಂಗಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು.
ಭಾರತದ ಮುಂದಿನ ಪಂದ್ಯವು ಅಕ್ಟೋಬರ್ 27ರಂದು ನೆದರ್ಲೆಂಡ್ಸ್ ವಿರುದ್ಧ ನಡೆಯಲಿದ್ದು, ಪಂದ್ಯವು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications