
ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ವೆಸ್ಟ್ ಇಂಡೀಸ್ ಗಳಿಸಿದ್ದು 146 ರನ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ವೆಸ್ಟ್ ಇಂಡೀಸ್ ಯಾರೂ ಊಹಿಸದ ರೀತಿಯಲ್ಲಿ ಆಮೆಗತಿಯ ಬ್ಯಾಟಿಂಗ್ ಪ್ರದರ್ಶಿಸಿತು. ತನ್ನ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿಗೆ ಹೆಸರುವಾಸಿಯಾಗಿರುವ ವಿಂಡೀಸ್ ತಂಡದ ಆಟಗಾರರು ಐರ್ಲೆಂಡ್ ಬೌಲರ್‌ಗಳೆದುರು ಠುಸ್ ಪಟಾಕಿಯಂತಾಗಿದ್ದು ನಿಜಕ್ಕೂ ಆಶ್ಚರ್ಯಕ್ಕೆ ಎಡೆಮಾಡಿತು.
ತಂಡದ ಪರ ಏಕಾಂಗಿ ಹೋರಾಟ ಪ್ರದರ್ಶಿಸಿದ ಬ್ರಾಂಡನ್ ಕಿಂಗ್ 48 ಎಸೆತಗಳಲ್ಲಿ 62ರನ್ ಕಲೆಹಾಕಿದ್ದು ಬಿಟ್ರೆ, ಬೇರೆ ಯಾವೊಬ್ಬ ಬ್ಯಾಟರ್ ಕೂಡ ತಂಡಕ್ಕೆ ನೆರವಾಗಲಿಲ್ಲ. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 146ರನ್‌ಗಳ ಸಾಧಾರಣ ಮೊತ್ತ ಪೇರಿಸಿತು.

ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿದ ಐರ್ಲೆಂಡ್
ಇನ್ನು ವೆಸ್ಟ್ ಇಂಡೀಸ್ ನೀಡಿದ 146ರನ್ ಗುರಿಯನ್ನ ಸುಲಭವಾಗಿ ತಲುಪಿದ ಐರ್ಲೆಂಡ್ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪುವ ಮೂಲಕ ಮಿಂಚಿನ ಆಟವಾಡಿತು. ಟಿ20 ಕ್ರಿಕೆಟ್ ಚಾಂಪಿಯನ್ನರಿಗೆ ಹೇಗೆ ಬ್ಯಾಟಿಂಗ್ ಮಾಡಬೇಕು ಎಂಬ ಪಾಠವನ್ನ ಮಾಡಿದ ಐರ್ಲೆಂಡ್ ಟಾಪ್ ಆರ್ಡರ್ ಬ್ಯಾಟರ್ಸ್ ವಿಂಡೀಸ್ ಮೊನಚುರಹಿತ ಬೌಲಿಂಗ್ ಅನ್ನು ದಂಡಿಸಿದ್ರು.
ತಂಡದ ನಾಯಕ ಆಂಡ್ರ್ಯೂ ಬಾಲ್ಬಿರ್ನಿ 23 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 3 ಭರ್ಜರಿ ಬೌಂಡರಿ ಸಿಡಿಸುವ ಮೂಲಕ 37ರನ್ ಸಿಡಿಸಿದ್ರು. ಲೋರ್ಕನ್ ಟಕರ್ 35 ಎಸೆತಗಳಲ್ಲಿ ಅಜೇಯ 45 ರನ್ ಕಲೆಹಾಕುವ ಮೂಲಕ ಮಿಂಚಿದರು. ತಂಡದ ಪರ ಹೀರೋ ಆಗಿ ಮಿಂಚಿದ ಓಪನರ್ ಪಾಲ್ ಸ್ಟಿರ್ಲಿಂಗ್ ಪಂದ್ಯದ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ತಂಡವನ್ನ ಗೆಲುವಿನ ದಡ ತಲುಪಿಸಿದ್ರು. 48 ಎಸೆತಗಳಲ್ಲಿ ಅಜೇಯ 66ರನ್ ಕಲೆಹಾಕಿದ ಪಾಲ್ 6 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸುವ ಮೂಲಕ ಅಬ್ಬರಿಸಿದ್ರು. ಐರ್ಲೆಂಡ್ 17.3 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 150ರನ್ ಕಲೆಹಾಕಿ ಪಂದ್ಯವನ್ನ ಜಯಿಸಿತು.
ಪಾಕಿಸ್ತಾನ ಹೇಗೆ ಕ್ರಿಕೆಟ್ ಆಡ್ಬೇಕು ಎಂಬುದನ್ನ ಬಿಸಿಸಿಐ ನಿರ್ಧರಿಸಬಾರದು: ವಾಸಿಂ ಅಕ್ರಂ ಕಿಡಿ

ನಾವು ಸರಿಯಾದ ಬ್ಯಾಟಿಂಗ್ ಮಾಡಲಿಲ್ಲ ಎಂದು ಒಪ್ಪಿಕೊಂಡ ನಿಕೋಲಸ್ ಪೂರನ್
ವೆಸ್ಟ್ ಇಂಡೀಸ್ ಸೋಲಿನ ಬಳಿಕ ಪ್ರತಿಕ್ರಿಯಿಸಿರುವ ನಿಕೋಲಸ್ ಪೂರನ್ ''ಇದಕ್ಕೂ ನಿಜಕ್ಕೂ ಕಠಿಣವಾದ ಸಂದರ್ಭವಾಗಿದೆ. ಇಡೀ ಟೂರ್ನಮೆಂಟ್‌ನಲ್ಲಿ ನಾವು ಸರಿಯಾಗಿ ಬ್ಯಾಟಿಂಗ್ ಮಾಡಲಿಲ್ಲ. ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ 145ರನ್ ಕಲೆಹಾಕಿದ್ರೆ, ಬೌಲರ್‌ಗಳಿಗೆ ನಿಜಕ್ಕೂ ಕಠಿಣ ಸವಾಲಾಗಿ ಪರಿಣಮಿಸಿತು. ಇದು ಬೌಲರ್‌ಗಳಿಗೆ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ'' ಎಂದು ಪೂರನ್ ಹೇಳಿದ್ದಾರೆ.
ತನ್ನ ಮಾತನ್ನು ಮುಂದುವರಿಸಿದ ಪೂರನ್ '' ನಮ್ಮ ಅಭಿಮಾನಿಗಳಿಗೆ ಮತ್ತು ವೈಯಕ್ತಿಕವಾಗಿ ಬೇಸರದ ಪ್ರದರ್ಶನ ನೀಡಿದ್ದೇವೆ. ಇದು ನಿಜಕ್ಕೂ ನೋವುಂಟು ಮಾಡಲಿದೆ. ನನ್ನ ವೈಯಕ್ತಿಕ ಪ್ರದರ್ಶನದಿಂದ ತಂಡಕ್ಕೆ ಬೇಸರವಾಗಿದೆ'' ಎಂದು ಪೂರನ್ ಪಂದ್ಯದ ಬಳಿಕ ಮಾತನಾಡಿದ್ದಾರೆ.
ಇದೇ ವೇಳೆಯಲ್ಲಿ ಸೂಪರ್ 12ಗೆ ಅರ್ಹತೆ ಪಡೆದ ಐರ್ಲೆಂಡ್ ತಂಡಕ್ಕೆ ಶುಭಾಶಯ ತಿಳಿಸಿದ ಪೂರನ್, ಅವರು ಬ್ಯಾಟಿಂಗ್ ಅದ್ಭುತವಾಗಿ ಆಡಿದ್ದು, ಬೌಲಿಂಗ್ ಕೂಡ ಉತ್ತಮವಾಗಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.


Click it and Unblock the Notifications












