ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಹೇಗೆ ಕ್ರಿಕೆಟ್ ಆಡ್ಬೇಕು ಎಂಬುದನ್ನ ಬಿಸಿಸಿಐ ನಿರ್ಧರಿಸಬಾರದು: ವಾಸಿಂ ಅಕ್ರಂ ಕಿಡಿ

Wasim akram

ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾ ಭಾಗವಹಿಸಲಿರುವ ದೊಡ್ಡ ಮಟ್ಟದ ಟೂರ್ನಿ ಅಂದ್ರೆ ಏಷ್ಯಾಕಪ್ 2023 ಆಗಿದೆ. ಈ ಬಾರಿ ಏಷ್ಯಾಕಪ್ 2023ರ ಆತಿಥ್ಯ ಪಡೆಯುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ. ಆದ್ರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ಬಳಿಕ ಈ ಬಾರಿ ಪಾಕ್‌ ಆತಿಥ್ಯವೇ ಅನುಮಾನಗೊಂಡಿದೆ.

ಏಷ್ಯಾಕಪ್ ವೇಳಾಪಟ್ಟಿಯ ಪ್ರಕಾರ ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನವು ಆತಿಥ್ಯ ವಹಿಸಿದೆ. ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಷಾ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ, ತಟಸ್ಥ ಸ್ಥಳದಲ್ಲಿ ಟೂರ್ನಮೆಂಟ್ ನಡೆಯಲಿದೆ ಎಂದು ಹೇಳಿದ್ದರು.

ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿಕೆ ಹೊರಬೀಳುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌(ಪಿಸಿಬಿ) ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ ತುರ್ತು ಸಭೆಗೆ ಮನವಿ ಮಾಡಿದೆ. ಜೊತೆಗೆ ಟೀಂ ಇಂಡಿಯಾ ನಮ್ಮ ದೇಶಕ್ಕೆ ಬರದಿದ್ರೆ, ನಾವು ಭಾರತದಲ್ಲಿ ನಡೆಯಲಿರುವ 2023ರ ಏಕದಿನ ಏಷ್ಯಾಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಬೆದರಿಕೆ ಹಾಕಿದೆ.

ಬಿಸಿಸಿಐ ಏಕಸ್ವಾಮ್ಯ ನಿರ್ಧಾರ ತೆಗೆದುಕೊಳ್ಳಬಾರದಿತ್ತು: ವಾಸಿಂ ಅಕ್ರಂ

ಬಿಸಿಸಿಐ ಏಕಸ್ವಾಮ್ಯ ನಿರ್ಧಾರ ತೆಗೆದುಕೊಳ್ಳಬಾರದಿತ್ತು: ವಾಸಿಂ ಅಕ್ರಂ

ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಅಕ್ರಂ ಬಿಸಿಸಿಐ ಕಾರ್ಯದರ್ಶಿ ಜಯ್‌ ಷಾ ಹೇಳಿಕೆ ಕುರಿತಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಯ್‌ ಷಾ ಈ ರೀತಿಯಲ್ಲಿ ಹೇಳಿಕೆ ನೀಡುವ ಮೊದಲ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಅಧ್ಯಕ್ಷ ರಮೀಜ್ ರಾಜಾ ಅವರನ್ನ ಸಂಪರ್ಕಿಸಿ ಚರ್ಚೆ ಮಾಡಬೇಕಾಗಿತ್ತು. ಆದ್ರೆ ಅದನ್ನು ಹೊರತುಪಡಿಸಿ ಜಯ್ ಷಾ ಈ ರೀತಿಯಾಗಿ ನೇರವಾಗಿ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಹೇಳಿಕೆ ನೀಡಿರುವುದು ನ್ಯಾಯಯುತವಲ್ಲ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಗೆದ್ದು ಬಿದ್ದವರು!: ವಿಶ್ವಕಪ್‌ನಲ್ಲಿ ಹೀರೋ ಆಗಿ ಮಿಂಚಿ ಮರೆಯಾದ 5 ಆಟಗಾರರು

ಪಾಕಿಸ್ತಾನ ಕ್ರಿಕೆಟ್ ಹೇಗೆ ಆಡ್ಬೇಕು ಎಂಬುದನ್ನ ಬಿಸಿಸಿಐ ನಿರ್ಧರಿಸಬಾರದು!

ಪಾಕಿಸ್ತಾನ ಕ್ರಿಕೆಟ್ ಹೇಗೆ ಆಡ್ಬೇಕು ಎಂಬುದನ್ನ ಬಿಸಿಸಿಐ ನಿರ್ಧರಿಸಬಾರದು!

'' ಪಾಕಿಸ್ತಾನ ಹೇಗೆ ಕ್ರಿಕೆಟ್ ಆಡ್ಬೇಕು ಎಂಬುದನ್ನ ಭಾರತ ನಿರ್ಧರಿಸಬಾರದು. ಕಳೆದ 10-15 ವರ್ಷದಲ್ಲಿ ಪಾಕಿಸ್ತಾನದಲ್ಲಿ ಹೆಚ್ಚು ಕ್ರಿಕೆಟ್ ನಡೆದಿಲ್ಲ. ಇತ್ತೀಚೆಗೆ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿವೆ. ನಾನು ಮಾಜಿ ಕ್ರಿಕೆಟಿಗ ಮತ್ತು ವಕ್ತಾರನಾಗಿದ್ದು, ರಾಜಕೀಯ ಚಟುವಟಿಕೆಗಳು ಏನಾಗುತ್ತಿವೆ ಎಂಬುದು ತಿಳಿದಿಲ್ಲ. ಆದ್ರೆ ಜನತೆಯ ದೃಷ್ಟಿಯಿಂದ ಒಬ್ಬರ ನಡುವೆ ಮತ್ತೊಬ್ಬರ ಸಂಪರ್ಕ ಬಹಳ ಮುಖ್ಯವಾಗಿದೆ'' ಎಂದು ಅಕ್ರಂ ಎ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

'' ಮಿಸ್ಟರ್ ಜಯ್ ಷಾ ನಿಮಗೆ ಏನಾದರೂ ಹೇಳಬೇಕು ಎಂದೆನಿಸಿದ್ದಲ್ಲಿ, ನೀವು ಕನಿಷ್ಠ ನಮ್ಮ ಬೋರ್ಡ್ ಅಧ್ಯಕ್ಷರನ್ನು ಕರೆದು ಮಾತನಾಡಬೇಕಿತ್ತು. ಏಷ್ಯನ್ ಕೌನ್ಸಿಲ್ ಸಭೆಯನ್ನು ಕರೆದು ನಿಮ್ಮ ಗುರಿ ಅಥವಾ ಸಮಸ್ಯೆ ಏನೆಂಬುದನ್ನ ನೀವು ತಿಳಿಸಬಹುದಿತ್ತು. ಆದ್ರೆ ತಕ್ಷಣವೇ ನೀವು ನಿಂತು ನಾವು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದಿಲ್ಲ'' ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.

IND vs PAK: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕ್‌ಗೆ ಹಿನ್ನಡೆ; ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆ ಸೇರಿದ ಬ್ಯಾಟರ್

ಏಷ್ಯಾಕಪ್ ಆತಿಥ್ಯ ವಹಿಸುವ ಅವಕಾಶವು ಪಾಕಿಸ್ತಾನಕ್ಕೆ ಲಭಿಸಿದೆ

ಏಷ್ಯಾಕಪ್ ಆತಿಥ್ಯ ವಹಿಸುವ ಅವಕಾಶವು ಪಾಕಿಸ್ತಾನಕ್ಕೆ ಲಭಿಸಿದೆ

ತನ್ನ ಮಾತನ್ನು ಮುಂದುವರಿಸಿರುವ ಅಕ್ರಂ '' ಏಷ್ಯಾಕಪ್ ಆತಿಥ್ಯ ವಹಿಸುವ ಅವಕಾಶವನ್ನು ಪಾಕಿಸ್ತಾನ ಪಡೆದುಕೊಂಡಿದೆ. ಇಡೀ ಏಷ್ಯಾಕಪ್ ಕೌನ್ಸಿಲ್‌ ಪಾಕಿಸ್ತಾನಕ್ಕೆ ಟೂರ್ನಿ ಆತಿಥ್ಯ ವಹಿಸುವ ಅವಕಾಶ ನೀಡಿದೆ. ಆದ್ರೆ ಈ ರೀತಿಯಾಗಿ ಹೇಳಿಕೆ ನೀಡುವುದು ನ್ಯಾಯಯುತವಲ್ಲ'' ಎಂದು ವಾಸಿಂ ಅಕ್ರಂ ಹೇಳಿದ್ದಾರೆ.

ಮಂಗಳವಾರ ಬಿಸಿಸಿಐ ಕಾರ್ಯದರ್ಶಿ ಜಯ್‌ ಷಾ ಟೀಂ ಇಂಡಿಯಾ ಮುಂಬರುವ ಏಷ್ಯಾಕಪ್‌ನಲ್ಲಿ ಪಾಕ್ ಪ್ರವಾಸ ಕೈಗೊಳ್ಳುವುದಿಲ್ಲ. ಟೂರ್ನಿಯು ತಟಸ್ಥ ಸ್ಥಳದಲ್ಲಿ ನಡೆಯಲಿದೆ'' ಎಂದು ಹೇಳಿಕೆಯನ್ನ ನೀಡಿದ್ದರು.

ಇದಾದ ಬಳಿಕ ಗುರುವಾರ ಕೇಂದ್ರ ಯುವಜನ ಮತ್ತು ಕ್ರೀಡ ಸಚಿವ ಅನುರಾಗ್ ಠಾಕೂರ್ ಕೂಡ ಮಾತನಾಡಿ '' ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನ ಗೃಹ ಸಚಿವಾಲಯ ನಿರ್ಧರಿಸಲಿದೆ'' ಎಂದು ಹೇಳಿದ್ದರು.

ಭಾರತ-ಪಾಕಿಸ್ತಾನ ನಡುವಿನ ತೀವ್ರ ಗಡಿವಿವಾದ ಮತ್ತು ಭಯೋತ್ಪಾದಕ ಚಟುವಟಿಕೆಗಳ ಪ್ರಚೋದಿಸಿರುವ ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿಯನ್ನಾಡದ ಭಾರತ, ಪಾಕ್ ಪ್ರವಾಸ ಕೈಗೊಂಡು ದಶಕವೇ ಕಳೆದು ಹೋಗಿದೆ.

ಟೀಂ ಇಂಡಿಯಾ ಕೊನೆಯ ಬಾರಿಗೆ 2008ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, 2013ರಿಂದ ಉಭಯ ರಾಷ್ಟ್ರಗಳು ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಮೆಂಟ್‌ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

Story first published: Friday, October 21, 2022, 17:56 [IST]
Other articles published on Oct 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X