ಪಾಕ್ ಮತ್ತು ನೆದರ್ಲೆಂಡ್ಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಏಕದಿನ ತಂಡ ಪ್ರಕಟ; ಫಾರ್ಮ್‌ನಲ್ಲಿರುವ ಆಟಗಾರನಿಗಿಲ್ಲ ಸ್ಥಾನ!

ಮುಂಬರಲಿರುವ ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ 15 ಆಟಗಾರರ ಏಕದಿನ ತಂಡವನ್ನು ಪ್ರಕಟಿಸಿದೆ. ಎರಡೂ ದೇಶಗಳಲ್ಲಿಯೂ ವೆಸ್ಟ್ ಇಂಡೀಸ್ ತಲಾ 3 ಏಕದಿನ ಪಂದ್ಯಗಳನ್ನು ಆಡಲಿದ್ದು, ಈ ಸರಣಿಗಳು ಐಸಿಸಿ ಏಕದಿನ ಸೂಪರ್ ಲೀಗ್‌ನ ಭಾಗವಾಗಿರಲಿವೆ.
ವೆಸ್ಟ್ ಇಂಡೀಸ್ ಮೊದಲಿಗೆ ನೆದರ್ಲೆಂಡ್ಸ್ ಪ್ರವಾಸವನ್ನು ಕೈಗೊಳ್ಳಲಿದ್ದು ಮೇ 31, ಜೂನ್ 2 ಮತ್ತು ಜೂನ್ 4ರಂದು ಏಕದಿನ ಪಂದ್ಯಗಳು ಜರುಗಲಿವೆ. ಇನ್ನು ವೆಸ್ಟ್ ಇಂಡೀಸ್ ಮತ್ತು ನೆದರ್ಲೆಂಡ್ಸ್ ತಂಡಗಳು ಇದೇ ಚೊಚ್ಚಲ ಬಾರಿಗೆ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ.
ನೆದರ್ಲೆಂಡ್ಸ್ ಪ್ರವಾಸ ಮುಕ್ತಾಯಗೊಂಡ ನಂತರ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸವನ್ನು ಕೈಗೊಳ್ಳಲಿದ್ದು, ಪಾಕ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಜೂನ್ 8ರಂದು ಆರಂಭವಾಗಿ ಜೂನ್ 12ರಂದು ಮುಕ್ತಾಯಗೊಳ್ಳಲಿದೆ. ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಎಲ್ಲಾ 3 ಪಂದ್ಯಗಳು ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ವೆಸ್ಟ್ ಇಂಡೀಸ್ ತಂಡ: ನಿಕೋಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ನ್ಕ್ರುಮಾ ಬೊನ್ನರ್, ಶಮರ್ ಬ್ರೂಕ್ಸ್, ಕೀಸಿ ಕಾರ್ಟಿ, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಶೆರ್ಮನ್ ಲೆವಿಸ್, ಕೈಲ್ ಮೇಯರ್ಸ್, ಆಂಡರ್ಸನ್ ಫಿಲಿಪ್, ರೋವ್‌ಮನ್ ಪೊವೆಲ್, ಜೇಡನ್ ಸೀಲ್ಸ್, ರೊಮರಿಯೊ ಶೆಫರ್ಡ್ ಮತ್ತು ಹೇಡನ್ ವಾಲ್ಷ್ ಜೂ.
ಜೇಸನ್ ಹೋಲ್ಡರ್ ಹೊರಕ್ಕೆ, ಶಿಮ್ರಾನ್ ಹೆಟ್ಮಾಯರ್‌ಗಿಲ್ಲ ಸ್ಥಾನ
ಪಾಕ್ ಮತ್ತು ನೆದರ್ಲೆಂಡ್ಸ್ ಪ್ರವಾಸಕ್ಕೆ ಪ್ರಕಟವಾಗಿರುವ ವೆಸ್ಟ್ ಇಂಡೀಸ್ 15 ಆಟಗಾರರ ಏಕದಿನ ತಂಡದಲ್ಲಿ ಸ್ಫೋಟಕ ಆಟಗಾರ ಶಿಮ್ರಾನ್ ಹೆಟ್ಮೆಯರ್ ಅವರಿಗೆ ಸ್ಥಾನವನ್ನು ನೀಡಿಲ್ಲ. ಸದ್ಯ ಉತ್ತಮ ಫಾರ್ಮ್ ಹೊಂದಿದ್ದರೂ ಸಹ ಶಿಮ್ರಾನ್ ಹೆಟ್ಮಾಯೆರ್ ಅವರಿಗೆ ಸ್ಥಾನ ಸಿಗದೇ ಇರುವುದು ಆಶ್ಚರ್ಯವನ್ನು ಮೂಡಿಸಿದೆ. ಇನ್ನು ತಂಡದ ಮತ್ತೋರ್ವ ಪ್ರಮುಖ ಆಟಗಾರ ಜೇಸನ್ ಹೋಲ್ಡರ್ ವಿಶ್ರಾಂತಿಗೆಂದು ಹೊರಗುಳಿದಿದ್ದಾರೆ. ಹಾಗೂ ಜೇಡನ್ ಸೀಲ್ಸ್ ಈ ಸರಣಿಗಳ ಮೂಲಕ ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications