ಅಫ್ಘಾನಿಸ್ತಾನ ಸೋಲಿಸಿ 5 ವರ್ಷಗಳ ಕೆಟ್ಟ ದಾಖಲೆ ಕೊನೆಗೊಳಿಸಿದ ವಿಂಡೀಸ್!

ಲಕ್ನೋ, ನವೆಂಬರ್ 10: ಲಕ್ನೋದಲ್ಲಿರುವ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಶನಿವಾರ (ನವೆಂಬರ್ 9) ನಡೆದ ಅಫ್ಘಾನಿಸ್ತಾನ vs ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ಪಡೆ 47 ರನ್ ಸುಲಭ ಜಯ ಗಳಿಸಿದೆ.
ಲಕ್ನೋ ಪಂದ್ಯದ ಜಯದೊಂದಿಗೆ ವೆಸ್ಟ್ ಇಂಡೀಸ್ ತಂಡ, 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಸಾಧಿಸಿದೆ. ಅಂದ್ಹಾಗೆ ವಿಂಡೀಸ್ ತಂಡಕ್ಕೆ ಸುಮಾರು 5 ವರ್ಷಗಳ ಬಳಿಕ ಲಭಿಸುತ್ತಿರುವ ಮೊದಲ ಏಕದಿನ ಸರಣಿ ಗೆಲುವಿದು. ಈ ಐದು ವರ್ಷಗಳ ಅವಧಿಯಲ್ಲಿ ವಿಂಡೀಸ್ ಏಕದಿನ ಸರಣಿಗಳನ್ನು ಸೋಲುತ್ತಾ ಬಂದಿತ್ತು.
ಆಗಸ್ಟ್ 2014ರ ಬಳಿಕ ಶನಿವಾರದ (ನವೆಂಬರ್ 9) ವರೆಗೂ ವಿಂಡೀಸ್, ಏಕದಿನ ಸರಣಿ ಗೆದ್ದಿರಲಿಲ್ಲ. ಅಂದರೆ ಇಲ್ಲೀವರೆಗೆ ವೆಸ್ಟ್ ಇಂಡೀಸ್ ಒಟ್ಟಿಗೆ 21 ಸರಣಿಗಳನ್ನು ಸೋತಿತ್ತು. ಮತ್ತೊಂದೆಡೆ ಎದುರಾಳಿ ಅಫ್ಘಾನಿಸ್ತಾನ ತಂಡ ಈ ಪಂದ್ಯದ ಸೋಲಿನೊಂದಿಗೆ ಸತತ 11 ಏಕದಿನ ಪಂದ್ಯಗಳನ್ನು ಸೋತಂತಾಗಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ತಂಡ, ಶೈ ಹೋಪ್ 43, ಎವಿನ್ ಲೆವಿಸ್ 54, ಶ್ರಿಮ್ ಹೆಟ್ಮೈಯರ್ 34, ನಿಕೋಲಸ್ ಪೂರನ್ 67 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 247 ರನ್ ಮಾಡಿತು. ಈ ವೇಳೆ ನವೀನ್ ಉಲ್ ಹಕ್ 3 ವಿಕೆಟ್ ಪಡೆದು ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications